ಸೀಟ್ ಆಕ್ರಮಿಸಿ ಪದೇ ಪದೆ ಮಹಿಳೆಯನ್ನು ಸ್ಪರ್ಶಿಸಿದ ಪ್ರಯಾಣಿಕ: ವಿಡಿಯೊ ವೈರಲ್
Viral News: ಅಮೆರಿಕದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಪ್ರಯಾಣಿಕನಿಂದ ಉಂಟಾದ ಕಿರಿಕಿರಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೀಟ್ ಅಪ್‌ಗ್ರೇಡ್‌ಗಾಗಿ ಹೆಚ್ಚುವರಿ ಹಣ ಪಾವತಿಸಿದ ಕಾರಣ ಕಿಟಕಿಯ ಪಕ್ಕದ ಸೀಟು ಸಿಕ್ಕಿತ್ತು. ಆದರೆ ಅವರ ಪಕ್ಕ ಕುಳಿತಿದ್ದ ವ್ಯಕ್ತಿಯೊಬ್ಬ ತಮ್ಮ ಸೀಟಿನ ಅರ್ಧದಷ್ಟು ಜಾಗವನ್ನು ಆಕ್ರಮಿಸಿಕೊಂಡು ಪದೇ ಪದೆ ಸ್ಪರ್ಶಿಸುತ್ತಿದ್ದ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ -
ವಾಷಿಂಗ್ಟನ್, ಅ. 4: ಇತ್ತೀಚೆಗೆ ಸಾರ್ವಜನಿಕ ವಸ್ತುಗಳನ್ನು ಕೆಲವರು ತಮ್ಮದೇ ಆಸ್ತಿ ಎಂಬಂತೆ ಪ್ರತಿಬಿಂಬಿಸುವುದು ಹೆಚ್ಚಾಗಿದೆ. ಇದೀಗ ಅಮೆರಿಕದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಪ್ರಯಾಣಿಕನಿಂದ ಉಂಟಾದ ಕಿರಿಕಿರಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಹಂಚಿಕೊಂಡಿದ್ದಾರೆ. ಸೀಟ್ ಅಪ್‌ಗ್ರೇಡ್‌ಗಾಗಿ ಹೆಚ್ಚುವರಿ ಹಣ ಪಾವತಿಸಿದ್ದರಿಂದ ಕಿಟಕಿಯ ಪಕ್ಕದ ಸೀಟು ಸಿಕ್ಕಿತ್ತು. ಆದರೆ ಪಕ್ಕ ಕುಳಿತಿದ್ದ ವ್ಯಕ್ತಿಯೊಬ್ಬ ಸೀಟಿನ ಅರ್ಧದಷ್ಟು ಜಾಗವನ್ನು ಆಕ್ರಮಿಸಿಕೊಂಡು ಪದೇ ಪದೆ ಸ್ಪರ್ಶಿಸುತ್ತಿದ್ದ ಎಂದು ಬೇಸರ ಹೊರ ಹಾಕಿದ್ದಾರೆ.
ಬ್ರಿಯಾನಾ ಮೊರೆಲ್ಲೊ ಎಂಬ ಯುವತಿ ವಿಮಾನದಲ್ಲಿ ಪ್ರಯಾಣ ಮಾಡಲು ಕಿಟಕಿ ಪಕ್ಕ ಸೀಟ್ ಆರಿಸಿಕೊಂಡಿದ್ದರು. ಅವರು ತಮ್ಮ ತೂಕ 54 ಕೆಜಿ ಎಂದು ಹೇಳಿಕೊಂಡಿದ್ದು ಅವರ ಪಕ್ಕ ಸುಮಾರು 136 ಕೆಜಿ ತೂಕದ ವ್ಯಕ್ತಿ ಕುಳಿತಿದ್ದಾಗಿ ತಿಳಿಸಿದ್ದಾರೆ. ಸೀಟ್ ಅಪ್‌ಗ್ರೇಡ್‌ಗಾಗಿ ಹೆಚ್ಚುವರಿ ಹಣ ಪಾವತಿಸಿದ್ದರೂ, ಪಕ್ಕದ ಪ್ರಯಾಣಿಕ ತಮ್ಮ ಜಾಗದ ಒಂದು ಭಾಗವನ್ನು ಆಕ್ರಮಿಸಿಕೊಂಡಿದ್ದ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈರಲ್ ಪೋಸ್ಟ್:
We need to have a serious conversation about overweight people flying on commercial airlines. I’m flying on @AmericanAir and after paying extra money to upgrade my seat, I got stuck next to a man who is 300+ pounds and stripped mid flight. None of the flight attendants wanted to confront him. He smells like 💩 and weed. He’s literally sitting in my seat and keeps touching me. For context, he’s literally 300+ pounds and I’m 120. Why does American Airlines think it’s acceptable to treat people this way?! I tried reaching out discreetly during the flight, but they have no avenues to do that.
— Breanna Morello (@BreannaMorello) October 2, 2026
ಕೇವಲ ತನ್ನ ಸೀಟು ಆಕ್ರಮಿಸಿಕೊಂಡಿದ್ದು ಮಾತ್ರವಲ್ಲ ಆ ವ್ಯಕ್ತಿ ತನ್ನ ಶರ್ಟ್‌ನ ಬಟನ್ ಬಿಚ್ಚಿದ್ದ. ಗಾಂಜಾ ದುರ್ವಾಸನೆ ಬರುತ್ತಿದ್ದುದಲ್ಲೆ ಪದೇ ಪದೆ ತಮ್ಮನ್ನು ಸ್ಪರ್ಶಿಸುತ್ತಿದ್ದ ಎಂದು ಬ್ರಿಯಾನಾ ಮೊರೆಲ್ಲೊ ಆರೋಪಿಸಿದ್ದಾರೆ. ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿದರೂ, ಅವರು ಆ ವ್ಯಕ್ತಿಯನ್ನು ಪ್ರಶ್ನಿಸಲು ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಖಾಸಗಿಯಾಗಿ ದೂರು ನೀಡಲು ಯಾವುದೇ ಮಾರ್ಗವಿರಲಿಲ್ಲ ಎಂದು ಬ್ರಿಯಾನಾ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪೋಸ್ಟ್ 12 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಕೆಲವರು ಹೆಚ್ಚು ತೂಕವಿದ್ದಾಗ ಕಡ್ಡಾಯವಾಗಿ ಎರಡು ಸೀಟ್‌ಗಳನ್ನು ಕಾಯ್ದಿರಿಸಬೇಕು ಅಂದಿದ್ದಾರೆ. ಮತ್ತೊಬ್ಬರು ಇನ ವಿಮಾನಯಾನ ಸಂಸ್ಥೆಗಳ ವಿರುದ್ದ ಕಿಡಿಕಾರಿದ್ದಾರೆ.