ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಾವಿರ ಸಾವಿರ ಕೊಟ್ಟು ಎಸಿ ಕಂಪಾರ್ಟ್‌ಮೆಂಟ್‌ ಹತ್ತಿದ್ರೆ... ಹೀಗಾ ಆಗೋದು? ವಿಡಿಯೊ ನೋಡಿ

ಸೌತ್ ಬಿಹಾರ್ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಲಿಗಳ ಹಾವಳಿ ಇರುವುದಾಗಿ ವರದಿಯಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಪ್ರಶಾಂತ್ ಕುಮಾರ್ ಎಂಬ ಪ್ರಯಾಣಿಕ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇಲಿಗಳು ಹಾವಳಿಯಿಂದ ಕಂಗೆಟ್ಟು, ಆರ್‌ಪಿಎಫ್‌ಗೆ ಇಲಿಗಳಿರುವ ಬಗ್ಗೆ ದೂರು ನೀಡಿದ್ದಾನೆ.

ಇಷ್ಟೊಂದು ಹಣ ಕೊಟ್ಟಿದ್ದು ಇಲಿಗಳ ಕಾಟ ಅನುಭವಿಸುವುದಕ್ಕಾ....?

Profile pavithra Mar 14, 2025 7:55 PM

ರೈಲಿನಲ್ಲಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಎಸಿ ಕೋಚ್‌ ಬುಕ್‌ ಮಾಡುತ್ತಾರೆ. ಯಾಕೆಂದರೆ ಯಾವುದೇ ಕಿರಿಕಿರಿ ಬೇಡ ಆರಾಮಾಗಿ ಹೋಗಬಹುದು ಎಂದು. ಬಿಹಾರದ ವ್ಯಕ್ತಿಯೊಬ್ಬ 3000ರೂಪಾಯಿ ಕೊಟ್ಟು ಸೆಕೆಂಡ್‌ ಎಸಿಯಲ್ಲಿ ಟಿಕೆಟ್‌ ತೆಗೆದುಕೊಂಡಿದ್ದಾನೆ. ಆದರೆ ಕಂಪಾರ್ಟ್‌ಮೆಂಟಿನೊಳಗೆ ಕುಳಿತಾಗ ಅಲ್ಲಿ ಇಲಿಗಳು ಓಡಾಡುತ್ತಿರುವ ದೃಶ್ಯ ಕಂಡು ಶಾಕ್‌ ಆಗಿದ್ದಾನೆ.ಇದರ ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ. ಇನ್ನು ಈತ ಇದನ್ನು ನೋಡಿ ಸುಮ್ಮನಾಗದೇ ಆರ್‌ಪಿಎಫ್‌ಗೆ ಈ ಬಗ್ಗೆ ದೂರು ನೀಡಿದ್ದಾನಂತೆ. ಆದರೆ ಅಧಿಕಾರಿಗಳು ಇದರ ವಿರುದ್ಧ ಯಾವುದೇ ಕ್ರಮ ಕೂಡ ತೆಗೆದುಕೊಳ್ಳಲಿಲ್ಲ ಎಂದು ವರಿದಿಯಾಗಿದೆ.

ಪ್ರಶಾಂತ್‌ ಕುಮಾರ್‌ ಎಂಬಾತ ಎಸಿ ಕಂಪಾರ್ಟ್‌ಮೆಂಟಿನೊಳಗೆ ಇಲಿಗಳು ಸೀಟಿನ ಮೂಲೆಗಳು ಮತ್ತು ನೆಲ ಹೀಗೆ ಎಲ್ಲೆಂದರಲ್ಲಿ ಓಡಾಡುತ್ತಿರುವುದನ್ನು ಕಂಡು ಅವನು ಶಾಕ್‌ ಆಗಿದ್ದಾನೆ.ಇಲಿಗಳ ಓಡಾಟವನ್ನು ಆತನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ರೈಲ್ವೆ ಇಲಾಖೆಯನ್ನು ಎಚ್ಚರಿಸಿದ್ದಾನೆ.ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಎಸಿ ಬೋಗಿಯೊಳಗೆ ಇಲಿಗಳು ಓಡಾಡುತ್ತಿರುವ ದೃಶ್ಯದ ವಿಡಿಯೊ ಇಲ್ಲಿದೆ ನೋಡಿ...



ಪ್ರಯಾಣಿಕನು ಎಸಿ ಟಿಕೆಟ್‍ಗಾಗಿ 3,000 ರೂ.ಗಿಂತ ಹೆಚ್ಚು ಪಾವತಿಸಿದ್ದಾನಂತೆ. ಇಷ್ಟೊಂದು ಹಣ ಕೊಟ್ಟಿದ್ದು ಇಲಿಗಳ ಕಾಟ ಅನುಭವಿಸುವುದಕ್ಕಾ? ಎಂದು ಆತ ಪ್ರಶ್ನಿಸಿದ್ದಾನೆ. ರೈಲಿನಲ್ಲಿ ಇಲಿಗಳು ಸೀಟು, ನೆಲದ ಮೇಲೆ ಓಡಾಡಿದ್ದು ಮಾತ್ರವಲ್ಲದೇ, ಮಲಗಿಕೊಂಡಿದ್ದ ವ್ಯಕ್ತಿಯ ಮೈ ಮೇಲೂ ಹರಿದಾಡಿವೆಯಂತೆ.
ಈ ವಿಡಿಯೊ ನೋಡಿ ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ. ಭಾರತೀಯ ರೈಲ್ವೆಯಲ್ಲಿ, ವಿಶೇಷವಾಗಿ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿನ ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ನೆಟ್ಟಿಗರು ಟೀಕಿಸಿದ್ದಾರೆ. ಈ ವಿಡಿಯೊ ನೋಡಿ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಇದೆಲ್ಲಾ ಕಾಮನ್‌ ಎಂದು ಲೇವಡಿ ಮಾಡಿದ್ದಾರೆ.ಇಲಿಗಳಿಂದ ಆರೋಗ್ಯದ ಮೇಲೆ ತೊಂದರೆಯಾಗುತ್ತದೆ ಎಂದು ಇನ್ನು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಈ ರೀತಿಯ ಘಟನೆ ನೋಡಿದರೆ ಕೋಪ ಬರುತ್ತದೆ ಎಂದು ಇನ್ನು ಕೆಲವು ನೆಟ್ಟಿಗರು ಆಖ್ರೋಶ ವ್ತಕ್ತಪಡಿಸಿದ್ದಾರೆ. ಕುಮಾರ್ ಪೋಸ್ಟ್‌ಗೆ ರೈಲ್ವೆ ಇಲಾಖೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಮಹಿಳಾ ಬೋಗಿಯೊಳಗೆ ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು; ಮುಂದೇನಾಯ್ತು? ವಿಡಿಯೊ ನೋಡಿ

ರೈಲಿನ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಲಿಗಳ ಹಾವಳಿ ಇರುವ ಬಗ್ಗೆ ವರದಿಯಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ರೈಲಿನ ಎಸಿ ಕಂಪಾರ್ಟ್‌ಮೆಂಟ್‌ ಒಳಗೆ ಇಲಿಯೊಂದು ಓಡಾಡಿದ ವಿಡಿಯೊವನ್ನು ಮಹಿಳೆಯೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಳು. ಈ ವಿಡಿಯೊ ಶೀಘ್ರದಲ್ಲೇ ವೈರಲ್ ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲ್ವೆ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಟ್ವೀಟ್‍ ಮಾಡಿದ್ದರು.