ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜಿಂಕೆ ಬೇಟೆಗಾರರ ಬೆಂಡೆತ್ತಿದ ಪೊಲೀಸರು; ಕಠಿಣ ಕ್ರಮಕ್ಕೆ ಒತ್ತಾಯಿಸಿದ ಬಿಷ್ಣೋಯ್ ಸಮುದಾಯ

Viral Video: ಜಿಂಕೆಗಳನ್ನು ಬೇಟೆಯಾಡಲು 60 ಕಿ.ಮೀ. ದೂರ ಬೆನ್ನಟ್ಟಿ ಬಂದ ಆರು ಮಂದಿ ಬೇಟೆಗಾರರನ್ನು ರಾಜಸ್ಥಾನದ ಬಿಕಾನೇರ್ ಪೊಲೀಸರು ಸ್ಥಳೀಯ ನಿವಾಸಿಗಳ ಸಹಾಯದಿಂದ ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಥಳಿಸಿದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಮತ್ತೊಂದು ಜಿಂಕೆ ಬೇಟೆ ಪ್ರಕರಣ; ಬಿಷ್ಣೋಯ್ ಸಮುದಾಯ ಹೇಳಿದ್ದೇನು?

ಸಾಂದರ್ಭಿಕ ಚಿತ್ರ.

Profile pavithra Mar 11, 2025 7:49 PM

ಜೈಪುರ: ಕೃಷ್ಣ ಜಿಂಕೆಯನ್ನು ಬೇಟೆಯಾಡಿ ನಟ ಸಲ್ಮಾನ್‌ ಖಾನ್‌ (Salman Khan) ಬಿಷ್ಣೋಯ್‌ ಸಮುದಾಯದ ಕೋಪಕ್ಕೆ ತುತ್ತಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. ಜಿಂಕೆಯನ್ನು ಬೇಟೆಯಾಡಿ, ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿ, ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಮಂದಿಯನ್ನು ರಾಜಸ್ಥಾನದ ಬಿಕಾನೇರ್ ಪೊಲೀಸರು ಬಂಧಿಸಿದ್ದಾರೆ. ಜಿಂಕೆಗಳನ್ನು ಬೇಟೆಯಾಡಲು 60 ಕಿ.ಮೀ. ದೂರ ಬೆನ್ನಟ್ಟಿ ಬಂದ ಬೇಟೆಗಾರರನ್ನು ಪೊಲೀಸರು ಸ್ಥಳೀಯ ನಿವಾಸಿಗಳ ಸಹಾಯದಿಂದ ಹೆಡೆಮುರಿ ಕಟ್ಟಿದ್ದಾರೆ. ಶಂಕಿತರನ್ನು ಹಿಡಿದ ನಂತರ ಅವರನ್ನು ಥಳಿಸಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಬಿಷ್ಣೋಯ್ ಸಮುದಾಯವು ಬೇಟೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

"ಸ್ಟೀಟ್‌ ಡಾಗ್‌ ಆಫ್ ಬಾಂಬೆ" ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವನ್ಯಜೀವಿಗಳ ಬಗ್ಗೆ ಆಳವಾದ ಪ್ರೀತಿ ಮತ್ತು ರಕ್ಷಣೆಗೆ ಹೆಸರುವಾಸಿಯಾದ ಬಿಷ್ಣೋಯ್ ಸಮುದಾಯವು ಈ ಕೃತ್ಯವನ್ನು ಬಲವಾಗಿ ಖಂಡಿಸಿದೆ ಮತ್ತು ಬೇಟೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ ವಿಡಿಯೊ ಇಲ್ಲಿದೆ ನೋಡಿ

"ಅಕ್ರಮ ಬೇಟೆಯು ಪ್ರಕೃತಿಯ ವಿರುದ್ಧವಾದುದು ಮತ್ತು ಇದಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆ ವಿಧಿಸಬೇಕು. ಅರಣ್ಯವು ಅದರ ಸಂರಕ್ಷಕರಿಗೆ ಮಾತ್ರ ಸೇರಿದೆ, ಅದನ್ನು ನಾಶಮಾಡಲು ಪ್ರಯತ್ನಿಸುವವರಿಗೆ ಅಲ್ಲ! ನಮ್ಮ ವನ್ಯಜೀವಿಗಳನ್ನು ರಕ್ಷಿಸುವ ಹೋರಾಟದಲ್ಲಿ ನಾವು ಬಿಷ್ಣೋಯಿ ಸಮುದಾಯದೊಂದಿಗೆ ನಿಲ್ಲುತ್ತೇವೆ” ಎಂದು ಸ್ಥಳೀಯರು ತಿಳಿಸಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಜೀಪ್ ಮತ್ತು ಫಾರ್ಚೂನರ್ ಎಸ್‌ಯುವಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಹಿಡಿಯುವುದು ಸೆರೆಯಾಗಿದೆ. ಪೊಲೀಸರು ಅವರನ್ನು ಬೆನ್ನಟ್ಟಿಕೊಂಡು ಬಂದು ಕೊನೆಗೆ ಇಬ್ಬರು ಆರೋಪಿಗಳನ್ನು ಹಿಡಿದು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಅರಣ್ಯ ಇಲಾಖೆ ಅಕ್ರಮ ಬೇಟೆಗಾಗಿ ಪ್ರಕರಣ ದಾಖಲಿಸಿದೆ. ಬಂಧಿತರಿಂದ 12 ಬೋರ್ ಡಬಲ್ ಬ್ಯಾರೆಲ್ ಗನ್, .22 ರೈಫಲ್, ಪಿಸ್ತೂಲ್, 189 ಲೈವ್ ಕಾರ್ಟ್ರಿಜ್‍ಗಳು ಮತ್ತು ಒಂದು ಖಾಲಿ ಶೆಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಮಾರ್ಚ್ 1ರಂದು ನಡೆದಿದೆ ಎಂದು ವರದಿಯಾಗಿದೆ.

ಬಂಧಿತ ಆರೋಪಿಗಳನ್ನು ಸ್ನೇಹಬೀರ್ ಸಿಂಗ್ (ಈತ ಕೊಟ್ಕಾಪುರದ ಮಾಜಿ ಎಸ್ಎಡಿ ಶಾಸಕರ ಹತ್ತಿರದ ಸಂಬಂಧಿ ಎನ್ನಲಾಗಿದೆ). ಹಾಗೇ ಹರ್ಜಿತ್ ಸಿಂಗ್, ಸಾಹಿಲ್ ಕಟಾರಿಯಾ , ಸುಖ್ವಂತ್ ಸಿಂಗ್, ಸುಖ್ಜೀತ್ ಸಿಂಗ್ ಮತ್ತು ಗುರ್ಕೀರತ್ ಸಿಂಗ್ ಎಂಬುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:Salman Khan: ಕುಂತಲ್ಲಿ ನಿಂತಲ್ಲಿ ಸಲ್ಮಾನ್‌ಗೆ ಲಾರೆನ್ಸ್ ಬಿಷ್ಣೋಯ್ ಭಯ!

ಲಾರೆನ್ಸ್ ಬಿಷ್ಣೋಯ್ ಕೊಡ್ತಿರೋ ಕಾಟಕ್ಕೆ ತತ್ತರಿಸಿ ಹೋಗಿರೋ ಸಲ್ಮಾನ್ ಖಾನ್ ಅದ್ಯಾವಾಗ ತನ್ನ ಮೇಲೆ ಅಟ್ಯಾಕ್ ಆಗುತ್ತೋ ಅಂತ ಭಯಭೀತರಾಗಿದ್ದಾರೆ. ಅದ್ರಲ್ಲೂ ತಮ್ಮ ಸ್ನೇಹಿತ-ಮಾಜಿ ಶಾಸಕ ಬಾಬಾ ಸಿದ್ದಿಕಿ ಹತ್ಯೆ ನಂತರ ಸಲ್ಮಾನ್ ಖಾನ್ ಫುಲ್ ಅಲರ್ಟ್ ಅಗಿದ್ದಾರೆ. ಮನೆಯಿಂದ ಹೊರಬರೋದಕ್ಕೆ ಅವರು ಹಿಂದೇಟು ಹಾಕ್ತಾ ಇದ್ದಾರೆ. ಸರ್ಕಾರ ಸಲ್ಮಾನ್​ಗೆ ವೈ ಪ್ಲಸ್ ಭದ್ರತೆಯನ್ನ ಕೊಟ್ಟಿದೆ. ಬರೋಬ್ಬರಿ 25 ಸಿಬ್ಬಂದಿ, ಇಬ್ಬರು ಎನ್.ಎಸ್.ಜಿ. ಕಮಾಂಡೋಸ್ ಸಲ್ಮಾನ್ ಜೀವ ಕಾಯೋದಕ್ಕೆ ನೇಮಕ ಆಗಿದ್ದಾರೆ. ಇದಲ್ಲದೇ ಸಲ್ಮಾನ್​ಗೆ ಖಾಸಗಿ ಬಾಡಿಗಾರ್ಡ್ಸ್​ ಕೂಡ ಇದ್ದಾರೆ.