ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪರಾಧಿಗಳೊಂದಿಗೆ ಮದುವೆ ಸಂಭ್ರಮ; ರಾಜಸ್ಥಾನ ಕಾನ್ಸ್‌ಟೇಬಲ್ ಸೇವೆಯಿಂದ ವಜಾ

ಮೋಸ್ಟ್ ವಾಂಟೆಡ್ ಅಪರಾಧಿಗಳೊಂದಿಗೆ ಮದುವೆ ಸಂಭ್ರಮ ಹಂಚಿಕೊಂಡ ರಾಜಸ್ಥಾನ ಕಾನ್ಸ್‌ಟೇಬಲ್ ಸೇವೆಯಿಂದ ವಜಾಗೊಳಿಸಲಾಗಿದೆ. ಮದುವೆಯ ವಿಡಿಯೊ ಹಿರಿಯ ಅಧಿಕಾರಿಗಳ ಕೈ ಸೇರಿದ್ದು, ಇದರಲ್ಲಿ ಅಪರಾಧಿಗಳೊಂದಿಗೆ ಮದುವೆ ವರ ಕಾನ್ಸ್‌ಟೇಬಲ್ ಫೋಟೋಗೆ ಪೋಸ್ ನೀಡಿರುವುದನ್ನು ಗುರುತಿಸಿ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಅಪರಾಧಿಗಳೊಂದಿಗೆ ನಂಟು: ರಾಜಸ್ಥಾನ ಕಾನ್ಸ್‌ಟೇಬಲ್ ಕೆಲಸದಿಂದ ವಜಾ

ಸಂಗ್ರಹ ಚಿತ್ರ -

ಜೈಪುರ: ಮೋಸ್ಟ್ ವಾಂಟೆಡ್ ಅಪರಾಧಿಗಳೊಂದಿಗೆ (notorious criminals) ಮದುವೆ ಸಂಭ್ರಮ ಹಂಚಿಕೊಂಡ ರಾಜಸ್ಥಾನ ಕಾನ್ಸ್‌ಟೇಬಲ್ (Rajasthan Constable) ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಘಟನೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (viral video) ಆದ ಬಳಿಕ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮದುವೆಯ ವಿಡಿಯೊದಲ್ಲಿ ಮೋಸ್ಟ್ ವಾಂಟೆಡ್ ಅಪರಾಧಿಗಳೊಂದಿಗೆ ಮದುವೆ ವರ ಕಾನ್ಸ್‌ಟೇಬಲ್ ಫೋಟೋಗೆ ಪೋಸ್ ನೀಡಿರುವುದನ್ನು ಪತ್ತೆ ಹಚ್ಚಿರುವ ಹಿರಿಯ ಅಧಿಕಾರಿಗಳು ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ಮದುವೆಯಾದ ಎರಡೇ ದಿನಗಳಲ್ಲಿ ಕಾನ್ಸ್‌ಟೇಬಲ್ ಕೆಲಸ ಕಳೆದುಕೊಂಡಿದ್ದಾನೆ.

ರಾಜಸ್ಥಾನ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್ ಬಿಷ್ಣೋಯ್ ಅವರ ಮದುವೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವಾರು ಕುಖ್ಯಾತ ಅಪರಾಧಿಗಳು ಹಾಜರಾಗಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಮದುವೆಯಾದ ಕೇವಲ ಎರಡು ದಿನಗಳಲ್ಲಿ ಅಶೋಕ್ ಬಿಷ್ಣೋಯ್ ಕೆಲಸ ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದ ಬಳಿ ಗಸ್ತು ವಾಹನಕ್ಕೆ ಕಾರು ಡಿಕ್ಕಿ

ಕಾನ್ಸ್‌ಟೇಬಲ್ ಅಶೋಕ್ ಬಿಷ್ಣೋಯ್ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದ ಅನೇಕ ಅಪರಾಧಿಗಳು ನೋಟುಗಳನ್ನು ವರನ ಮೇಲೆ ಸುರಿಯುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

ಝಲಾವರ್ ಜಿಲ್ಲೆಯ ವಿಶೇಷ ತಂಡದಲ್ಲಿದ್ದ ಕಾನ್ಸ್‌ಟೇಬಲ್ ಅಶೋಕ್ ಬಿಷ್ಣೋಯ್ ಅವರ ವಿವಾಹ ನಾಗೌರ್‌ನಲ್ಲಿ ಇತ್ತೀಚೆಗೆ ನಡೆಯಿತು. ಇವರ ಮದುವೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಎಂಟಕ್ಕೂ ಹೆಚ್ಚು ಕುಖ್ಯಾತ ಅಪರಾಧಿಗಳು ಅತಿಥಿಗಳಾಗಿ ಭಾಗವಹಿಸಿದ್ದರು. ಅರಣ್ಯ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿ ಮನೆ ನಿರ್ಮಿಸಿದ ಆರೋಪ ಹೊತ್ತಿರುವ ಪಪ್ಪು ತನ್ವರ್ ಸೇರಿದಂತೆ ಇವರಲ್ಲಿ ಕೆಲವರು ಮೋಸ್ಟ್ ವಾಂಟೆಡ್ ವ್ಯಕ್ತಿಗಳಾಗಿದ್ದಾರೆ.



ಪಪ್ಪು ತನ್ವರ್ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಇತ್ತೀಚೆಗೆ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ಇತರ ಅತಿಥಿಗಳಲ್ಲಿ ಝಾಲಾವರ್‌ನಲ್ಲಿ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಗುರುತಿಸಲಾದ ದುರ್ಗಾಲಾಲ್ ಅಲಿಯಾಸ್ ದುರ್ಗಾಶಂಕರ್, ರಮೇಶ್, ರಾಮ್‌ಗೋಪಾಲ್, ರಾಂಬಾಬು ರುಹೇಡಾ, ಅತಿಕ್ ಮೊಹಮ್ಮದ್, ಮಂಗಿಲಾಲ್ ಮತ್ತು ಚೈನ್ ಸಿಂಗ್ ಸೇರಿದ್ದಾರೆ. ಇವರ ವಿರುದ್ಧ ತಲಾ ೧೨ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ವೈಟ್ ಕಾಲರ್ ಭಯೋತ್ಪಾದನಾ ಜಾಲ: ಎನ್ಐಎ ತನಿಖೆಯಿಂದ ಹೊರಬಿತ್ತು ಆಘಾತಕಾರಿ ಮಾಹಿತಿ

ಈ ಕುರಿತು ಪ್ರತಿಕ್ರಿಯಿಸಿರುವ ಝಾಲಾವರ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈ ಕುರಿತು ಇಲಾಖೆ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಸಮವಸ್ತ್ರದ ಘನತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಪ್ರಾಥಮಿಕ ತನಿಖೆಯ ಬಳಿಕ ಅಶೋಕ್ ಬಿಷ್ಣೋಯ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಕ್ರಿಮಿನಲ್ ಜಾಲಗಳ ನಡುವಿನ ಸಂಪರ್ಕದ ಕುರಿತು ಕೂಡ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.