ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬಾಲ್ಯದ ಗೆಳತಿಯನ್ನರಸಿ ಹೊರಟ ಭೂಪ- ನೆಟ್ಟಿಗರಿಂದ ಭರ್ಜರಿ ರೆಸ್ಪಾನ್ಸ್‌!

ನೆಟ್ಟಿಗನೊಬ್ಬ ತನ್ನ ಮೊದಲ ಮತ್ತು ಎರಡನೇ ತರಗತಿಗಳಲ್ಲಿ ತೆಗೆದು ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಆತ ತನ್ನ ಬಾಲ್ಯದ ಸ್ನೇಹಿತೆ ಆಶಿತಳನ್ನು ಹುಡುಕಲು ಸಹಾಯವನ್ನು ಕೇಳಿದ್ದಾನೆ. ಈ ಪೋಸ್ಟ್ ಈಗ ಎಲ್ಲರ ಗಮನಸೆಳೆದು ವೈರಲ್(Viral News) ಆಗಿದೆ. ನೆಟ್ಟಿಗರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

ಬಾಲ್ಯ ಗೆಳತಿಯನ್ನರಸಿ ಹೊರಟ ಭೂಪ! ಈತನ ಪೋಸ್ಟ್ ಫುಲ್‌ ವೈರಲ್‌

Profile pavithra Jul 8, 2025 3:35 PM

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಏನಾದರೊಂದು ಸುದ್ದಿಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ವ್ಯಕ್ತಿಯೊಬ್ಬ ತನ್ನ ಮೊದಲ ಮತ್ತು ಎರಡನೇ ತರಗತಿಗಳಲ್ಲಿ ತೆಗೆದು ಫೋಟೊವನ್ನು ಹಂಚಿಕೊಂಡಿದ್ದು ಅದರಲ್ಲಿ ತನ್ನ ಬಾಲ್ಯದ ಸ್ನೇಹಿತೆ(Childhood Friend) ಆಶಿತಳನ್ನು ಹುಡುಕಲು ಸಹಾಯವನ್ನು ಕೇಳಿದ್ದಾನೆ. ಈ ಪೋಸ್ಟ್ ಈಗ ಎಲ್ಲರ ಗಮನಸೆಳೆದು ವೈರಲ್(Viral News) ಆಗಿದ್ದು, ನೆಟ್ಟಿಗರು ಅವನಿಗೆ ಸಹಾಯ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ಶಾಲೆಯಲ್ಲಿ ಜೊತೆಯಾಗಿ ಓದುತ್ತಿದ್ದ ನೆಟ್ಟಿಗ ಮತ್ತು ಆಶಿತಳ ನಡುವೆ ಒಳ್ಳೆಯ ಸ್ನೇಹವಿತ್ತಂತೆ. ಆದರೆ ಆಕೆಯ ತಂದೆಗೆ ಗುಜರಾತ್‍ಗೆ ವರ್ಗಾವಣೆಯಾದ ಕಾರಣ ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಅವರಿಬ್ಬರು ಕೊನೆಯ ಬಾರಿಗೆ 13 ವರ್ಷಗಳ ಹಿಂದೆ ಭೇಟಿಯಾಗಿದ್ದರು. ಆದರೆ ಈಗ ಆತನಿಗೆ ಮತ್ತೆ ಆಕೆಯ ನೆನಪಾಗಿದ್ದು ಅವಳನ್ನು ಸಂಪರ್ಕಿಸುವ ಆಸೆ ವ್ಯಕ್ತಪಡಿಸಿದ್ದಾನೆ.

ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು, "ಕೆಲವು ಕಾರಣಗಳಿಂದ ಅವಳು ಇನ್‌ಸ್ಟಾಗ್ರಾಮ್ ಬಳಸದಿರಬಹುದು. ಹಾಗಾಗಿ ಬೇರೆ ಯಾವುದಾದರೂ ಮಾರ್ಗಗಳನ್ನು ಪ್ರಯತ್ನಿಸಿ” ಎಂದು ಹೇಳುವ ಮೂಲಕ ಸಲಹೆ ನೀಡಿದ್ದಾರೆ. "ನೀವು ಆ ಶಾಲೆಗೆ ಹೋಗಿ ಅವಳ ಮಾಹಿತಿಯನ್ನು ತಿಳಿದುಕೊಳ್ಳಲು ಏಕೆ ಪ್ರಯತ್ನಿಸುತ್ತಿಲ್ಲ? ಅವಳ ನಿಖರವಾದ ವಿಳಾಸ ತಿಳಿಯಬಹುದು." ಎಂದು ಇನ್ನೊಬ್ಬರು ಹೇಳಿದ್ದಾರೆ. "ನಿಮ್ಮ ಬಾಲ್ಯದ ಸ್ನೇಹಿತೆಯನ್ನು ಹುಡುಕಲು ಪ್ರಯತ್ನಿಸಬೇಡಿ. ಅವರ ನೆನಪುಗಳನ್ನು ಹಾಗೆಯೇ ಇರಿಸಿಕೊಳ್ಳಿ. ಅವರು ನಿಮ್ಮ ಬಳಿಗೆ ಬರಬೇಕೆಂದಿದ್ದರೆ ಖಂಡಿತ ಬಂದೇ ಬರುತ್ತಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.ಇನ್ನೊಬ್ಬರು,"ಅವರು ಇನ್ನೂ ಮದುವೆಯಾಗಿರಬಾರದು ಎಂದು ಆಶಿಸುತ್ತೇನೆ" ಎಂದಿದ್ದಾರೆ.

ಈ ವರ್ಷದ ಶುರುವಿನಲ್ಲಿ ಇದೇ ರೀತಿಯ ಘಟನೆಯೊಂದು ವೈರಲ್ ಆಗಿತ್ತು. ಇಬ್ಬರು ಸ್ನೇಹಿತರು ಒಂದೇ ದಿನದಲ್ಲಿ ಭೇಟಿಯಾಗಲು ಸೋಶಿಯಲ್ ಮೀಡಿಯಾ ನೆಟ್ಟಿಗರು ಸಹಾಯ ಮಾಡಿದ್ದರು. ಕ್ಯಾಥರಿನಾ ಸೆಲಿಯಾ ಎಂಬಾಕೆ ಸಿಮನ್ ಎಂಬ ತನ್ನ ಬಾಲ್ಯದ ಸ್ನೇಹಿತನನ್ನು ಕಂಡಿಲ್ಲದ ಕಾರಣ, ಅವನನ್ನು ಹುಡುಕಲು ಚೈನೀ ಸಮುದಾಯದಿಂದ ಸಹಾಯ ಕೇಳುತ್ತಾ ವಿಡಿಯೊವನ್ನು ಪೋಸ್ಟ್ ಮಾಡಿದ್ದಳು.

ಈ ಸುದ್ದಿಯನ್ನೂ ಓದಿ:Viral Video: ಡಾನ್ಸ್‌ ಮಾಡೋ ಜೋಶ್‌ನಲ್ಲಿ ಗುಂಡು ಹಾರಿಸಿದ ವ್ಯಕ್ತಿ; ಇಬ್ಬರು ಡಾನ್ಸರ್ಸ್‌ಗೆ ಗಾಯ

ಆಕೆ ಮತ್ತು ಆತ ಐವೋದಲ್ಲಿ ಖಾಸಗಿ ಕ್ಯಾಥೋಲಿಕ್ ಶಾಲೆಯಲ್ಲಿ ಜೊತೆಯಾಗಿ ಓದಿದ್ದಾರಂತೆ.ಆತ ಆಕೆಯ ಒಳ್ಳೆಯ ಸ್ನೇಹಿತನಾಗಿದ್ದಾನೆ ಎಂದು ಆಕೆ ವಿಡಿಯೊ ಜೊತೆಗೆ, ಸಿಮನ್‌ನ ಒಂದು ಹಳೆಯ ಫೋಟೊವನ್ನು ಕೂಡಾ ಹಂಚಿಕೊಂಡಿದ್ದಾಳೆ. ಸುಮಾರು 22 ಗಂಟೆಗಳ ನಂತರ, ಸಿಮನ್ ಆಕೆಗೆ ವಿಡಿಯೊ ಕಾಲ್‌ ಮಾಡಿದ್ದನು. ಇದರಿಂದ ಇಬ್ಬರು ಸ್ನೇಹಿತರು ಮತ್ತೆ ಒಂದಾದರು.