ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಜಾಬ್ ಧರಿಸಿ ರೀಲ್ಸ್‌ ಮಾಡಿದ್ದಕ್ಕೆ ತನ್ನದೇ ಸಮುದಾಯದ ನಾಯಕರಿಂದ ಬೆದರಿಕೆಗೊಳಗಾದ ಮುಸ್ಲಿಂ ಯುವತಿ!

ಹಿಜಾಬ್ ಧರಿಸಿ ರೀಲ್‌ಗಳನ್ನು ಮಾಡಿದ್ದಕ್ಕಾಗಿ ಹಲವು ಪ್ರಭಾವಿ ವ್ಯಕ್ತಿಗಳು ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಂಡರು. ಹಿಜಾಬ್ ಧರಿಸಿ ತಾನು ರೀಲ್ ಗಳನ್ನು ಮಾಡಿದ್ದು ಯಾವುದೇ ರೀತಿಯಲ್ಲಿ ಧರ್ಮಕ್ಕೆ ಅವಮಾನ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಹಿಜಾಬ್ ಧರಿಸಿ ರೀಲ್‌ ಮಾಡಿದ್ದಕ್ಕೆ ಮುಸ್ಲಿಂ ಮಹಿಳೆಗೆ ಬೆದರಿಕೆ

ಸಂಗ್ರಹ ಚಿತ್ರ -

ತಮಿಳುನಾಡು: ಹಿಜಾಬ್ (hijab) ಧರಿಸಿ ರೀಲ್ (reels) ಮಾಡಿದ್ದಕ್ಕೆ ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ (social media influencer) ಅಳಲು ತೋಡಿಕೊಂಡ ಘಟನೆ ನಡೆದಿದೆ. ತಾನು ಹಿಜಾಬ್ ಧರಿಸಿ ಧರ್ಮಕ್ಕೆ ಯಾವುದೇ ರೀತಿಯಲ್ಲಿ ಅವಮಾನ ಮಾಡಿಲ್ಲ. ಆದರೂ ಸಮುದಾಯದ ಅನೇಕ ಪ್ರಭಾವಿಗಳು ತನಗೆ ಅವಮಾನ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ರೀಲ್‌ಗಳ (instagram Influencer) ಮೂಲಕ ತನಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ, ನಿಂದನೆ ಮಾಡಲಾಗುತ್ತಿದೆ ಎಂದು ವಹೀದಾ ಅಕ್ಧರ್ ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿ ಗುರುತಿಸಿಕೊಂಡಿರುವ ವಹೀದಾ ಅಕ್ಧರ್, ತಾವು ಹಿಜಾಬ್ ಧರಿಸಿ ಇನ್‌ಸ್ಟಾಗ್ರಾಮ್ ನಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ತನಗೆ ಬಂದಿರುವ ಕಿರುಕುಳ ಮತ್ತು ಕೊಲೆ ಬೆದರಿಕೆಗಳ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಬ್ಲಿಂಕಿಟ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡಿದ ಸಂಸದ ರಾಘವ ಚಡ್ಡಾ: ವಿಡಿಯೊ ನೋಡಿ!

ವಹೀದಾ ಅವರು ತಮ್ಮದೇ ಸಮುದಾಯದ ಬಗ್ಗೆ ಮಾತಾಡಿರುವ ಅವರು ತನಗೆ ಬಂದಿರುವ ಬೆದರಿಕೆ ವಿಡಿಯೊಗಳಲ್ಲಿ ಕೆಲವರು ತಮಿಳುನಾಡಿನ ತನ್ನ ಊರಾದ ಕಡೈಯಲ್ಲೂರ್‌ ಅನ್ನು ಅವಮಾನಿಸಿದ್ದಾರೆ. ಕೆಲವರು ನನ್ನ ಮನೆಗೆ ಹೋಗಿ ತಾಯಿಗೆ ಮಾನಸಿಕ ಹಿಂಸೆ ಕೂಡ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾನು ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ನನ್ನನ್ನು ಒತ್ತಾಯಿಸಲಾಗುತ್ತಿದೆ. ನನ್ನದೇ ಸಮುದಾಯದವರು ಮಾಡುತ್ತಿರುವ ನಿಂದನೆಗಳು ಆನ್‌ಲೈನ್ ದಾಟಿ ವೈಯಕ್ತಿಕ ಜೀವನಕ್ಕೆ ಬಂದಿದೆ. ಕಡೈಯಲ್ಲೂರಿನ ಖ್ಯಾತಿಗೆ ನನ್ನ ರೀಲ್‌ಗಳು ಹಾನಿ ಮಾಡಿವೆ ಎಂದು ಅವರು ಆರೋಪಿಸುತ್ತಿದ್ದಾರೆ ಎಂದು ದೂರಿದರು.

ಲೈಂಗಿಕ ಹಿಂಸೆ, ಮಕ್ಕಳ ಮೇಲಿನ ದೌರ್ಜನ್ಯ, ಬಲವಂತದ ವಿವಾಹಗಳು, ಹದಿಹರೆಯದ ಗರ್ಭಧಾರಣೆಗಳು ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಕುರಿತು ತಾನು ಮಾತನಾಡಿರುವುದು ಪಟ್ಟಣದ ಪ್ರತಿಷ್ಠೆಗೆ ಕಳಂಕ ತರಲಾಗುತ್ತಿದೆ ಎನ್ನಲಾಗುತ್ತಿದೆ. ನಾನು ಹಿಜಾಬ್ ಧರಿಸುತ್ತೇನೆ ನನ್ನ ವಿಷಯವು ಇಸ್ಲಾಂ ಅಥವಾ ಧಾರ್ಮಿಕ ನಂಬಿಕೆಯನ್ನು ಅವಮಾನಿಸುವುದಿಲ್ಲ. ನಾನು ಇಷ್ಟಪಡುವದನ್ನು ಮಾಡುತ್ತಿದ್ದೇನೆ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.

ಫೋನ್‌ನಲ್ಲಿ ಮಾತನಾಡುತ್ತಲೇ ಮಗುವಿಗೆ ಮನಬಂದಂತೆ ಥಳಿಸಿದ ಮಹಿಳೆ; ಪಾಪಿ ತಾಯಿಯ ವಿಡಿಯೋ ವೈರಲ್‌

ನೈತಿಕತೆ ಅಥವಾ ಧರ್ಮದ ಹೆಸರಿನಲ್ಲಿ ಮಹಿಳೆಗೆ ಈ ರೀತಿ ಬೆದರಿಕೆ ಹಾಕುವುದು ಸರಿಯೇ ಎಂದು ಪ್ರಶ್ನಿಸಿರುವ ಅವರು, ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸುವುದು ಮತ್ತು ಇತರರನ್ನು ನೋಯಿಸುವ ಮನಸ್ಥಿತಿ ಬದಲಾಗಬೇಕಿದೆ ಎಂದು ಹೇಳಿದರು.