ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಡು-ರಸ್ತೆಯಲ್ಲಿಯೇ ಮಹಿಳೆಯನ್ನು ಇಳಿಸಿ ಅವ್ಯಾಚ ಪದಗಳಿಂದ ನಿಂದಿಸಿದ Rapido ಚಾಲಕ! ಮಹಿಳಾ ಸುರಕ್ಷತೆ ಬಗ್ಗೆ ಮೂಡಿದ ಪ್ರಶ್ನೆ!

Viral News: Rapido ಚಾಲಕೊಬ್ಬ ಮಹಿಳೆಯ ಜೊತೆ ಉದ್ಧಟತನ ಮೆರೆದಿದ್ದು ಅರ್ಧ ದಾರಿಯಲ್ಲೇ ಇಳಿಸಿ ಹೋಗಿದ್ದಾನೆ. ಜಾನ್ವಿ ಚೌಧರಿ ಎಂದು ಗುರುತಿಸಲ್ಪಟ್ಟ ಮಹಿಳೆ, ಸವಾರಿಯ ಸಮಯದಲ್ಲಿ ಏನಾಯಿತು ಎಂದು ವಿವರಿಸುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಚಾಲಕನು ಆ್ಯಪ್‌ನ ನಕ್ಷೆಯಲ್ಲಿ ತೋರಿಸಿದ ಮಾರ್ಗದಲ್ಲಿ ಹೋಗಲು ನಿರಾಕರಿಸಿದ್ದು ನಿರ್ಜನ ಪ್ರದೇಶದಲ್ಲಿ ತನ್ನನ್ನು ಕರೆದೊಯ್ದಿದ್ದಾನೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ Rapido ಚಾಲಕ: ವರ್ತನೆ ವಿರುದ್ಧ ಕಿಡಿ!

ನಡು-ರಸ್ತೆಯಲ್ಲಿಯೇ ಮಹಿಳೆಯನ್ನು ಇಳಿಸಿ ಅವ್ಯಾಚ ಪದಗಳಿಂದ ನಿಂದಿಸಿದ ರಾಪಿಡೊ ಚಾಲಕ -

Profile
Pushpa Kumari Jul 26, 2026 1:14 PM

ಡೆಹ್ರಾಡೂನ್,ಜು.26: ಇತ್ತೀಚೆಗೆ ಮಹಿಳೆಯರಿಗೆ ದೌರ್ಜನ್ಯ ಎಸಗುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ‌. ಇದಕ್ಕೆ ಸಾಕ್ಷಿ ಎಂಬಂತೆ ರಾಪಿಡೊ ಚಾಲಕನೊಬ್ಬ ಮಹಿಳೆಯ ಜೊತೆ ಉದ್ಧಟತನ ಮೆರೆದಿದ್ದು ಅರ್ಧ ದಾರಿಯಲ್ಲೇ ಇಳಿಸಿ ಹೋಗಿದ್ದಾನೆ. ಜಾನ್ವಿ ಚೌಧರಿ ಎಂದು ಗುರುತಿಸಲ್ಪಟ್ಟ ಮಹಿಳೆ, ಸವಾರಿಯ ಸಮಯದಲ್ಲಿ ಏನಾಯಿತು ಎಂದು ವಿವರಿಸುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ. ಚಾಲಕನು ಆ್ಯಪ್‌ನ ನಕ್ಷೆಯಲ್ಲಿ ತೋರಿಸಿದ ಮಾರ್ಗದಲ್ಲಿ ಹೋಗಲು ನಿರಾಕರಿಸಿದ್ದು ನಿರ್ಜನ ಪ್ರದೇಶದಲ್ಲಿ ತನ್ನನ್ನು ಕರೆದೊಯ್ದಿದ್ದಾನೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಂದು ಮಹಿಳೆಯರು ಒಂಟಿ ಪ್ರಯಾಣ ಮಾಡುವಾಗ ಹಲವು ಬಾರಿ ಯೋಚಿಸುವಂತೆ ಆಗಿದೆ. ವಿಶೇಷವಾಗಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ, ತಡರಾತ್ರಿಯಲ್ಲಿ ಆ್ಯಪ್ ರೈಡಿಂಗ್ ಸೇವೆಗಳನ್ನು ಬಳಸುವ ಮಹಿಳೆಯರ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಉತ್ತರಾಖಂಡದ ಡೆಹ್ರಾಡೂನ್‌ ನಲ್ಲಿ ಈ ಅಘಾತಕಾರಿ ನಡೆದಿದ್ದು ರಾಪಿಡೊ ಚಾಲಕ ಆ್ಯಪ್ ನ ನಕ್ಷೆಯಲ್ಲಿ ತೋರಿಸುವ ಮಾರ್ಗದಲ್ಲಿ ಹೋಗಲು ನಿರಾಕರಣೆ ಮಾಡಿದ್ದಾನೆ‌.

ವಿಡಿಯೋ ನೋಡಿ:

ಮಹಿಳೆಯೊಬ್ಬರು ರಾತ್ರಿ ಸಮಯದಲ್ಲಿ ಮನೆಗೆ ಹೋಗಲು ರಾಪಿಡೊ ಬುಕ್ ಮಾಡಿದ್ದರು. ಆದರೆ ಚಾಲಕ ಮ್ಯಾಪ್ ನ ಮೂಲಕ ಸಾಗದೇ ಬೆಟ್ಟದ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ತೆರಳಲು ಸಿದ್ದನಾಗಿದ್ದು ಮಹಿಳೆ ಇದನ್ನು ನಿರಾಕರಿಸಿದ್ದಾಳೆ. ಇದಕ್ಕೆ ಕೋಪಗೊಂಡ ಚಾಲಕ ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸಿ ಜೋರಾದ ಮಳೆಯಲ್ಲೂ ಅರ್ಧ ರಸ್ತೆಯಲ್ಲಿ ಇಳಿಸಿದ್ದಾನೆ‌.

Viral Video: ʼʼನಂಗೂ ಅಡ್ಮಿಷನ್‌ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ

ಬೇಕಿದ್ದರೆ ತಾನು ಹೆಚ್ಚುವರಿ ಹಣ ನೀಡುತ್ತೇನೆ, ನಿಗದಿಪಡಿಸಿದ ನಕ್ಷೆಯಲ್ಲೇ ಸಾಗಿ ಎಂದು ಮಹಿಳೆ ವಿನಂತಿಸಿದರೂ ಚಾಲಕ ಒಪ್ಪದೆ ಮಹಿಳೆಯನ್ನು ನಿಂದಿಸಿದ್ದಾನೆ‌‌. ಆತನ ನಡವಳಿಕೆಯನ್ನು ಪ್ರಶ್ನಿಸಿದಾಗ, ಅವನು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದು ನಾನು ಬಯಸಿದ್ದನ್ನು ಮಾಡುತ್ತೇನೆ, ಅದು ನನ್ನ ಕಾರು, ಆದ್ದರಿಂದ ನಾನು ನನ್ನ ಇಚ್ಛೆಯಂತೆ ಮಾಡುತ್ತೇನೆ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾನೆ‌.

​ಅದೃಷ್ಟವಶಾತ್, ಜಾನ್ವಿ ಅವರು ರಾತ್ರಿ 10 ಗಂಟೆಯ ಸುಮಾರಿಗೆ ಸುರಕ್ಷಿತವಾಗಿ ಮನೆಗೆ ತಲುಪಿದ್ದು ಇಂತಹ ಪ್ರಯಾಣದಲ್ಲಿ ಮಹಿಳಾ ಸುರಕ್ಷತಾ ಫೀಚರ್‌ಗಳನ್ನು ಪ್ರಶ್ನಿಸಿದ್ದಾರೆ. ​ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು ಅನೇಕ ಬಳಕೆದಾರರು ಚಾಲಕನ ನಡವಳಿಕೆಯನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರರು ರಾಪಿಡೊ ಬಳಸಬೇಡಿ, ಇದು ಮಹಿಳೆಯರಿಗೆ ಸುರಕ್ಷಿತವಲ್ಲ,ವಿಶೇಷವಾಗಿ ಅಸಂಬದ್ಧ ವಾಹನ ಚಲಾಯಿಸುವ ಚಾಲಕರು, ಹೆಚ್ಚುವರಿ ದರಗಳು, ಅಜಾಗರೂಕ ಚಾಲನೆ, ಮದ್ಯದ ಬಳಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಪಿಡೊ ಸಂಸ್ಥೆ ಕಾಮೆಂಟ್‌ನಲ್ಲಿ ಕ್ಷಮೆಯಾಚಿಸಿದೆ. ಗ್ರಾಹಕರ ಸುರಕ್ಷತೆ ನಮಗೆ ಅತ್ಯಂತ ಪ್ರಮುಖ, ತಕ್ಷಣವೇ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ರೈಡ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ತಿಳಿಸಿ ಎಂದು ಪ್ರತಿಕ್ರಿಯೆ ನೀಡಿದೆ.