Viral Video: ಅಜ್ಜಿಯ ಮನೆ ಬೆಳಗಲು ಈ ಪೊಲೀಸ್ ಅಧಿಕಾರಿ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
Police Officer Buys All Diyas: ದೇಶದೆಲ್ಲೆಡೆ ಜನರು ದೀಪಗಳ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವೃದ್ಧ ಮಹಿಳೆಯೊಬ್ಬರಿಂದ ಎಲ್ಲಾ ಮಣ್ಣಿನ ದೀಪಗಳನ್ನು ಅಧಿಕಾರಿ ಖರೀದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

-

ಲಖನೌ: ದೇಶದೆಲ್ಲೆಡೆ ದೀಪಾವಳಿ (Diwali) ಹಬ್ಬದ ಸಂಭ್ರಮ ಮನೆಮಾಡಿದೆ. ದೀಪಗಳು, ಪಟಾಕಿಗಳನ್ನು ಖರೀದಿಸುವ ಭರಾಟೆ ಜೋರಾಗಿದೆ. ಈ ನಡುವೆ ಉತ್ತರ ಪ್ರದೇಶದ (Uttar Pradesh) ಪೊಲೀಸ್ ಅಧಿಕಾರಿಯೊಬ್ಬರು ಮಾಡಿರುವ ಕಾರ್ಯ ಎಲ್ಲರ ಗಮನಸೆಳೆದಿದೆ. ವೃದ್ಧ ಮಹಿಳೆಯೊಬ್ಬರಿಂದ ಎಲ್ಲಾ ಮಣ್ಣಿನ ದೀಪಗಳನ್ನು ಅಧಿಕಾರಿ ಖರೀದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Viral Video). ಸರಳ, ಅರ್ಥಪೂರ್ಣವಾದ ಕ್ರಿಯೆಯ ಮೂಲಕ ಹಬ್ಬದ ಸಂಭ್ರಮದ ನಡುವೆ ಸಂತೋಷವನ್ನು ಹಂಚಿದ್ದಕ್ಕಾಗಿ ನೆಟ್ಟಿಗರು ಪೊಲೀಸ್ ಅಧಿಕಾರಿಯನ್ನು ಶ್ಲಾಘಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಉತ್ತರ ಪ್ರದೇಶ ಪೊಲೀಸ್ ಅಧಿಕಾರಿ ವಿಜಯ್ ಗುಪ್ತಾ ಅವರು, ವೃದ್ಧ ಮಹಿಳೆಯೊಬ್ಬರು ಮಾರಾಟ ಮಾಡಲು ಕಷ್ಟಪಡುತ್ತಿದ್ದ ಎಲ್ಲಾ ಮಣ್ಣಿನ ದೀಪಗಳನ್ನು ಖರೀದಿಸುವ ಮೂಲಕ ದೀಪಾವಳಿಯನ್ನು ಸ್ಮರಣೀಯವನ್ನಾಗಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೊವನ್ನು @MeghUpdates ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ತಾಯಿಯ ಮಣ್ಣಿನ ದೀಪಗಳನ್ನು ಯಾರೂ ಖರೀದಿಸಲಿಲ್ಲ. ಇದನ್ನು ನೋಡಿದ ಸ್ಟೇಷನ್ ಇನ್ ಚಾರ್ಜ್ ವಿಜಯ್ ಗುಪ್ತಾ ಅವರು ಎಲ್ಲಾ ದೀಪಗಳನ್ನು ಖರೀದಿಸಿ ಅವರ ಅಂಗಡಿಯನ್ನು ಮಾತ್ರವಲ್ಲದೆ ಅವರ ಹೃದಯವನ್ನೂ ಬೆಳಗಿಸಿದರು. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಈ ಘಟನೆ ನಡೆದಿದೆ. ಈ ಹಬ್ಬದ ಋತುವಿನಲ್ಲಿ ನಮ್ಮ ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಲು ಮತ್ತು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಪ್ರತಿಜ್ಞೆ ಮಾಡೋಣ ಎಂದು ಎಕ್ಸ್‌ನಲ್ಲಿ ಬರೆಯಲಾಗಿದೆ.
ವಿಡಿಯೊ ವೀಕ್ಷಿಸಿ:
धनतेरस पर अम्मा का एक भी मिट्टी दीया नहीं बिका था। थानेदार विजय गुप्ता ने सारे दीए खरीदकर अम्मा का धनतेरस मनवा दिया।
— Sachin Gupta (@SachinGuptaUP) October 18, 2025
📍हापुड़, उत्तर प्रदेश pic.twitter.com/SkSKe3ldDD
ಗುಪ್ತಾ ಮಹಿಳೆಯ ಅಂಗಡಿಗೆ ಬಂದು ಅವರ ಬಳಿ ಇದ್ದ ಪ್ರತಿಯೊಂದು ದೀಪವನ್ನು ಖರೀದಿಸುವ ಕ್ಷಣವನ್ನು ಈ ದೃಶ್ಯಾವಳಿ ಸೆರೆಹಿಡಿಯುತ್ತದೆ. ಅಧಿಕಾರಿಯು ಬರುವವರೆಗೂ ಇಡೀ ದಿನ ಯಾವುದೇ ಗ್ರಾಹಕರು ತನ್ನಿಂದ ದೀಪಗಳನ್ನು ಖರೀದಿಸಿಲ್ಲ ಎಂದು ಮಹಿಳೆ ಹೇಳಿದ್ದಾರೆ. ನನ್ನ ಆಶೀರ್ವಾದಗಳು ನಿಮ್ಮ ಹೃದಯದಲ್ಲಿ ಉಳಿಯಲಿ. ದೀರ್ಘಾಯುಷ್ಯ ಪಡೆಯಿರಿ ಎಂದು ಮಹಿಳೆಯು ಪೊಲೀಸ್ ಅಧಿಕಾರಿಗೆ ಆಶೀರ್ವಾದ ಮಾಡಿದ್ದಾರೆ. ವಿಡಿಯೊದ ಕೊನೆಯಲ್ಲಿ, ಅಧಿಕಾರಿ ಅವಳಿಗೆ 1,000 ರೂ. ಹಣ ನೀಡುವುದನ್ನು ಗಮನಿಸಬಹುದು.
ಇದನ್ನೂ ಓದಿ: Viral Video: ದಿಟ್ಟಿಸಿ ನೋಡಿದನೆಂದು ಪ್ರೊಫೆಸರ್‌ಗೆ ಎಬಿವಿಪಿ ಸದಸ್ಯೆಯಿಂದ ಕಪಾಳಮೋಕ್ಷ! ವಿಡಿಯೊ ನೋಡಿ
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಯ ಅಲೆಯನ್ನು ಹುಟ್ಟುಹಾಕಿದೆ. ಬಳಕೆದಾರರು ಅಧಿಕಾರಿಯ ಸಹಾನುಭೂತಿಯನ್ನು ಶ್ಲಾಘಿಸಿದ್ದಾರೆ. ಪೊಲೀಸ್ ಅಧಿಕಾರಿ ವಿಜಯ್ ಗುಪ್ತಾ ಅವರ ಈ ಹೃದಯಸ್ಪರ್ಶಿ ನಡೆ ನಿಜಕ್ಕೂ ಶ್ಲಾಘನೀಯ. ಹೆಚ್ಚಿನ ಜನರು ಗಮನಿಸದೆಯೇ ಧಾವಿಸಿ ಹೋಗುವ ಈ ಜಗತ್ತಿನಲ್ಲಿ, ಅವರ ಸರಳತೆಯು ವೃದ್ಧ ಮಹಿಳೆಯ ದಿನವನ್ನು ಬೆಳಗಿಸಿತು. ಈ ರೀತಿಯ ಸಹಾನುಭೂತಿಯು ಮಾನವೀಯತೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ವಿಜಯ್ ಗುಪ್ತಾ ಅವರದ್ದು ಎಂತಹ ಹೃದಯಸ್ಪರ್ಶಿ ನಡೆ. ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸುವುದು ಈ ಹಬ್ಬದ ಋತುವಿನಲ್ಲಿ ಜೀವನವನ್ನು ನಿಜವಾಗಿಯೂ ಬೆಳಗಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ನಿಜವಾಗಿಯೂ ನನ್ನ ಕಣ್ಣಲ್ಲಿ ನೀರು ಬಂತು ಎಂದು ಮಗದೊಬ್ಬ ಬಳಕೆದಾರರು ಬರೆದಿದ್ದಾರೆ.