ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಹಮದಾಬಾದ್ ವಿದ್ಯಾರ್ಥಿಗಳಿಂದ ಬರೋಬ್ಬರಿ 60,000 ಪ್ರಿಂಟ್‌ಔಟ್ ಆರ್ಡರ್: ಅಚ್ಚರಿಯ ವರದಿ ನೀಡಿದ ಬ್ಲಿಂಕ್‌ಇಟ್‌

Viral News: ಡಿಜಿಟಲ್ ತಂತ್ರಜ್ಞಾನದ ಸೇವೆಯನ್ನು ಹೆಚ್ಚು ಬಳಸಿಕೊಳ್ಳುವ ಮೂಲಕ ಭಾರತದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆ ಐಐಎಂ ಅಹಮದಾಬಾದ್‌ನ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ. 2025ರಲ್ಲಿ ಬ್ಲಿಂಕ್‌ಇಟ್‌ನಿಂದ ಐಐಎಂ-ಅಹಮದಾಬಾದ್‌ನ ವಿದ್ಯಾರ್ಥಿಗಳು 60,000ಕ್ಕೂ ಹೆಚ್ಚು ಪ್ರಿಂಟ್ ಔಟ್‌ಗಳನ್ನು ಆರ್ಡರ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಬರೋಬ್ಬರಿ 60,000 ಪ್ರಿಂಟ್‌ಔಟ್ ಆರ್ಡರ್ ಮಾಡಿದ ವಿದ್ಯಾರ್ಥಿಗಳು

ಪ್ರಿಂಟ್‌ಔಟ್ ಆರ್ಡರ್ ಮಾಡಿದ ವಿದ್ಯಾರ್ಥಿಗಳು -

Profile
Pushpa Kumari Dec 30, 2025 9:20 PM

ಗಾಂಧಿನಗರ, ಡಿ. 30: ಕಳೆದ ಕೆಲವು ವರ್ಷಗಳಿಂದ ಡಿಜಿಟಲ್​ ಬಳಕೆ ಹೆಚ್ಚಾಗಿದೆ. ಹಣ ವರ್ಗಾವಣೆ, ಶಾಪಿಂಗ್ ಹೀಗೆ ಅನೇಕ ವಿಚಾರಗಳಿಗೆ ಅನ್‌ಲೈನ್ ಬಳಕೆ ತ್ವರಿತ ರೀತಿಯಲ್ಲಿ ಪರಿಹಾರ ನೀಡುತ್ತಿದೆ. ಈ ಡಿಜಿಟಲ್ ತಂತ್ರಜ್ಞಾನದ ಸೇವೆಯನ್ನು ಹೆಚ್ಚು ಬಳಸಿಕೊಳ್ಳುವ ಮೂಲಕ ಭಾರತದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆ ಐಐಎಂ ಅಹಮದಾಬಾದ್‌ನ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ. 2025ರಲ್ಲಿ ಬ್ಲಿಂಕ್‌ಇಟ್‌ (Blinkit)ನಿಂದ ಐಐಎಂ-ಅಹಮದಾಬಾದ್‌ನ ವಿದ್ಯಾರ್ಥಿಗಳು 60,000ಕ್ಕೂ ಹೆಚ್ಚು ಪ್ರಿಂಟ್ ಔಟ್‌ಗಳನ್ನು ಆರ್ಡರ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ ಬ್ಲಿಂಕ್‌ಇಟ್‌ ವರದಿಯಲ್ಲಿ ಈ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ.

ಬ್ಲಿಂಕ್‌ಇಟ್‌ ತನ್ನ ಇತ್ತೀಚಿನ ವರದಿಯಲ್ಲಿ ಈ ವಿಚಾರ ಬಹಿರಂಗ ಪಡಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ (ಐಐಎಂ-ಎ) ವಿದ್ಯಾರ್ಥಿಗಳು 2025ರಲ್ಲಿ 60,456 ಪ್ರಿಂಟ್ ಔಟ್ ಆರ್ಡರ್ ಮಾಡಿದ್ದಾರೆ ಎಂದು ಬರೆದುಕೊಂಡಿದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರವಲ್ಲ, ಡಿಜಿಟಲ್ ಸೇವೆಯನ್ನು ಬಳಸಿಕೊಳ್ಳುವುದರಲ್ಲೂ ಮುಂದಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಬ್ಲಿಂಕ್‌ಇಟ್‌ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಐಐಎಂ-ಎ ವಿದ್ಯಾರ್ಥಿಗಳು ವರ್ಷಪೂರ್ತಿ ಪ್ರತಿದಿನ ಸರಾಸರಿ 165ಕ್ಕೂ ಹೆಚ್ಚು ಪ್ರಿಂಟ್‌ಔಟ್‌ಗಳನ್ನು ಆರ್ಡರ್ ಮಾಡಿದ್ದಾರೆ. ಇದು ಐಐಎಂನ ಕಠಿಣ ಶೈಕ್ಷಣಿಕ ಪದ್ಧತಿ, ‌ಕೇಸ್ ಸ್ಟಡಿಗಳು ಮತ್ತು ಅಸೈನ್‌ಮೆಂಟ್‌ಗಳ ಪ್ರಿಂಟ್‌ಔಟ್ ಒಳಗೊಂಡಿದ್ದು ಇದು ಭಾರತದ ಅತ್ಯಂತ ಪ್ರತಿಷ್ಠಿತ ವ್ಯಾಪಾರ ಶಾಲೆಗಳಲ್ಲಿ ಒಂದಾಗಿದೆ ಎಂದಿದೆ.

ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕ

ಬ್ಲಿಂಕ್‌ಇಟ್‌ ತನ್ನ ವಿಶಿಷ್ಟ ಶೈಲಿಯ ಬಿಲ್‌ಬೋರ್ಡ್ ಜಾಹೀರಾತಿನಲ್ಲಿ ಈ ವಿಷಯವನ್ನು ಪ್ರಕಟಿಸಿದೆ. ‌60,456 ಪ್ರಿಂಟ್‌ಔಟ್‌ಗಳನ್ನು ಐಐಎಂ-ಅಹಮದಾಬಾದ್‌ನಲ್ಲಿ ಆರ್ಡರ್ ಮಾಡಿದ್ದಾರೆ. ಇದರ ಕೆಳಗೆ ಕ್ಯಾಪ್ಶನ್‌ ನೀಡಲಾಗಿದ್ದು, ʼʼಚೆನ್ನಾಗಿ ಪ್ರಿಂಟ್ ಹಾಕುತ್ತಿದ್ದೀರಿ. ದುಡ್ಡು ಮಾಡುತ್ತಿದ್ದೀರಿʼʼ ಎಂಬ ಶೀರ್ಷಿಕೆ ನೀಡಿದೆ. ಸದ್ಯ ಈ ಪೋಸ್ಟ್ ಭಾರಿ ವೈರಲ್ ಆಗಿದೆ.

ಜೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಜಮ್ಶೆಡ್‌ಪುರ, ಸಂಸ್ಥೆಯ ವಿದ್ಯಾರ್ಥಿಗಳು ಐಐಎಂ ಹೋಲಿಸಿದರೆ ದುಪ್ಪಟ್ಟು ಪ್ರಮಾಣದ ತಂಪು ಪಾನೀಯಗಳನ್ನು ಆರ್ಡರ್ ಮಾಡಿದ್ದಾರೆ. ಇಷ್ಟೊಂದು ಪಾನೀಯ ಆರ್ಡರ್ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕಂಡು ಬ್ಲಿಂಕ್‌ಇಟ್‌ ಓದು ಯಾಕೆ ನಡೆಯುತ್ತಿಲ್ಲ ಎಂದು ತಮಾಷೆಯಾಗಿ ಬರೆದುಕೊಂಡಿದೆ. ಒಂದು ಕಾಲದಲ್ಲಿ ಪ್ರಿಂಟ್‌ಔಟ್‌ಗಳಿಗಾಗಿ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದ ಮನೆ ಬಾಗಿಲಿಗೆ ಪ್ರಿಂಟ್ ತರಿಸಿಕೊಳ್ಳುತ್ತಿರುವುದು ಡಿಜಿಟಲ್ ಯುಗದ ಅಭಿವೃದ್ಧಿ ಎನ್ನಬಹುದು.