ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇದೇನ ಸಂಸ್ಕೃತಿ? ಇದೇನ ಸಭ್ಯತೆ? ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಪಾನಮತ್ತ ಬಿಜೆಪಿ ಮುಖಂಡ

Viral Video: ಬಿಜೆಪಿ ನಾಯಕನೊಬ್ಬ 25 ವರ್ಷದ ಮಹಿಳೆ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಮಧ್ಯ ಪ್ರದೇಶದ ಸತ್ನಾದಲ್ಲಿ ನಡೆದಿದೆ. ಆರೋಪಿಯನ್ನು ನಾಗೋಡ್‌ ಮಂಡಲ್‌ನ ಬಿಜೆಪಿ ಮುಖಂಡ ಪುಲ್ಕಿತ್‌ ಟಂಡನ್‌ ಎಂದು ಗುರುತಿಸಲಾಗಿದೆ. ಗೋಡೌನ್‌ನಲ್ಲಿ ಮದ್ಯ ಸೇವಿಸಿದ್ದನ್ನು ನೋಡಿದ್ದರಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಬಿಜೆಪಿ ಮುಖಂಡನಿಂದ ಮಹಿಳೆಯ ಮೇಲೆ ಹಲ್ಲೆ

ಮಧ್ಯ ಪ್ರದೇಶದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಮುಖಂಡ -

Ramesh B
Ramesh B Jan 29, 2026 8:12 PM

ಭೋಪಾಲ್‌, ಜ. 29: ಮಧ್ಯ ಪ್ರದೇಶದ ಸಾತ್ನಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬಿಜೆಪಿ ನಾಯಕನೊಬ್ಬ 25 ವರ್ಷದ ಮಹಿಳೆ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ (Crime News). ಸಾರ್ವಜನಿಕ ಸ್ಥಳದಲ್ಲಿ ಆತ ಹಲ್ಲೆ ನಡೆಸಿದ್ದು ವಿಡಿಯೊದಲ್ಲಿ ಸೆರೆಯಾಗಿದೆ. ಆರೋಪಿಯನ್ನು ನಾಗೋಡ್‌ ಮಂಡಲ್‌ನ ಬಿಜೆಪಿ ಮುಖಂಡ ಪುಲ್ಕಿತ್‌ ಟಂಡನ್‌ ಎಂದು ಗುರುತಿಸಲಾಗಿದೆ. ಬ್ಯೂಟಿ ಪಾರ್ಲರ್‌ ಹೊಂದಿರುವ ಮಹಿಳೆ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯನ್ನೂ ಒಡ್ಡಿದ್ದು, ವಿಡಿಯೊ ವೈರಲ್‌ (Viral Video) ಆಗಿದೆ. ಸದ್ಯ ಈ ಘಟನೆ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಬಿರುಸಿನ ಚರ್ಚೆಗೆ ಕಾರಣವಾಗಿದೆ.

ಮಹಿಳೆಯರ ಘನತೆ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬಿಜೆಪಿಯಿಂದಲೇ ಹೆಣ್ಣು ಮಗಳೊಬ್ಬಳಿಗೆ ಅವಮಾನವಾಗಿದೆ. ಆಕೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಕೈ ಪಡೆ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಮೂಲಗಳ ಪ್ರಕಾರ ಮಂಗಳವಾರ (ಜನವರಿ 27) ಸಂಜೆ ಈ ಘಟನೆ ನಡೆದಿದೆ. ವಿಡಿಯೊ ಬೆಳಕಿಗೆ ಬರುತ್ತಿದ್ದಂತೆ ಸತ್ನಾ ಜಿಲ್ಲೆಯ ಬಿಜೆಪಿ ಮುಖಂಡ ರಮಾಕಾಂತ್‌ ಗೌತಮ್‌ ಕಾರಣ ಕೇಳಿ ಟಂಡನ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಜತೆಗೆ ವಾರದೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದ್ದಾರೆ.

ಮಹಿಳೆ ಮೇಲೆ ಬಿಜೆಪಿ ಮುಖಂಡ ಹಲ್ಲೆ ನಡೆಸಿದ ದೃಶ್ಯ:



ವಿಡಿಯೊ ಹಂಚಿಕೊಂಡ ಕಾಂಗ್ರೆಸ್‌

ಸದ್ಯ ಕಾಂಗ್ರೆಸ್‌ ಈ ವಿಡಿಯೊವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಬಿಜೆಪಿ ವಿರುದ್ಧ ಹರಿಹಾಯ್ದಿದೆ. ʼʼಮಹಿಳೆಯನ್ನು ಅಟ್ಟಾಡಿಸಿ ಬಿಜೆಪಿ ಮಂಡಲ ಅಧ್ಯಕ್ಷ ಪುಲ್ಕಿತ್‌ ಟಂಡನ್‌ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆ ರಾಡ್‌ ತುಂಬಿದ ನೆಲದ ಮೇಲೆ ಬಿದ್ದರೂ ಸುಮ್ಮನಾಗದ ಪುಲ್ಕಿತ್‌ ರಾಕ್ಷಸೀ ಕೃತ್ಯವನ್ನು ಮುಂದುವರಿಸಿದ್ದಾರೆ. ಮಾತ್ರವಲ್ಲ ಮಹಿಳೆ ಮತ್ತು ಅವರ ಪುತ್ರಿಗೂ ಬೆದರಿಕೆ ಹಾಕಿದ್ದಾರೆʼʼ ಎಂದು ಬರೆದುಕೊಂಡಿದೆ.

ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್‌; ಅಧಿಕಾರಿಯಿಂದಲೂ ನಡೆದಿತ್ತು ಹಲ್ಲೆ!

ನಾಗೋಡ್‌ ಸಬ್‌ ಡಿವಿಷನಲ್‌ ಪೊಲೀಸ್‌ ಆಫೀಸರ್‌ (SDOP) ರಘು ಕೇಸರಿ ಈ ಬಗ್ಗೆ ಮಾತನಾಡಿ ಮಹಿಳೆಯ ದೂರಿನ ಮೇರೆಗೆ ಟಂಡನ್‌ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ʼʼಟಂಡನ್‌ ಗೋಡೌನ್‌ನಲ್ಲಿ ಮದ್ಯ ಸೇವಿಸುತ್ತಿದ್ದ. ಇದನ್ನು ಗಮನಿಸಿದ ನನ್ನನ್ನು ಅಡ್ಡಗಟ್ಟಿದ. ಭಯಗೊಂಡು ಆತನ ಕೈಯಲ್ಲಿದ್ದ ಮೊಬೈಲ್‌ ಕಿತ್ತೆಸೆದು ಅಲ್ಲಿಂದ ಓದಿ ಹೋಗಲು ಯತ್ನಿಸಿದೆ. ಈ ವೇಳೆ ಆತ ನನ್ನ ಮೇಲೆ ಹಲ್ಲೆ ನಡೆಸಿದʼʼ ಎಂದು ಮಹಿಳೆ ಘಟನೆಯನ್ನು ವಿವರಿಸಿದ್ದಾರೆ.

ಟಂಡನ್‌ ಹಲ್ಲೆ ನಡೆಸಿದ್ದಲ್ಲದೆ ಕಬ್ಬಿಣದ ಸರಳುಗಳಿದ್ದ ನೆಲದ ಮೇಲೆ ದೂಡಿ ಥಳಿಸಿರುವುದಾಗಿ ಮಹಿಳೆ ಹೇಳಿದ್ದಾರೆ. ಈ ದೃಶ್ವೂ ವಿಡಿಯೊದಲ್ಲಿ ಸೆರೆಯಾಗಿದೆ. ಮಹಿಳೆಯ ಮನೆಯವರು ಸಹಾಯಕ್ಕೆ ಧಾವಿಸುವ ತನಕ ಟಂಡನ್‌ ಹಲ್ಲೇ ನಡೆಸುತ್ತಲೇ ಇದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟಂಡನ್‌ ಜತೆಗೆ ಆರ್‌.ಕೆ. ನಾಮ್‌ದೇವ್‌ ಎಂಬವರ ವಿರುದ್ಧವೂ ದೂರು ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ; ಕಮಿಷನರ್‌ ಸ್ಪಷ್ಟನೆ ಏನು?

ನೆಟ್ಟಿಗರಿಂದ ಆಕ್ರೋಶ

ಸದ್ಯ ಈ ಘಟನೆ ರಾಜಕೀಯ ವಲಯ ಮಾತ್ರವಲ್ಲ ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಗೆ ರಾಜಕೀಯ ಬೆರೆಸದೆ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.