ಛೇ ಇದೆಂಥಾ ಅಸಹ್ಯ: ಸ್ಟಾರ್‌ಬಕ್ಸ್ ಕ್ಯಾನ್‌ನಲ್ಲಿ ಪತ್ತೆಯಾಯ್ತು ಸತ್ತ ಇಲಿ! ವಿಡಿಯೋ ನೋಡಿ
Viral Video: ಮಹಿಳೆಯೊಬ್ಬರು ಸ್ಟಾರ್‌ಬಕ್ಸ್ ಕ್ಯಾನ್ ಅನ್ನು ತಂದಿದ್ದರು. ಇದನ್ನು ಸೇವಿಸಲು ಮುಂದಾದಾಗ ಕ್ಯಾನ್ ನಲ್ಲಿ ವಸ್ತುವಿನ ಆಕಾರದಂತೆ ಪತ್ತೆಯಾಗಿದೆ. ಕ್ಯಾನ್ ಅನ್ನು ಅಲ್ಲಾಡಿಸಿದಾಗ ಭಾರವಾದ ವಸ್ತು ಏನೋ ಇರುವುದು ತಿಳಿದಿದೆ. ಕೂಡಲೇ ಅವರು ಕ್ಯಾನ್ ಅನ್ನು ಕತ್ತರಿಸಿ ಪಾನೀಯ ಹೊರ ಚೆಲ್ಲಿದ್ದಾರೆ. ಈ ವೇಳೆ ಅದರ ಒಳಗೆ ಸತ್ತಿದ್ದ ಸಣ್ಣ ಇಲಿಯೊಂದು ಹೊರಬಂದಿದೆ.
ಸ್ಟಾರ್‌ಬಕ್ಸ್ ಕ್ಯಾನ್‌ನಲ್ಲಿ ಸತ್ತ ಇಲಿ ಪತ್ತೆ -
ನ್ಯೂಯಾರ್ಕ್,ಎ. 15: ಇತ್ತೀಚೆಗೆ ಆಹಾರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸುವ ಅನೇಕ ವಿಡಿಯೊಗಳು ವೈರಲ್ ಆಗಿವೆ. ಹಣ್ಣು ಮಾರಾಟಗಾರರು ಹಣ್ಣುಗಳನ್ನು ತಾಜಾವಾಗಿಡಲು ಕೆಮಿಕಲ್ ಬಳಕೆ ಮಾಡುವ ಬಗ್ಗೆ, ಹೋಟೆಲ್‌ಗಳಲ್ಲಿ ಒಂದೇ ಎಣ್ಣೆಯನ್ನು ಪದೇ ಪದೇ ಬಳಸುವುದು, ನೈರ್ಮಲ್ಯ ಕಾಪಾಡದೇ ಇರುವುದು ಹೀಗೆ ಅನೇಕ ಆತಂಕಕಾರಿ ದೃಶ್ಯಗಳು ಸೆರೆಯಾಗಿವೆ. ಈ ನಡುವೆ ಸ್ಟಾರ್ ಬಕ್ಸ್ ಕ್ಯಾನ್ ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಮಹಿಳೆಯೊಬ್ಬರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಬಾಕ್ಸ್ ಕ್ಯಾನ್ ಕತ್ತರಿಸಿದ ಬಳಿಕ ಒಳಗೆ ಸಿಲುಕಿಕೊಂಡ ವಸ್ತುವಿನಂತಿರುವ ಆಕಾರ ಕಂಡು ಆಕೆ ಆಶ್ಚರ್ಯ ಚಕಿತಳಾಗಿದ್ದಾಳೆ. ಸ್ಟಾರ್ ಬಾಕ್ಸ್ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಸಾವಿರಾರು ಬಳಕೆ ದಾರರು ಅಸಹ್ಯ ವ್ಯಕ್ತಪಡಿಸಿದ್ದಾರೆ ಮತ್ತು ಡಬ್ಬಿಯಲ್ಲಿಟ್ಟ ಪಾನೀಯಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ವಿಡಿಯೋ ನೋಡಿ:
NEW - Starbucks is now receiving massive backlash online after a woman discovered a fully intact mouse inside her can of Double Shot Energy, which she says she plans to sue over. pic.twitter.com/RzzWNVpQzX
— Right Angle News Network (@Rightanglenews) April 13, 2026
ಮಹಿಳೆಯೊಬ್ಬರು ಸ್ಟಾರ್‌ಬಕ್ಸ್ ಕ್ಯಾನ್ ಅನ್ನು ತಂದಿದ್ದರು. ಇದನ್ನು ಸೇವಿಸಲು ಮುಂದಾದಾಗ ಕ್ಯಾನ್ ನಲ್ಲಿ ವಸ್ತುವಿನ ಆಕಾರದಂತೆ ಪತ್ತೆಯಾಗಿದೆ. ಕ್ಯಾನ್ ಅನ್ನು ಅಲ್ಲಾಡಿಸಿದಾಗ ಭಾರವಾದ ವಸ್ತು ಏನೋ ಇರುವುದು ತಿಳಿದಿದೆ. ಕೂಡಲೇ ಅವರು ಕ್ಯಾನ್ ಅನ್ನು ಕತ್ತರಿಸಿ ಪಾನೀಯ ಹೊರ ಚೆಲ್ಲಿದ್ದಾರೆ. ಈ ವೇಳೆ ಅದರ ಒಳಗೆ ಸತ್ತಿದ್ದ ಸಣ್ಣ ಇಲಿಯೊಂದು ಹೊರಬಂದಿದೆ.
Viral Video: ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ; ವಿಡಿಯೊ ಕಂಡು ನೆಟ್ಟಿಗರು ಗರಂ
ಅನೇಕ ವೀಕ್ಷಕರು ಈ ಘಟನೆಯು ಪ್ಯಾಕ್ ಮಾಡಿದ ಪಾನೀಯಗ ಳನ್ನು ಸಂಪೂರ್ಣವಾಗಿ ಮರುಪರಿಶೀಲಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ಇತರರು ಆಹಾರ ಉತ್ಪಾದನೆಯಲ್ಲಿ ಗುಣ ಮಟ್ಟದ ನಿಯಂತ್ರಣದ ಬಗ್ಗೆ ವ್ಯಾಪಕ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸಿದ್ದಾರೆ. ಆದಾಗ್ಯೂ, ಮೊಕದ್ದಮೆ ಅಥವಾ ಪರಿಶೀಲಿಸಿದ ದೂರಿನ ಯಾವುದೇ ಅಧಿಕೃತ ದೃಢೀಕರಣವು ಹೊರ ಬಂದಿಲ್ಲ. ಬಳಕೆದಾರರೊಬ್ಬರು ವಿಡಿಯೋ ವೈರಲ್ ಆದ ನಂತರ ನಕಲಿ ಸ್ಟಂಟ್ ಎಂದು ಶಂಕಿಸಿದ್ದಾರೆ.