ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದ ಬಳಿ ಗಸ್ತು ವಾಹನಕ್ಕೆ ಕಾರು ಡಿಕ್ಕಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದ ಬಳಿ ಹೈ ಸೆಕ್ಯುರಿಟಿ ವಿವಿಐಪಿ ಪ್ರದೇಶದಲ್ಲಿ ಅತಿ ವೇಗವಾಗಿ ಬಂದ ಕಾರೊಂದು ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಮಹಿಳಾ ಅಧಿಕಾರಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಸೇರಿದಂತೆ ನಾಲ್ವರನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದ ಬಳಿ ಅಪಘಾತ

ಸಂಗ್ರಹ ಚಿತ್ರ -

ಪಾಟ್ನಾ: ಬಿಹಾರ ಮುಖ್ಯಮಂತ್ರಿ (Bihar Chief Minister) ನಿತೀಶ್ ಕುಮಾರ್ (CM Nitish Kumar) ಅವರ ನಿವಾಸದ ಬಳಿ ಪೊಲೀಸ್ ಗಸ್ತು ವಾಹನಕ್ಕೆ (Police Vehicle) ಕಾರೊಂದು ಡಿಕ್ಕಿಯಾಗಿ ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಪಾಟ್ನಾದ (Patna) ಹೈ ಸೆಕ್ಯುರಿಟಿ ವಿವಿಐಪಿ ಪ್ರದೇಶವಾದ ಬಿಪಿ ಮಂಡಲ್ ವೃತ್ತದ ಬಳಿ ಈ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಎಸ್ಯುವಿಯೊಂದು ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಎಸ್ಯುವಿ ಚಾಲಕ ಸೇರಿದಂತೆ ನಾಲ್ವರನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವತಿಯರನ್ನು ರಕ್ಷಿಸಲು ಪಾಟ್ನಾ ಪೊಲೀಸರ ವಿಶೇಷ ಘಟಕವಾದ ಶಕ್ತಿ ಸುರಕ್ಷಾ ದಳಕ್ಕೆ ಸೇರಿದ ಗಸ್ತು ವಾಹನಕ್ಕೆ ಅತಿ ವೇಗವಾಗಿ ಬಂದ ಎಸ್ಯುವಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದೆ.

ವೈಟ್ ಕಾಲರ್ ಭಯೋತ್ಪಾದನಾ ಜಾಲ: ಎನ್ಐಎ ತನಿಖೆಯಿಂದ ಹೊರಬಿತ್ತು ಆಘಾತಕಾರಿ ಮಾಹಿತಿ

ಎಸ್ಯುವಿಯು ಗಾರ್ಡ್‌ರೈಲ್ ಗೆ ಡಿಕ್ಕಿಯಾಗಿ ಸ್ವಲ್ಪ ದೂರದವರೆಗೆ ಸಾಗಿ ನಿಂತಿತು. ಅಪಘಾತ ನಡೆದ ತಕ್ಷಣವೇ ಸ್ಥಳದಲ್ಲಿದ್ದ ತುರ್ತು ಪ್ರತಿಕ್ರಿಯೆ ತಂಡದ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಾಂಧಿ ಮೈದಾನ ಸಂಚಾರ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಎಸ್ಯುವಿ ಚಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿತು.

ಈ ಕುರಿತು ಮಾಹಿತಿ ನೀಡಿದ ಸಂಚಾರ ವಿಭಾಗದ ಡಿಎಸ್ಪಿ ಅಜಿತ್ ಕುಮಾರ್, ಪೊಲೀಸ್ ಗಸ್ತು ವಾಹನಕ್ಕೆ ಎಸ್ಯುವಿಯೊಂದು ಡಿಕ್ಕಿ ಹೊಡೆದಿದೆ. ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು, ಇತರ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಕಾರು ಚಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು.

ತಿಂಗಳ ಹಿಂದೆ ನಡೆದ ತಂದೆ-ಮಗಳ ಸಾವಿನ ರಹಸ್ಯ ಈಗ ಬಯಲು; 6 ವರ್ಷದ ಬಾಲಕಿ ಮೇಲೆ 1 ವರ್ಷದಿಂದ ನಡೆದಿತ್ತು ಲೈಂಗಿಕ ದೌರ್ಜನ್ಯ

ಪೊಲೀಸ್ ವಾಹನ ಚಾಲಕನ ಹೇಳಿಕೆ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು. ನಾವು ನಿರಂತರವಾಗಿ ಅತಿ ವೇಗದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.