Salman Khan: ಕುಂತಲ್ಲಿ ನಿಂತಲ್ಲಿ ಸಲ್ಮಾನ್‌ಗೆ ಲಾರೆನ್ಸ್ ಬಿಷ್ಣೋಯ್ ಭಯ!
Salman Khan: ಕುಂತಲ್ಲಿ ನಿಂತಲ್ಲಿ ಸಲ್ಮಾನ್‌ಗೆ ಲಾರೆನ್ಸ್ ಬಿಷ್ಣೋಯ್ ಭಯ!

ಲಾರೆನ್ಸ್ ಬಿಷ್ಣೋಯ್ (Lawrence Bishnoi) ಕೊಡ್ತಿರೋ ಕಾಟಕ್ಕೆ ತತ್ತರಿಸಿ ಹೋಗಿರೋ ಸಲ್ಮಾನ್ ಖಾನ್ (Salman Khan) ಅದ್ಯಾವಾಗ ತನ್ನ ಮೇಲೆ ಅಟ್ಯಾಕ್ (Attack) ಆಗುತ್ತೋ ಅಂತ ಭಯಭೀತರಾಗಿದ್ದಾರೆ. ಅದ್ರಲ್ಲೂ ತಮ್ಮ ಸ್ನೇಹಿತ-ಮಾಜಿ ಶಾಸಕ ಬಾಬಾ ಸಿದ್ದಿಕಿ ಹತ್ಯೆ ನಂತ್ರ ಸಲ್ಮಾನ್ ಖಾನ್ ಫುಲ್ ಅಲರ್ಟ್ ಅಗಿದ್ದಾರೆ.
ಬಾಲಿವುಡ್ (Bollywood) ಟೈಗರ್ ಸಲ್ಮಾನ್ ಖಾನ್‌ಗೆ ಅದ್ಯಾಪರಿಯ ಪ್ರಾಣಭೀತಿ ಕಾಡ್ತಾ ಇದೆ ಅಂದ್ರೆ ಮನೆಯಿಂದ ಹೊರಬರೋದಕ್ಕೆ ಅವರು ಹಿಂದೇಟು ಹಾಕ್ತಾ ಇದ್ದಾರೆ. ಸರ್ಕಾರ ಸಲ್ಮಾನ್‌ಗೆ ವೈ ಪ್ಲಸ್ ಭದ್ರತೆಯನ್ನ ಕೊಟ್ಟಿದೆ. ಬರೋಬ್ಬರಿ 25 ಸಿಬ್ಬಂದಿ, ಇಬ್ಬರು ಎನ್.ಎಸ್.ಜಿ ಕಮಾಂಡೋಸ್ ಸಲ್ಮಾನ್ ಜೀವ ಕಾಯೋದಕ್ಕೆ ನೇಮಕ ಆಗಿದ್ದಾರೆ. ಇದಲ್ಲದೇ ಸಲ್ಮಾನ್‌ಗೆ ಖಾಸಗಿ ಬಾಡಿಗಾರ್ಡ್ಸ್ ಕೂಡ ಇದ್ದಾರೆ.
ಇಷ್ಟೆಲ್ಲಾ ಸೆಕ್ಯೂರಿಟಿ ಇದ್ದರೂ ಸಲ್ಲು ಬಾಯ್ ಅವರ ಸಿನಿಮಾ ಶೂಟಿಂಗ್‌ಗೆ ಎಂಟ್ರಿ ಕೊಟ್ಟ ಆರೋಪಿ ಒಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ಅನುಮಾನಾಸ್ಪದ ವ್ಯಕ್ತಿಯೊಬ್ಬ ಸೂಪರ್ ಸ್ಟಾರ್ ಶೂಟಿಂಗ್ ಸ್ಥಳಕ್ಕೆ (Shooting Location) ಏಕಾಕ್ಕಿ ನುಗ್ಗಿದ್ದು, ಅಷ್ಟೇ ಅಲ್ಲದೇ ಲಾರೆನ್ಸ್ ಬಿಷ್ಣೋಯ್ ಹೆಸರೇಳಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ವಿಚಾರಣೆಯ ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಬಂದ ಅಪರಿಚಿತ ವ್ಯಕ್ತಿಯನ್ನು ನೀವು ಯಾರು? ಯಾಕೆ ಬಂದೆ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆ ಆತ ಲಾರೆನ್ಸ್ ಬಿಷ್ಣೋಯ್ ಗೆ ಫೋನ್ ಮಾಡ್ಬೇಕಾ? ಆತನಿಗೆ ಏನು ಹೇಳ್ಬೇಕು ಎಂದೆಲ್ಲಾ ಹೇಳಿದ್ದಾನೆ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆ ವ್ಯಕ್ತಿಯನ್ನು ಬಂಧಿಸಿರುವ ಶಿವಾಜಿ ಪಾರ್ಕ್ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣದ ಕುರಿತು ಮುಂಬೈ ಪೊಲೀಸರು ಕೂಡ ಮಾಹಿತಿ ನೀಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಶೂಟಿಂಗ್ ಸ್ಥಳಕ್ಕೆ ವ್ಯಕ್ತಿಯೊಬ್ಬ ಅನುಮತಿಯಿಲ್ಲದೆ ಪ್ರವೇಶಿಸಿದ್ದಾನೆ. ಅನುಮಾನ ಬಂದ ಕಾರಣ ಅವರನ್ನು ವಿಚಾರಿಸಿದಾಗ, ‘ಬಿಷ್ಣೋಯಿಗೆ ಕರೆ ಮಾಡಬೇಕಾ?’ ಎಂದ. ವ್ಯಕ್ತಿಯನ್ನು ವಿಚಾರಣೆಗಾಗಿ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ?. ಸಲ್ಮಾನ್ ಖಾನ್‌ಗೆ ಯಾರೆ ಬೆದರಿಕೆ ಹಾಕಿದರೂ ಕೂಡ ಅದಕ್ಕೆ ಲಾರೆನ್ಸ್ ಬಿಷ್ಣೋಯಿ ಅವರನ್ನು ದೂಷಿಸಲಾಗುತ್ತಿದೆ.
ಇದನ್ನೂ ಓದಿ: Keerthy Suresh : ಕೀರ್ತಿ ಸುರೇಶ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್ , ಗೋವಾದಲ್ಲಿ ನಡೆಯಲಿದೆ ಅದ್ಧೂರಿ ಮದುವೆ!
ಸದ್ಯ ನಟ ಸಲ್ಮಾನ್ ಖಾನ್ ಅವರು ಸದ್ಯ ಸಿಕಿಂದರ್ ಸಿನಿಮಾದ ಶ್ಯೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಒಂದು ಕಡೆ ಬಿಗ್ ಬಾಸ್ ನಿರೂಪಣೆಯನ್ನು ಕೂಡ ಮಾಡುತ್ತಿದ್ದಾರೆ. ಇನ್ನೂ ಮಹಾರಾಷ್ಟ್ರ ಮಾಜಿ ಶಾಸಕ, ಸಲ್ಲು ಆಪ್ತ ಬಾಬಾ ಸಿದ್ದಿಕಿ ಮರ್ಡರ್ ನಂತ್ರ ಸಲ್ಮಾನ್ ಮತ್ತಷ್ಟು ಭಯಗೊಂಡಿದ್ದಾರೆ. ಅದ್ಯಾವಾಗ ಆದ್ಯಾವ ಮೂಲೆಯಿಂದ ಗುಂಡು ಸಿಡಿಯುತ್ತೋ.. ತನ್ನ ಎದೆಯನ್ನ ಸೀಳುತ್ತೋ ಅಂತ ಸಲ್ಮಾನ್ ಟೆನ್ಶನ್ ಆಗಿದ್ದಾರೆ. ಅದಕ್ಕಂತ್ಲೇ ಸದ್ಯ ತಮ್ಮ ಸುರಕ್ಷಿತ ಪ್ರಯಾಣಕ್ಕಾಗಿ ಹೊಚ್ಚ ಹೊಸ ಕಾರ್ವೊಂದನ್ನ ತರಿಸಿಕೊಂಡಿದ್ದಾರೆ.
ಅತ್ಯಾಧುನಿಕ ಬುಲೆಟ್ ಪ್ರೂಫ್ ಕಾರ್ನಲ್ಲಿ ಓಡಾಡ್ತಾ ಇದ್ದಾರೆ. ಇನ್ನೂ ಇತ್ತೀಚಿಗೆ ಸಿಂಗಮ್ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಸಲ್ಮಾನ್ ಗೆ, ಸುತ್ತಲೂ ಬರೊಬ್ಬರಿ 120 ಜನ ಭದ್ರತಾ ಪಡೆಯಿಂದ ಸೆಕ್ಯೂರಿಟಿ ನೀಡಲಾಗಿತ್ತು. ಪೊಲೀಸರು, ಖಾಸಗಿ ಭದ್ರತಾ ಪಡೆ ಜೊತೆಗೆ ಸಿನಿಮಾ ತಂಡ ಕೂಡ ಬೌನ್ಸರ್ಗಳನ್ನ ಅರೇಂಜ್ ಮಾಡಿತ್ತು. ಈ ಭದ್ರತೆಯ ಕೋಟೆಯ ನಡೆವೆಯೇ ಸಲ್ಮಾನ್ ಚಿತ್ರೀಕರಣ ಮಾಡಿ ಮುಗಿಸಿದ್ರು. ಸದ್ಯ ಬಿಗ್ ಬಾಸ್ ಶೂಟಿಂಗ್ ಸೆಟ್ನಲ್ಲೂ ಸಲ್ಮಾನ್‌ಗೆ ಟೈಟ್ ಸೆಕ್ಯೂರಿಟಿ ನೀಡಲಾಗ್ತಾ ಇದೆ. ಜೊತೆಗೆ ಸದ್ಯದಲ್ಲೇ ಸಲ್ಮಾನ್ ನಟನೆಯ ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಲಿದ್ದು , ಸಿಕಂದರ್ ಟೀಮ್ ಕೂಡ ಭದ್ರತೆಗೆ ಪ್ರತ್ಯೇಕ ವ್ಯವಸ್ಥೆ ಮಾಡ್ತಾ ಇದೆ. ಹೌದು ಸಲ್ಮಾನ್ ಖಾನ್ ಮೇಲೆ ಯಾವಾಗ ಬೇಕಾದ್ರೂ ಅಟ್ಯಾಕ್ ಆಗುವ ಚಾನ್ಸ್ ಇರೋದ್ರಿಂದ , ಇಡೀ ಚಿತ್ರತಂಡ ಭೀತಿಯಲ್ಲಿ ಮುಳುಗಿದೆ.