ಮಾನವೀಯತೆ ಮರೆಯಾಗಿಲ್ಲ: ಇಂಧನ ಖಾಲಿಯಾದ ಅಂಬ್ಯುಲೆನ್ಸ್ ತಳ್ಳಿಕೊಂಡೇ ಆಸ್ಪತ್ರೆಗೆ ತಲುಪಿಸಿದ ಯುವಕರು!
Viral Video: ರೋಗಿಯೊಬ್ಬರನ್ನು ಆಸ್ಪತ್ರೆ ಗೆ ಕರೆದೊಯ್ಯುವ ಸಂದರ್ಭದಲ್ಲಿ ಅಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿಯಾದಾಗ ಅಲ್ಲಿದ್ದ ಬೈಕ್ ಸವಾರರು ಒಟ್ಟಾಗಿ ಅದನ್ನು ತಳ್ಳುವ ಮೂಲಕ ಮಾನವೀಯತೆ ಇನ್ನೂ ಒಳಿದುಕೊಂಡಿದೆ ಎನ್ನುವುದನ್ನು ಸಾರಿ ಹೇಳಿದ್ದಾರೆ. ಯುವಕರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಘಟನೆಯ ವಿಡಿಯೊ ವೈರಲ್ ಆಗಿದೆ.
ಅಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಯುವಕರು -
ದೆಹಲಿ, ಜ. 29: ಇಂದಿನ ಸ್ವಾರ್ಥ ಜಗತ್ತಿನಲ್ಲಿ ಸಹಾಯಕ್ಕೆ ನಿಲ್ಲೋರು ಕಡಿಮೆ ಎನ್ನುವ ಮಾತು ಎಲ್ಲೆ ಕೇಳಿ ಬರುತ್ತಿದೆ. ಇದು ನಿಜ ಕೂಡ. ಆದರೆ ದೆಹಲಿಯಲ್ಲಿ ಆದ ಈ ಘಟನೆ ಇನ್ನೂ ಮಾನವೀಯತೆ ಸಂಪೂರ್ಣ ಮರೆಯಾಗಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ. ರೋಗಿಯೊಬ್ಬರನ್ನು ಕರೆದೊಯ್ಯುವ ಸಂದರ್ಭದಲ್ಲಿ ಅಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿಯಾದಾಗ ಅಲ್ಲಿದ್ದ ಬೈಕ್ ಸವಾರರು ಒಟ್ಟಾಗಿ ಅದನ್ನು ತಳ್ಳಿ ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಿದ್ದಾರೆ. ಯುವಕರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಆಂಬ್ಯುಲೆನ್ಸ್ ಹತ್ತಿರದ ಆಸ್ಪತ್ರೆಗೆ ಹೋಗುತ್ತಿದ್ದಾಗ ಡೀಸೆಲ್ ಖಾಲಿಯಾಗಿದೆ. ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯ ಸ್ಥಿತಿ ಬಹಳಷ್ಟು ಗಂಭೀರವಾಗಿತ್ತು. ಅಂಬ್ಯುಲೆನ್ಸ್ ಮುಂದೆ ಚಲಿಸಲಾಗದೆ ಇದ್ದಾಗ ಚಾಲಕ ಸೇರಿದಂತೆ ರೋಗಿಯ ಬಂಧುಗಳು ತಲೆ ಮೇಲೆ ಕೈ ಹೊತ್ತು ಕೂತದ್ದರು. ಆಗ ಬೈಕ್ ನಲ್ಲಿದ್ದ ಯುವಕರ ಗುಂಪೊಂದು ಕಾರ್ಯಪ್ರವೃತ್ತವಾಗಿದೆ. ಭಾರವಾದ ಆ ವಾಹನವನ್ನು ಕಿಲೋ ಮೀಟರ್‌ಗಳವರೆಗೆ ತಳ್ಳಿಕೊಂಡು ಹೋಗುವ ಮೂಲಕ ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ರೋಗಿಯ ಪ್ರಾಣ ಉಳಿಸಿದೆ.
ವಿಡಿಯೊ ನೋಡಿ:
A group of bikers helped by pushing an AMBULANCE that had run out of diesel.
— Dr Ranjan (@AAPforNewIndia) January 28, 2026
Unfortunately, 80-90% of our country lacks ON-TIME ambulance services. pic.twitter.com/yCyefAnNTp
ಬೈಕ್ ಸವಾರರು ಹೆಣಗಾಡುತ್ತಿರುವ ವಾಹನವನ್ನು ನೋಡಿದ ತಕ್ಷಣ ಕಾರ್ಯನಿರ್ವಹಿಸಿದರು. ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ತಳ್ಳಲು ಅವರು ಒಟ್ಟಾಗಿ ತಳ್ಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಬೈಕ್ ಸವಾರರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.
Viral Video: ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಒಬ್ಬರು "ಇಂತಹ ಜನರ ಕಾರಣದಿಂದಾಗಿ ದೇಶವು ಧನಾತ್ಮಕ ದಾರಿಯಲ್ಲಿ ಸಾಗುತ್ತಿದೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೈಕರ್‌ಗಳ ಸಕಾಲಿಕ ಸಹಾಯಕ್ಕಾಗಿ ಅವರನ್ನು ಶ್ಲಾಘಿಸಿದ್ದು"ಭಾರತದಲ್ಲಿ ಸರಿಯಾದ ಆಂಬ್ಯುಲೆನ್ಸ್ ಸೇವೆಗಳು ಸಹ ಇಲ್ಲ" ಎಂದಿದ್ದಾರೆ.