#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಮೊದಲ ಹೆಜ್ಜೆ ಇಡಲು ಮಗುವಿಗೆ ಸಹಾಯ ಮಾಡಿದ ಶ್ವಾನ; ಹೃದಯಸ್ಪರ್ಶಿ ವಿಡಿಯೊ ವೈರಲ್

ನಾಯಿಯೊಂದು ಚಿಕ್ಕ ಮಗುವಿಗೆ ಮೊದಲ ಹೆಜ್ಜೆಗಳನ್ನು ಇಡಲು ಸಹಾಯ ಮಾಡಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಮೂಕ ಪ್ರಾಣಿಯ ಕಾಳಜಿಯನ್ನು ಕಂಡು ಹಲವರು ಬೆರಗಾಗಿದ್ದಾರೆ.

ಪುಟಾಣಿಯ ಮೊದಲ ಹೆಜ್ಜೆಗೆ ಸಾಥ್‌ ನೀಡಿದ ಸಾಕು ನಾಯಿ

Dog viral video

Profile pavithra Feb 10, 2025 5:58 PM

ಹೊಸದಿಲ್ಲಿ: ಸಾಮಾನ್ಯವಾಗಿ ಚಿಕ್ಕ ಮಕ್ಕಳು ಮೊದಲ ಹೆಜ್ಜೆ ಇಡುವಾಗ ತಾಯಿ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಾಳೆ. ಆದರೆ ಇಲ್ಲೊಂದು ಸಾಕು ನಾಯಿ ಹೆಜ್ಜೆ ಇಡುವ ಚಿಕ್ಕ ಮಗುವಿಗೆ ಸಾಥ್‌ ನೀಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ (Viral Video) ಆಗಿದೆ. ನೇಚರ್ ಈಸ್ ಅಮೇಜಿಂಗ್ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆದಿದೆ. ಈ ವಿಡಿಯೊದಲ್ಲಿ ಚಿಕ್ಕ ಮಗು ತನ್ನ ನಾಯಿಯನ್ನು ಪಕ್ಕದಲ್ಲಿರಿಸಿಕೊಂಡು ಮೊದಲ ಬಾರಿಗೆ ನಡೆಯಲು ಪ್ರಯತ್ನಿಸುವುದು ಸೆರೆಯಾಗಿದೆ. ಮಗು ತನ್ನ ಹೆಜ್ಜೆಗಳನ್ನು ಇಡುವಾಗ ಬೀಳದಂತೆ ನಾಯಿ ಮಗುವಿನ ಹತ್ತಿರ ಹೋಗಿ ಆಧಾರವಾಗಿ ನಿಲ್ಲುತ್ತದೆ.

"ನಾಯಿ ತನ್ನ ಅತ್ಯುತ್ತಮ ಸ್ನೇಹಿತನಿಗೆ ತನ್ನ ಮೊದಲ ಹೆಜ್ಜೆಗಳನ್ನು ಇಡಲು ಸಹಕರಿಸುತ್ತಿದೆೆ" ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ಹೃದಯಸ್ಪರ್ಶಿ ವಿಡಿಯೊ ಕಂಡು ನೆಟ್ಟಿಗರು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.



ಒಬ್ಬ ವ್ಯಕ್ತಿಯು "ಈ ಪ್ರೀತಿಯು ಅತ್ಯುತ್ತಮವಾಗಿದೆ! ಬೆಂಬಲವನ್ನು ನೀಡಲು ಉತ್ತಮ ಮಾರ್ಗವೆಂದರೆ ನಿಮ್ಮ ಪಕ್ಕದಲ್ಲಿರುವುದು!” ಎಂದಿದ್ದಾರೆ. ಇನ್ನೊಬ್ಬರು "ರಕ್ಷಕ, ಬೆಂಬಲಿಗ, ಆಕ್ರಮಣಕಾರನೂ ಹೌದು " ಎಂದು ಎಚ್ಚರಿಕೆ ನೀಡಿದ್ದಾರೆ. "ಪ್ರಾಣಿಗಳು ಮನುಷ್ಯನಿಗಿಂತ ಉತ್ತಮವಾಗಿವೆʼʼ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಇತ್ತೀಚೆಗೆ ಬೀದಿ ನಾಯಿಯ ಹುಟ್ಟುಹಬ್ಬವನ್ನು ಆಚರಿಸುವ ವಿಡಿಯೊ ವೈರಲ್‌ ಆಗಿತ್ತು. ಅದಕ್ಕಾಗಿ ರಸ್ತೆಯುದ್ದಕ್ಕೂ ಬೃಹತ್ ಹೋರ್ಡಿಂಗ್‍ಗಳನ್ನು ಅಳವಡಿಸಲಾಗಿತ್ತು. ಯುವಕರ ಗುಂಪೊಂದು ಬೀದಿ ನಾಯಿಯನ್ನು ತೆರೆದ ಜೀಪಿನಲ್ಲಿ ಸವಾರಿ ಮಾಡಲು ಕರೆದೊಯ್ದು, ಕೇಕ್ ಮತ್ತು ಪಟಾಕಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿತ್ತು.

ಈ ಸುದ್ದಿಯನ್ನೂ ಓದಿ: Dog Attack: 4 ವರ್ಷದ ಮಗನ ಮುಂದೆಯೇ ತಂದೆಯನ್ನು ಬರ್ಬರವಾಗಿ ಕಚ್ಚಿ ಕೊಂದ ಸಾಕು ನಾಯಿಗಳು; ಶಾಕಿಂಗ್‌ ವಿಡಿಯೊ ವೈರಲ್‌

ಕ್ಯಾಲಿಫೋರ್ನಿಯಾದ ಮೀರಾ ಮೆಸಾದಲ್ಲಿ 26 ವರ್ಷದ ಪೆಡ್ರೊ ಒರ್ಟೆಗಾ ಎಂಬ ವ್ಯಕ್ತಿಯನ್ನು ಅವರ 4 ವರ್ಷದ ಮಗನ ಮುಂದೆಯೇ ಅವರ ಮೂರು ಸಾಕು ನಾಯಿಗಳು ಕಚ್ಚಿ ಕೊಂದ ಸುದ್ದಿ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಆಟದ ಮೈದಾನದ ಬಳಿ ಈ ದಾಳಿ ನಡೆದಿದೆ. ಈ ನಾಯಿಗಳನ್ನು ನಿಗ್ರಹಿಸಲು ಪೊಲೀಸರು ಟೇಸರ್‌ಗಳನ್ನು ಬಳಸಿದ್ದಾರೆ. ಬಳಿಕ ನಾಯಿಗಳು (Dog Attack) ಸ್ಥಳದಿಂದ ಪರಾರಿಯಾಗಿವೆ. ನಾಯಿಗಳನ್ನು ತಡೆಯಲು ಗಾಲ್ಫ್ ಕ್ಲಬ್ ಅನ್ನು ಬಳಸಿಕೊಂಡು ಜನರು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನಗಳು ವಿಫಲವಾದವು. ಪೊಲೀಸರು ಬಂದಾಗ, ಅವರು ನಾಯಿಗಳನ್ನು ನಿಗ್ರಹಿಸಲು ಟೇಸರ್ ಬಳಸಿದ್ದಾರೆ. ಅನಂತರ ಅವು ಸ್ಥಳದಿಂದ ಓಡಿಹೋದವು. ಪೊಲೀಸರು ನಾಯಿಗಳನ್ನು ಹುಡುಕುತ್ತಿದ್ದಾರೆ. ಡೋರ್ ಬೆಲ್ ಕ್ಯಾಮೆರಾದಲ್ಲಿ ಒಂದು ನಾಯಿ ಹತ್ತಿರದ ಒಂದು ಗ್ಯಾರೇಜ್‍ನಲ್ಲಿ ಅಲೆದಾಡಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿತ್ತು.