ಐಟಿ ಕಂಪನಿಯ 18 ಲಕ್ಷ ರುಪಾಯಿ ಸಂಬಳ ತೊರೆದು ಡೇರಿ ಉದ್ಯಮ ಆರಂಭಿಸಿದ 42 ವರ್ಷದ ಟೆಕ್ಕಿ! ಸ್ಫೂರ್ತಿದಾಯಕ ವಿಡಿಯೊ ನೋಡಿ
Viral News: ಮಾನಸಿಕ ನೆಮ್ಮದಿಗಾಗಿ ಲಕ್ಷ ಲಕ್ಷ ರುಪಾಯಿ ಸಂಬಳ ಸಿಗುತ್ತಿದ್ದ ಉದ್ಯೋಗ ತೊರೆದು ಸ್ವಂತ ಉದ್ಯಮ ನಡೆಸುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್‌ನ 42 ವರ್ಷದ ಎಂಜಿನಿಯರ್ ಒಬ್ಬರು ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಡೇರಿ ಉದ್ಯಮ ಆರಂಭಿಸಿದ್ದಾರೆ. ಕೆಲಸದ ಬಗ್ಗೆ ಅಭದ್ರತೆ ಕಾಡಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಲು ಇಚ್ಚಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಇವರ ಯಶಸ್ಸು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಹೈದರಾಬಾದ್, ಆ. 6: ಕಾರ್ಪೊರೇಟ್ ವಲಯದ ಒತ್ತಡದ ಬಗ್ಗೆ ಅನೇಕ ಯುವಕ- ಯುವತಿಯರು ದೂರುತ್ತಾರೆ. ಮಾನಸಿಕ ನೆಮ್ಮದಿಗಾಗಿ ಲಕ್ಷ ಲಕ್ಷ ರುಪಾಯಿ ವೇತನದ ಉದ್ಯೋಗ ತೊರೆದು ಸ್ವಂತ ಉದ್ಯಮ ನಡೆಸಿದವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್‌ನ 42 ವರ್ಷದ ಎಂಜಿನಿಯರ್ ಒಬ್ಬರು ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಡೇರಿ ಉದ್ಯಮ ಆರಂಭಿಸಿದ್ದಾರೆ. ಕೆಲಸದ ಬಗ್ಗೆ ಅಭದ್ರತೆ ಕಾಡಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಿದ್ದಾಗಿ ಅವರು (Viral News) ಹೇಳಿಕೊಂಡಿದ್ದಾರೆ. ಸದ್ಯ ಇವರ ಯಶಸ್ಸಿನ ಕಥೆ ವೈರಲ್ ಆಗಿದೆ.
ಅನೇಕ ವೃತ್ತಿಪರರು ತಮ್ಮ ಉದ್ಯೋಗಗಳನ್ನು ತೊರೆದು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಸಕ್ಸಸ್ ಕಾಣುತ್ತಾರೆ. ಅಂತವರಲ್ಲಿ ಹೈದರಾಬಾದ್‌ನ ಎಂಜನಿಯರ್ ಒಬ್ಬರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಭವಿಷ್ಯದಲ್ಲಿ ತನ್ನ ಕೆಲಸ ಸುರಕ್ಷಿತ ಅಲ್ಲ ಎಂದು ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
There is a guy in my area who completed his https://t.co/Ws1j7hoGgc from Osmania University. He is around 42 years old and was earning about ₹18 LPA. Recently, he left his job and started an organic dairy business.
— Vikas Alwys (@VikasAlwys) August 4, 2026
When I asked him why he left his job, he said that after Trump…
ಹೈದರಾಬಾದ್‌ನ 42 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ 18 ಲಕ್ಷ ರುಪಾಯಿ ವಾರ್ಷಿಕ ವೇತನದ ಐಟಿ ಕೆಲಸಕ್ಕೆ ರಾಜೀನಾಮೆ ನೀಡಿ ಡೇರಿ ಉದ್ಯಮವನ್ನು ಆರಂಭಿಸಿದ್ದಾರೆ. ಈ ವಿಚಾರವನ್ನು ಸಾಫ್ಟ್‌ವೇರ್ ಎಂಜಿನಿಯರ್ ವಿಕಾಸ್ ಅಲ್ವಿಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಮುಗಿಸಿದ್ದುಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಕಂಪನಿಯು ಕಡಿಮೆ ಯೋಜನೆ ತೆಗೆದುಕೊಳ್ಳಲು ಪ್ರಾರಂಭಿಸಿತು. ಇದರಿಂದಾಗಿ ಉದ್ಯೋಗಿಗಳು ತಮ್ಮ ಉದ್ಯೋಗಗಳ ಬಗ್ಗೆ ಚಿಂತಿಸುತ್ತಿದ್ದರು. ಕೆಲಸ ಕಳೆದು ಹೋಗುತ್ತದೆ ಎಂಬ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದರು. ಇದರ ಬದಲು ಸ್ವಂತ ಉದ್ಯಮ ಆರಂಭಿಸುವುದೇ ಲೇಸು ಎಂದು ಅವರು ತೀರ್ಮಾನ ಮಾಡಿದ್ದಾರೆ.
ತಮ್ಮ ಬಳಿಯಿದ್ದ ಉಳಿತಾಯದ ಹಣವನ್ನು ಉಪಯೋಗಿಸಿ ಸಾವಯವ ಹಾಲಿನ ಉತ್ಪನ್ನಗಳಾದ ದೇಸಿ ತುಪ್ಪ, ಮೊಸರು, ಇತರ ಡೇರಿ ಉತ್ಪನ್ನಗಳ ಮಾರಾಟ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇಂದು, ಅವರ ವ್ಯವಹಾರವು ಮಾಸಿಕ 3.5 ಲಕ್ಷ ರುಪಾಯಿ ಆದಾಯವನ್ನು ಗಳಿಸುತ್ತಿದೆ ಮತ್ತು ತಿಂಗಳಿಗೆ ಸುಮಾರು 1.5 ಲಕ್ಷ ರುಪಾಯಿ ಲಾಭ ಇದೆಯಂತೆ.
ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು, ʼʼ42ನೇ ವಯಸ್ಸಿನಲ್ಲಿ ಸ್ಥಿರವಾದ 18 LPA ಕೆಲಸವನ್ನು ಬಿಟ್ಟು ಸ್ವಂತ ಉದ್ಯಮ ನಡೆಸಲು ಧೈರ್ಯ ಬೇಕುʼʼ ಎಂದಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಇವರು ಶ್ರಮಜೀವಿʼʼ ಎಂದು ಕೊಂಡಾಡಿದ್ದಾರೆ.