ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋದ ಯುಟ್ಯೂಬರ್ ಪತ್ನಿ: ʼರೇಸಿಂಗ್ʼ ದೃಶ್ಯ ವೈರಲ್
Viral Video: ಕೇರಳಂನ ಯುಟ್ಯೂಬರ್ ಅಖಿಲ್ ಎನ್.ಆರ್.ಡಿ. ಮತ್ತು ಅವರ ಪತ್ನಿಯ ದಾಂಪತ್ಯ ಕಲಹದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮದುವೆ ಆದ ಕೆಲವೇ ತಿಂಗಳಿನಲ್ಲಿ ಅವರ ಪತ್ನಿ ಮೇಘಾ ಖಾಸಗಿ ಬಸ್ ಕಂಡಕ್ಟರ್ ಜತೆ ಓಡಿ ಹೋಗಿದ್ದಾಳೆ ಎನ್ನಲಾಗಿದೆ. ಮೇಘಾ ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋಗುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಖಿಲ್ ಎನ್.ಆರ್.ಡಿ. ಮತ್ತು ಮೇಘಾ -
ತಿರುವನಂತಪುರಂ, ಆ. 13: ಕೇರಳಂ ಖ್ಯಾತ ಯುಟ್ಯೂಬರ್ ಅಖಿಲ್ ಎನ್.ಆರ್.ಡಿ. ಮತ್ತು ಅವರ ಪತ್ನಿಯ ದಾಂಪತ್ಯ ಕಲಹದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಮದುವೆ ಆದ ಕೆಲವೇ ತಿಂಗಳಿನಲ್ಲಿ ಅವರ ಪತ್ನಿ ಮೇಘಾ ಮನೆಯನ್ನು ತೊರೆದು ಖಾಸಗಿ ಬಸ್ ಉದ್ಯೋಗಿ ಜತೆ ಓಡಿಹೋಗಿದ್ದಾಳೆ. ಅಖಿಲ್, ಮೇಘಾ ನೆರೆಹೊರೆಯವರಾಗಿದ್ದು, ಸುಮಾರು ಮೂರು ವರ್ಷಗಳ ಕಾಲ ಕಾದು ಮದುವೆಯಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಮೇಘಾ ರಾತ್ರೋರಾತ್ರಿ ಬಸ್ ಕಂಡಕ್ಟರ್ ಜತೆ ಓಡಿ ಹೋಗುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅಖಿಲ್ ಸದಾ ನಗುನಗುತ್ತಾ, ಪ್ರೀತಿ-ವಿಶ್ವಾಸದಿಂದ ಪತ್ನಿ ಜತೆ ಕಾಣಿಸಿಕೊಳ್ಳುತ್ತಿದ್ದರು. ಇವರ ಜೋಡಿಯನ್ನು ಬಹುತೇಕರು ಇಷ್ಟ ಪಟ್ಟಿದ್ದರು. ಆದರೆ ಈ ಜೋಡಿಯ ಸಂಸಾರವೀಗ ಬೀದಿಗೆ ಬಂದಿಳಿದಿದೆ. ಇತ್ತೀಚೆಗೆ ಮಧ್ಯರಾತ್ರಿ ಮೇಘಾ ಮನೆಯಲ್ಲಿ ಧರಿಸಿದ್ದ ನೈಟಿಯಲ್ಲಿಯೇ ಲಗೇಜ್ ಹಿಡಿದು ರಹಸ್ಯವಾಗಿ ಹೊರ ನಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿ:
A popular Kerala Vlogger, Akhil, has shared CCTV footage of his wife eloping with a local bus driver.
— Srikanth Bhalaji (@SBhalaji94) August 12, 2026
They got married in 2024, and she ran away in 2026. This must have been a long-term plan of hers. pic.twitter.com/GIcqPxCDUu
ಆಕೆ ಬಸ್ ಕಂಡಕ್ಟರ್ ಜತೆ ರಾತ್ರೋರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಆಲಪ್ಪುಳ ಜಿಲ್ಲೆಯ ನೂರನಾಡ್ ಮೂಲದ ಅಖಿಲ್ ಮೊದಲು ನೇವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತದನಂತರ ಕಂಟೆಂಟ್ ಕ್ರಿಯೇಟರ್ ಆಗಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. ಅಖಿಲ್ ಮತ್ತು ಮೇಘಾ ಅವರ ವಿವಾಹ 2024ರ ನವೆಂಬರ್ 25ರಂದು ನಡೆಯಿತು. ಮದುವೆಯ ನಂತರ ಮೇಘಾ ಕೂಡ ಅಖಿಲ್ ಅವರ ಯುಟ್ಯೂಬ್ ವ್ಲಾಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಚಾರ್ಜ್ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್ ಕಾರ್ ತಳ್ಳಿದ ಸೈನಿಕ
ಇತ್ತೀಚೆಗೆ ಮೇಘಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಆರಂಭದಲ್ಲಿ ಆತಂಕಗೊಂಡ ಅಖಿಲ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆದರೆ ತಡರಾತ್ರಿ ಮೇಘಾ ಮನೆಯಿಂದ ಹೊರಬಂದು ಕಾರಿನಲ್ಲಿ ತೆರಳುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾದ ಬಳಿಕ ತಿರುವು ಸಿಕ್ಕಿದೆ. ಹೆಚ್ಚುತ್ತಿರುವ ಊಹಾಪೋಹಗಳ ನಡುವೆ, ಮೇಘಾ ಅವರದ್ದೇ ಎಂದು ಹೇಳಲಾದ ವಿಡಿಯೊ ವೈರಲ್ ಆಗಿದೆ.
ವರದಿಗಳ ಪ್ರಕಾರ ಅಖಿಲ್ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಲಾಗಿದೆ. ನಂತರ ವಿಡಿಯೊವನ್ನು ಅಳಿಸಲಾಗಿದೆ ಎಂದು ವರದಿಯಾಗಿದೆ. ಮೂಲ ಪೋಸ್ಟ್ ಲಭ್ಯವಿಲ್ಲದ ಕಾರಣ, ಮೇಘಾ ಅವರ ವಿಡಿಯೊ ಹೌದೇ? ಎಂಬುದು ಸ್ಪಷ್ಟವಾಗಿಲ್ಲ.