ಅಧಿಕಾರ ದರ್ಪದಿಂದ ಬೀದಿಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ: ಕಣ್ಣೀರಿಟ್ಟ ಮಾರಾಟಗಾರನ ವಿಡಿಯೊ ವೈರಲ್
Viral Video: ಕಾನೂನು ರಕ್ಷಿಸಬೇಕಾದ ಪೊಲೀಸರೇ ಬೀದಿಬದಿ ವ್ಯಾಪಾರಿಯ ಆಹಾರ ಮತ್ತು ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ. ಪೊಲೀಸ್ ಅಧಿಕಾರ ದರ್ಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಈ ಘಟನೆ ಈಗ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಹಾರವನ್ನು ಎಸೆದ ಕ್ರಮವನ್ನು ಪ್ರಶ್ನಿಸಿದ್ದು, ಇಂತಹ ಅಧಿಕಾರಿಗಳು ಬಡವರ್ಗದ ಜನತೆಯ ಮೇಲೆ ಮಾತ್ರ ದರ್ಪ ತೋರಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಬೀದಿ ಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ -
ನವದೆಹಲಿ, ಆ. 6: ದೆಹಲಿಯ ಜನಕ್‌ಪುರಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು (Viral News) ನಡೆದಿದೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಬೀದಿಬದಿ ವ್ಯಾಪಾರಿಯ ಆಹಾರ ಮತ್ತು ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ. ಪೊಲೀಸರ ಅಧಿಕಾರ ದರ್ಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಈ ಘಟನೆ ಈಗ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಹಾರವನ್ನು ಎಸೆದ ಕೃತ್ಯವನ್ನು ಪ್ರಶ್ನಿಸಿದ್ದು, ಇಂತಹ ಅಧಿಕಾರಿಗಳು ಬಡವರ್ಗದ ಜನತೆಯ ಮೇಲೆ ಮಾತ್ರ ದರ್ಪ ತೊರಿಸಲು ಸಾಧ್ಯ ಎಂದಿದ್ದಾರೆ.
ಈ ಘಟನೆಯು ಜನಕಪುರಿಯ ಕಾಳಿ ಮಾತಾ ಮಂದಿರದ ಬಳಿ ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಸಂಭವಿಸಿದೆ. ವೈರಲ್ ವಿಡಿಯೊದಲ್ಲಿ ರಸ್ತೆಬದಿಯ ಆಹಾರ ಮಾರಾಟಗಾರನೊಬ್ಬ ಕಣ್ಣೀರು ಸುರಿಸುತ್ತಾ ಪೊಲೀಸರೊಂದಿಗೆ ಬೇಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಮಾರಾಟಗಾರನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇತರರು ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ವಿಡಿಯೊ ನೋಡಿ:
Sir, I just come here to earn for 2 hours... 💔
— Pragnya Gupta (@GuptaPragnya) August 4, 2026
In Delhi's Janakpuri, the police threw away the food of a small shopkeeper who sets up a roadside stall—his cry of anguish, weeping and wailing, is a stain on the system and humanity!
Is this how those earning their daily bread… pic.twitter.com/d002RKcgAi
ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಮಾರಾಟಗಾರನು ರಸ್ತೆ ಪಕ್ಕದಲ್ಲಿ ನಿಂತಿದ್ದು, ಅವನ ಪಾತ್ರೆಗಳು ಮತ್ತು ಆಹಾರ ಪದಾರ್ಥಗಳು ನೆಲದ ಮೇಲೆ ಹರಡಿಕೊಂಡಿರುವುದು ಕಂಡುಬಂದಿದೆ. ಆತ ಪೊಲೀಸ್ ಅಧಿಕಾರಿಯೊಂದಿಗೆ, ʼʼನಾನು ಎಂದಿಗೂ ಯಾರೊಂದಿಗೂ ಜಗಳವಾಡುವುದಿಲ್ಲ, ನಾನು ಜೀವನೋಪಾಯಕ್ಕಾಗಿ ಎರಡು ಗಂಟೆಗಳ ಕಾಲ ಇಲ್ಲಿಗೆ ಬಂದಿದ್ದೇನೆʼʼ ಎಂದು ಹೇಳುತ್ತಾ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಸ್ಥಳದಲ್ಲಿ ನೆರೆದಿದ್ದ ಜನಸಮೂಹವು ಪೊಲೀಸರ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ದೆಹಲಿ ಪೊಲೀಸರು ಮಾರಾಟಗಾರ ಮಾಡಿದ ಆರೋಪಗಳನ್ನು ತಿರಸ್ಕರಿಸಿ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಪೊಲೀಸರೆ ಆಹಾರವನ್ನು ಎಸೆದಿದ್ದಾರೆ ಎಂಬುದಕ್ಕೆ ವಿಚಾರಣೆಯಲ್ಲಿ ಯಾವುದೇ ಪುರಾವೆ ಕಂಡುಬಂದಿಲ್ಲ. ಪೊಲೀಸರ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ವ್ಯಾಪಾರಿಯೇ ಸ್ವತಃ ಆಹಾರ ಹಾಗೂ ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು, ʼʼಅಕ್ರಮ ಮಾರಾಟವನ್ನು ಪ್ರೋತ್ಸಾಹಿಸಬಾರದು. ಆದರೆ ಕಡಿಮೆ ಸವಲತ್ತು ಹೊಂದಿರುವವರನ್ನು ಘನತೆ, ಗೌರವದಿಂದ ನಡೆಸಿಕೊಳ್ಳುವುದು ಅಗತ್ಯ. ಅವರಿಗೆ ಬದುಕುವ ಮತ್ತು ಜೀವನೋಪಾಯವನ್ನು ಗಳಿಸುವ ಹಕ್ಕಿಲ್ಲವೇ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಈ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.