Marathoner Fauja Singh: ಶತಾಯುಷಿ ಫೌಜಾ ಸಿಂಗ್‌ಗೆ ಕಾರಿನಿಂದ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣನಾಗಿದ್ದ NRI ಅರೆಸ್ಟ್!
ಜಗತ್ತಿನ ಅತ್ಯಂತ ಹಿರಿಯ ಮ್ಯಾರಥಾನ್ ಪಟು, ‘ಟರ್ಬನ್ ಟೊರ್ನಾಡೊ’ ಎಂದು ಖ್ಯಾತರಾದ ಫೌಜಾ ಸಿಂಗ್ (114) ಅವರಿಗೆ ಕಾರು ಡಿಕ್ಕಿಹೊಡೆದ ಘಟನೆಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಜಲಂಧರ್ ಜಿಲ್ಲೆಯ ದಸೌಪುರದ ಅನಿವಾಸಿ ಭಾರತೀಯ ಅಮೃತ್ ಪಾಲ್ ಸಿಂಗ್ ದಿಲೊನ್ ಬಂಧಿತ ಆರೋಪಿಯಾಗಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಫೌಜಾ ಸಿಂಗ್

ಚಂಡೀಗಢ: ಜಗತ್ತಿನ ಅತ್ಯಂತ ಹಿರಿಯ ಮ್ಯಾರಥಾನ್ ಪಟು, ‘ಟರ್ಬನ್ ಟೊರ್ನಾಡೊ’ (Turban Tornado) ಎಂದು ಖ್ಯಾತರಾದ ಫೌಜಾ ಸಿಂಗ್ (114) (Fauja Singh) ಅವರಿಗೆ ಕಾರು ಡಿಕ್ಕಿಹೊಡೆದ ಘಟನೆಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಜಲಂಧರ್ ಜಿಲ್ಲೆಯ ದಸೌಪುರದ ಅನಿವಾಸಿ ಭಾರತೀಯ (NRI) ಅಮೃತ್ ಪಾಲ್ ಸಿಂಗ್ ದಿಲೊನ್ (Amritpal Singh Dhillon) ಬಂಧಿತ ಆರೋಪಿಯಾಗಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ಭೋಗ್‌ಪುರದಿಂದ ಕಿಶಾಘರ್‌ಗೆ ತೆರಳುವಾಗ ಜಲಂಧರ್-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೌಜಾ ಸಿಂಗ್ ಅವರಿಗೆ ಆರೋಪಿಯ ಟೊಯೋಟಾ ಫಾರ್ಚೂನರ್ ಕಾರು ಡಿಕ್ಕಿಹೊಡೆದಿತ್ತು. ಡಿಕ್ಕಿ ರಭಸಕ್ಕೆ ಫೌಜಾ ಸಿಂಗ್ 5-7 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ನಿಧನರಾದರು.
#WATCH | Jalandhar, Punjab: The man who rammed his car into 114-year-old legendary marathon runner Fauja Singh has been arrested, say police
— ANI (@ANI) July 16, 2025
SSP Rural Harvinder Singh Virk says, "The accused has been identified as Amritpal Singh Dhillon ,and he is 26 years old. He works in… pic.twitter.com/FcX4lZgLsb
ಬಂಧಿತ ಆರೋಪಿಯ ಕುಟುಂಬ ಕೆನಡಾದಲ್ಲಿ ನೆಲೆಸಿದ್ದು, ಇತ್ತೀಚೆಗೆ ದಸೌಪುರಕ್ಕೆ ಆಗಮಿಸಿದ್ದ. ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ಪಂಜಾಬ್ ನೋಂದಣಿಯ ಕಾರು ಡಿಕ್ಕಿಹೊಡೆದಿರುವುದು ದೃಢಪಟ್ಟಿದೆ ಎಂದು ಜಲಂಧರ್ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಮದುವೆಯ ದಿನ ರಾತ್ರಿ ವಧುವಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಹೇಳಿದ ವರ; ಕೊನೆಗೆ ಆಗಿದ್ದೇನು?
ಫೌಜಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು, ಕ್ರೀಡಾಪಟುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಜಾಬ್ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಲಾಯಿತು.
1911ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಫೌಜಾ ಸಿಂಗ್, ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಮೊದಲ ಶತಾಯುಷಿಯಾಗಿ ದಾಖಲೆ ನಿರ್ಮಿಸಿದ್ದರು. ಲಂಡನ್, ನ್ಯೂಯಾರ್ಕ್, ಹಾಂಗ್ ಕಾಂಗ್‌ನ ಪ್ರಸಿದ್ಧ ಮ್ಯಾರಥಾನ್‌ಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು, ದುರ್ಬಲ ಕಾಲುಗಳೊಂದಿಗೆ ಜನಿಸಿದರೂ ಹಿರಿಯ ವಯಸ್ಸಿನಲ್ಲಿ ಅದ್ಭುತ ಯಶಸ್ಸು ಗಳಿಸಿದ್ದರು. 2011ರಲ್ಲಿ 100 ವರ್ಷದವರೆಗೂ ಸ್ಪರ್ಧೆಯಲ್ಲಿ ಭಾಗವಹಿಸಿ, ಟೊರೊಂಟೊದಲ್ಲಿ ವಿಶ್ವದಾಖಲೆಗಳನ್ನು ಮುರಿದಿದ್ದರು. ಬ್ರಿಟನ್‌ನಲ್ಲಿ ಓಟದ ವೃತ್ತಿಜೀವನ ಕಳೆದ ಅವರು, ಮೂರು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದರು.