ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಈ ವರ್ಷ ನೆಟ್ಟಿಗರ ಮನಗೆದ್ದ ವಿದೇಶಿ ಪ್ರವಾಸಿಗರು ಭಾರತವನ್ನು ಹೊಗಳಿದ ಟಾಪ್‌ 8 ವಿಡಿಯೊ ಇದು

2025ರಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರು ಇಲ್ಲಿನ ತಮ್ಮ ಪ್ರಯಾಣದ ಅನುಭವಗಳು, ಸ್ಥಳೀಯ ಆಹಾರ ಮತ್ತು ಸಂಸ್ಕೃತಿಯನ್ನು ವ್ಲಾಗ್‌ ಮೂಲಕ ಹಂಚಿಕೊಂಡಿದ್ದಾರೆ. ಹಾಗೇ ವೈರಲ್ ಆದ ಪ್ರವಾಸಿಗರ ಕೆಲವು ಅವಿಸ್ಮರಣೀಯ ವಿಡಿಯೊ ಯಾವುವು ಎನ್ನುವ ವಿವರ ಇಲ್ಲಿದೆ:

ಈ ವರ್ಷ ವಿದೇಶಿ ಪ್ರವಾಸಿಗರ ಯಾವೆಲ್ಲ ವಿಡಿಯೋ ಹೈಲೈಟ್ ಆಗಿತ್ತು?

ವಿದೇಶಿ ಮಹಿಳೆ -

Profile
Pushpa Kumari Dec 9, 2025 8:00 AM

ನವದೆಹಲಿ, ಡಿ. 8: ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇಲ್ಲಿನ ಸಂಸ್ಕೃತಿ, ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣ, ದೇಗುಲ ದರ್ಶನಕ್ಕಾಗಿ ಬರುವ ಪ್ರವಾಸಿಗರು ನಮ್ಮ ದೇಶದ ಅನೇಕ ಸಂಗತಿಗಳನ್ನು, ಅದ್ಭುತ ವಿಚಾರಗಳನ್ನು ವಿಡಿಯೊ ಮೂಲಕ ಜಗತ್ತಿನ ಮುಂದೆ ಅನಾವರಣಗೊಳಿಸುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್, ಸ್ಪ್ಯಾನಿಶ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಪ್ರವಾಸಿಗರು ಇಲ್ಲಿಗೆ ಬಂದು ಜನರ ರೀತಿ, ನೀತಿ, ರಿವಾಜು, ಹವ್ಯಾಸ, ಜೀವನ ಶೈಲಿಗೆ ಮನ ಸೋತಿದ್ದಾರೆ‌. ಅನೇಕ ವ್ಲಾಗರ್‌ಗಳು ಸೋಶಿಯಲ್ ಮಿಡಿಯಾದಲ್ಲಿ ಭಾರತದಲ್ಲಿ ತಾವು ಕಳೆದ ದಿನಗಳ ಬಗ್ಗೆ ವಿಡಿಯೊ ಅಪ್‌ಲೋಡ್‌ ಮಾಡಿ ಗಮನ ಸೆಳೆದಿದ್ದಾರೆ. 2025ರಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರು ಇಲ್ಲಿನ ಅಪರೂಪದ ಸಂಗತಿಗಳು, ಪಾಸಿಟಿವ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ವೈರಲ್ ಆದ ಈ ವರ್ಷದ ಟಾಪ್‌ ವಿಡಿಯೊಗಳು ಯಾವುವು ಎನ್ನುವ ವಿವರ ಇಲ್ಲಿದೆ.

  • ಆಸ್ಟ್ರೇಲಿಯಾದ ಪ್ರವಾಸಿಗ ಡಂಕನ್ ಮೆಕ್‌ನಾಟ್ (Duncan McNaught) ಮಣಿಪುರಕ್ಕೆ ಭೇಟಿ ನೀಡಿದ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದರು. ಅವರು ಹಂಚಿಕೊಂಡ ವಿಡಿಯೊದಲ್ಲಿ ಮಣಿಪುರದ ಪ್ರವಾಸಿ ತಾಣ, ಅಲ್ಲಿನ ಜನ-ಜೀವನಗಳ ಬಗ್ಗೆ ತಿಳಿಸಿದ್ದಾರೆ. ದೆಹಲಿಗೆ ಬರುವ ಪ್ರವಾಸಿಗರು ಆಗ್ರ ಮತ್ತು ದೆಹಲಿ ಎಂದು ಸುತ್ತುವ ಬದಲು ಪ್ರಯಾಣದ ಮಾರ್ಗಗಳನ್ನು ವಿಸ್ತರಿಸಿ ದೇಶದ ಮೂಲೆ ಮೂಲೆಗೂ ಹೋಗಿ ಹೊಸ ಸ್ಥಳವನ್ನು ವೀಕ್ಷಿಸಬೇಕು ಎಂದು ಹೇಳಿಕೊಂಡಿದ್ದರು. ಇವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
  • ಆಸ್ಟ್ರೇಲಿಯಾದ ಮತ್ತೊಬ್ಬ ವ್ಲಾಗರ್‌ ಬೆಕ್ ಮೆಕ್‌ಕಾಲ್ (Bec McColl) ಕೂಡ 2025ರಲ್ಲಿ ಭಾರತಕ್ಕೆ ಬಂದಿದ್ದರು. ಇಲ್ಲಿನ ರೈಲಿನಲ್ಲಿ ಪ್ರಯಾಣಿಸುವಾಗ ಅವರು ಪಿಜ್ಜಾ ಮತ್ತು ಫ್ರೈಗಳನ್ನು ಸೇವಿಸಿದ್ದ ವಿಡಿಯೋ ವೈರಲ್ ಆಗಿತ್ತು. ರೈಲಿನಲ್ಲಿ ಸಿಗುವ ವಿವಿಧ ಸೌಲಭ್ಯ, ಸೇವೆಗಳು ಯಾವ ರೀತಿಯಾಗಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂಬುದನ್ನು ವಿಡಿಯೊ ಮೂಲಕ ಅವರು ತಿಳಿಸಿದ್ದಾರೆ.

ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಠಾಣೆ ಮೆಟ್ಟಿಲೇರಿದ ಪತ್ನಿ

  • ವಿದೇಶಿ ಪ್ರವಾಸಿಗರಾದ ಕ್ರಿಸ್ ಮತ್ತು ಫ್ಲೋ (Chris and Flo) ಜೈಪುರದಿಂದ ಆಗ್ರಾಗೆ ಭೇಟಿ ನೀಡಿದ್ದರು. ರೈಲಿನ ಫಸ್ಟ್ ಕ್ಲಾಸ್‌ ಬೋಗಿಯಲ್ಲಿ ವಿವಿಧ ಸೌಕರ್ಯದ ಬಗ್ಗೆ ವ್ಲಾಗ್‌ನಲ್ಲಿ ಅವರು ತಿಳಿಸಿದ್ದರು. ಎಲ್ಲ ಸೌಕರ್ಯಗಳು ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಆದರೆ ವಿದೇಶಿ ಪ್ರವಾಸಿಗರಿಗೆ ಬುಕಿಂಗ್‌ಗಳನ್ನು ನ್ಯಾವಿಗೇಟ್ ಮಾಡುವುದು ಕಷ್ಟವಾಗುತ್ತಿದೆ ಎಂದು ಅವರು ತಿಳಿಸುವ ವಿಡಿಯೊ ವೈರಲ್ ಆಗಿತ್ತು.
  • ಅಮೆರಿಕದ ಪ್ರವಾಸಿ ಸ್ಟೆಫ್‌ (Steph) ಗುಜರಾತ್‌ಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಬ್ಯಾಗ್ ಕಳೆದುಕೊಂಡಿದ್ದರು. ಆಗ ಅದನ್ನು ಸ್ಥಳೀಯ ವ್ಯಕ್ತಿಯೊಬ್ಬ ಹಿಂದಿರುಗಿಸಿದ್ದು ಈ ಹೃದಯಸ್ಪರ್ಶಿ ವಿಡಿಯೊ ಕೂಡ ಈ ವರ್ಷ ವೈರಲ್ ಆಗಿತ್ತು. ಆತ ತನ್ನ ಬ್ಯಾಗ್ ಹಿಂದಿರುಗಿಸಿದ್ದಕ್ಕೆ ಕೃತಜ್ಞತೆಯಿಂದ ಅವನಿಗೆ ಹಣವನ್ನು ನೀಡಲು ಮುಂದಾಗಿದ್ದಾಳೆ. ಆದರೆ ಆತನು ಹಣ ಪಡೆಯಲು ನಿರಾಕರಿಸಿದ್ದಾನೆ. ಆ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ಸ್ಟೆಫ್ ಹೊಗಳಿದ್ದು ಆನ್‌ಲೈನ್‌ನಲ್ಲಿ ಈ ವಿಡಿಯೊ ಸಂಚಲನ ಉಂಟು ಮಾಡಿತ್ತು.
  • ಅಮೆರಿಕದ ಪ್ರವಾಸಿ ಮಹಿಳೆಯೊಬ್ಬರು ಭಾರತೀಯ ಬೀದಿ ಬದಿಯ ಆಹಾರ ಖಾದ್ಯವನ್ನು ಸವಿದಿದ್ದರು. ಇಲ್ಲಿನ ಪಾನಿ ಪುರಿ, ಕಚೋರಿ, ಮಸಾಲಾ ಪಾಪಡ್ ಮತ್ತು ತಾಜಾ ಜಿಲೇಬಿಗಳನ್ನು ಸವಿಯುತ್ತಾ ವ್ಹಾವ್ ಎಂದು ಹೇಳಿದ್ದ ಅವರ ವಿಡಿಯೊ ವೈರಲ್ ಆಗಿತ್ತು. ಭಾರತೀಯ ಬೀದಿ ಬದಿಯ ಆಹಾರಗಳಲ್ಲಿಯೂ ಸಂಸ್ಕೃತಿಯ ಅಂಶಗಳಿವೆ; ಒಂದು ವಿಶಿಷ್ಟ ಸ್ವಾದಿಷ್ಟ ಇದೆ ಎಂದು ಅವರು ತಿಳಿಸಿದ್ದರು.

ವಿಡಿಯೊ ನೋಡಿ:

  • ಸ್ಕಾಟಿಷ್ ವ್ಲಾಗರ್ ಒಬ್ಬರು ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದರು. ಕೊಚ್ಚಿಯ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಿ ಫೋರ್ಟ್ ಕೊಚ್ಚಿ ಮತ್ತು ಹೈಕೋರ್ಟ್ ಟರ್ಮಿನಲ್ ನಡುವೆ ಕೇವಲ 40 ರೂಪಾಯಿಗಳಿಗೆ ಪ್ರಯಾಣಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟರು. ಇಲ್ಲಿನ ಸಣ್ಣ ಹೋಟೆಲ್‌ಗಳು, ತೆಂಗಿನ ಮರಗಳು, ಸಮುದ್ರ ತೀರದ ಮನೆಗಳ ಸೊಬಗನ್ನು ಅವರು ವಿಡಿಯೊದಲ್ಲಿ ವಿವರಿಸಿದ್ದರು.
  • ಜರ್ಮನ್ ಮೂಲದ ಅಲೆಕ್ಸಾಂಡರ್ ವೆಲ್ಡರ್ (Alexander Welder) ಭಾರತಕ್ಕೆ ಆಗಮಿಸಿ ಇಲ್ಲಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಎಕ್ಸಿಕ್ಯೂಟಿವ್-ಕ್ಲಾಸ್ ಪ್ರಯಾಣದ ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ಪ್ರಯಾಣದ ವೇಳೆ ಅವರಿಗೆ ದೊರೆತ ವಿವಿಧ ಖಾದ್ಯಗಳನ್ನು ಹೊಂದಿದ್ದ ಊಟ, ಸ್ವಚ್ಛವಾಗಿರುವ ಶೌಚಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
  • ಇಂಗ್ಲೆಂಡ್‌ ಮೂಲದ ಬ್ಲಾಗರ್ ಜೂಲಿಯಸ್ ಫೀಡ್ಲರ್ 2025ರಲ್ಲಿ ಮುಂಬೈಗೆ ಭೇಟಿ ನೀಡಿ ತಮ್ಮ ಅನುಭವವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಮುಂಬೈಯ ಬೀದಿ ಬದಿಯ ಪ್ರಸಿದ್ಧ ಆಹಾರ ಖಾದ್ಯಗಳ ಬಗ್ಗೆ ಅವರು ವಿಡಿಯೊದಲ್ಲಿ ತಿಳಿಸಿದ್ದರು. ರಗ್ಡಾ ಪ್ಯಾಟೀಸ್, ಸೇವ್ ಪುರಿ, ಭೇಲ್ ಪುರಿ ಮತ್ತು ಪಾನಿ ಪುರಿಯಂತಹ ತಿಂಡಿಗಳನ್ನು ಸವಿದಿದ್ದರು. ಅದರ ಮಾರಾಟಗಾರರು ತಮ್ಮ ಸ್ಟಾಲ್‌ಗಳಲ್ಲಿ ಈ ಆಹಾರಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಕೂಡ ಅವರು ವಿಡಿಯೊದಲ್ಲಿ ತೋರಿಸಿದ್ದರು.