Viral Video: ಕಾರಿಗೆ ಒಂದು ರೂಪಾಯಿ ನಾಣ್ಯದ ಸಿಂಗಾರ- ಯುವಕನ ಕ್ರಿಯೆಟಿವಿಟಿಗೆ ನೆಟ್ಟಿಗರು ಫಿದಾ..!
ರಾಜಾಸ್ಥಾನದ ಯುವಕ ಮಾರುತಿ ಡಿಸೈನರ್ ಕಾರಿಗೆ ಹೊರಭಾಗದಲ್ಲಿ ಈ ನಾಣ್ಯಗಳನ್ನು ಹೊದಿಕೆಗಳಂತೆ ಅಲಂಕರಿಸಿದ್ದು ಕಾರಿನ ಮುಂಭಾಗದಿಂದ ಹಿಂಭಾಗದವರೆಗೂ ಒಂದು ರೂಪಾಯಿ ನಾಣ್ಯವನ್ನು ಅತ್ಯಂತ ಕ್ರಮಬದ್ಧವಾಗಿ ಜೋಡಿಸಿ ಅಲಂಕರಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಮೂಲಕ ಒಂದು ರೂಪಾಯಿ ನಾಣ್ಯದ ಕಾರು ಎಂದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹೆಚ್ಚು ವೈರಲ್ ಆಗಿದೆ.

ನಾಣ್ಯಗಳಿಂದ ಕಾರನ್ನು ಸಿಂಗರಿಸಿದ ಯುವಕ

ಜೈಪುರ: ಸಾಮಾನ್ಯವಾಗಿ ನಾಣ್ಯವನ್ನು ಸಂಗ್ರಹಿಸಿ ತಮಗಿಷ್ಟದ ವಸ್ತು ಬೈಕ್ ಕಾರು ಖರೀದಿಸಿದವರನ್ನು ನೀವು ನೋಡಿರುತ್ತೀರಿ ಆದರೆ ಇಲ್ಲೊಬ್ಬ ಯುವಕ ನಾಣ್ಯವನ್ನು ಕೂಡಿಸಿ ಬೈಕ್, ಕಾರು ಖರೀದಿಸಿಲ್ಲ. ಬದಲಾಗಿ ನಾಣ್ಯದಿಂದಲೇ ತನ್ನ ಕಾರನ್ನು ಅಲಂಕಾರ ಮಾಡಿದ್ದಾನೆ. ಕಾರಿನ ತುಂಬಾ ಒಂದು ರೂಪಾಯಿ ನಾಣ್ಯವನ್ನು ಅಂಟಿಸಿ ಈತ ಗಮನ ಸೆಳೆದಿದ್ದಾನೆ. ಈ ಯುವಕನ ಕ್ರಿಯಾತ್ಮಕ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಸುಮಾರು 10,000 ರೂಪಾಯಿ ಮೌಲ್ಯದ ಒಂದು ರೂಪಾಯಿ ನಾಣ್ಯವನ್ನು ಬಳಸಿ 4 ಗಂಟೆಗಳ ಕಾಲ ಶ್ರಮ ವಹಿಸಿ ಕಾರ್ ಮೇಲೆ ನಾಣ್ಯಗಳನ್ನು ಜೋಡಿಸಿದ್ದಾನೆ. ಸದ್ಯ ಈ ವಿಡಿಯೊ ಭಾರಿ ವೈರಲ್(Viral Video) ಆಗಿದ್ದು ನೆಟ್ಟಿಗರು ಯುವಕನ ಕ್ರಿಯಾತ್ಮಕ ಕಲೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ನಾಣ್ಯವನ್ನು ಕೂಡಿಟ್ಟು ಕೆಲವೊಂದು ಅಲಂಕಾರಿಕ ವಸ್ತುಗಳನ್ನ ತಯಾರು ಮಾಡುವುದು ಸಾಮಾನ್ಯ ಆದರೆ ಇಲ್ಲಿ ಯುವಕ ಸಂಗ್ರಹಿಸಿದ್ದ ನಾಣ್ಯದಿಂದ ಕಾರಿನ ಅಲಂಕಾರ ಮಾಡಿದ್ದಾನೆ. ರಾಜಸ್ತಾನದ ಯುವಕ ಈ ರೀತಿ ನಾಣ್ಯದಿಂದ ಕಾರನ್ನು ಅಲಂಕರಿಸಿದ್ದಾನೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ಗಮನ ಸೆಳೆಯುತ್ತಿದೆ.
ರಾಜಾಸ್ಥಾನದ ಯುವಕ ಮಾರುತಿ ಡಿಸೈನರ್ ಕಾರಿಗೆ ಹೊರ ಭಾಗದಲ್ಲಿ ಈ ನಾಣ್ಯಗಳನ್ನು ಹೊದಿಕೆಗಳಂತೆ ಅಲಂಕರಿಸಿದ್ದು, ಕಾರಿನ ಮುಂಭಾಗದಿಂದ ಹಿಂಭಾಗದವರೆಗೂ ಒಂದು ರೂಪಾಯಿ ನಾಣ್ಯವನ್ನು ಅತ್ಯಂತ ಕ್ರಮಬದ್ಧವಾಗಿ ಜೋಡಿಸಿ ಅಲಂಕರಿಸಿರುವುದನ್ನು ವಿಡಿಯೊ ದಲ್ಲಿ ನೋಡಬಹುದು. ಈ ಮೂಲಕ ಒಂದು ರೂಪಾಯಿ ನಾಣ್ಯದ ಕಾರು ಎಂದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹೆಚ್ಚು ವೈರಲ್ ಆಗಿದೆ. ಸರಿ ಸುಮಾರು 1.25 ಲಕ್ಷಕ್ಕೂ ಅಧಿಕ ವ್ಯೂವ್ಸ್ ಗಳಿಸಿದ್ದು ಯುವಕನ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇದನ್ನು ಓದಿ: Viral Video: ಮುನ್ನಾರ್‌ನಲ್ಲಿ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ- ಪ್ರಯಾಣಿಕರ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತ
ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದು ಯುವಕನ ಕ್ರಿಯೇಟಿವ್ ಯೋಚನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ನೆಟ್ಟಿಗರೊಬ್ಬರು ಇದೊಂದು ಕ್ರಿಯಾಶೀಲತೆಯ ಕೆಲಸ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರನು ಯುವಕನ ಶ್ರಮ ಕಾರನ್ನು ಮತ್ತಷ್ಟು ಅಂದವಾಗಿಸಿದೆ ಎಂದು ಪ್ರತಿಕ್ರಿಯೆ ನೀಡಿ ದ್ದಾರೆ. ಸದ್ಯ ಈ ವಿಡಿಯೊ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.