ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏನಾಗ್ತಿದೆ ದೇಶದಲ್ಲಿ? ಮಹಿಳೆಗೆ ಚುಡಾಯಿಸಿದ್ದನ್ನು ವಿರೋಧಿಸಿದ ಕುಟುಂಬವನ್ನು 15 ಕಿಲೋ ಮೀಟರ್‌ ಬೆನ್ನಟ್ಟಿ ಹಲ್ಲೆ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌

Viral Video: ಮಹಾರಾಷ್ಟ್ರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಜಲಪಾತ ವೀಕ್ಷಿಸಲು ಬಂದಿದ್ದ ಮಹಿಳೆಗೆ ಕೆಲವು ಯುವಕರು ಚುಡಾಯಿಸಿದ್ದಾರೆ. ಆದರೆ ಇದನ್ನು ಪ್ರಶ್ನಿಸಿದವರನ್ನು ಸುಮಾರು 15 ಕಿ.ಮೀ. ಬೆನ್ನಟ್ಟಿ ಈ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ‌. ಈ ಘಟನೆಯ ದೃಶ್ಯ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಕಿರುಕುಳ ವಿರೋಧಿಸಿದ ಕುಟುಂಬ ಮೇಲೆಯೇ ದುಷ್ಕರ್ಮಿಗಳ ದಾಳಿ

ಪ್ರವಾಸಿ ಮಹಿಳೆಗೆ ದುಷ್ಕರ್ಮಿಗಳಿಂದ ಕಿರುಕುಳ -

Profile
Pushpa Kumari Jul 14, 2026 3:11 PM

ಮುಂಬೈ, ಜು. 14: ಇತ್ತೀಚೆಗೆ ಮಹಿಳೆಯರ ಮೇಲಿನ ಕಿರುಕುಳ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಜಲಪಾತ ವೀಕ್ಷಿಸಲು ಪ್ರವಾಸ ಬಂದಿದ್ದ ಮಹಿಳೆಯನ್ನು ಕೆಲವು ಯುವಕರು ಚುಡಾಯಿಸಿದ್ದಾರೆ. ಬಳಿಕ ಇದನ್ನು ಪ್ರಶ್ನಿಸಿದ ಕುಟುಂಬವೊಂದರ ಕಾರನ್ನು ಸುಮಾರು 15 ಕಿಲೋ ಮೀಟರ್‌ನಷ್ಟು ಹಿಂಬಾಲಿಸಿ ಈ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ‌. ಕಾರನ್ನು ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಈ ಘಟನೆಯ ದೃಶ್ಯ ವೈರಲ್ (Viral News) ಆಗಿದ್ದು, ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾವಲಿ ಅಣೆಕಟ್ಟು ಮತ್ತು ಜಲಪಾತ ವೀಕ್ಷಿಸಲು ಪ್ರವಾಸಿಗರು ಕುಟುಂಬ ಸಮೇತ ಆಗಮಿಸಿದ್ದರು. ಈ ಕುಟುಂಬದ ಮಹಿಳೆಯೊಬ್ಬರಿಗೆ ಯುವಕರ ಗುಂಪು ಅಸಹ್ಯವಾಗಿ ಚುಡಾಯಿಸಿದ್ದಾರೆ. ಇದನ್ನು ಕುಟುಂಬಸ್ಥರು ಪ್ರಶ್ನಿಸಿದ್ದು, ಮೊದಲು ಮಾತಿನ ಚಕಮಕಿ ನಡೆದು ನಂತರ ಇದು ದೈಹಿಕ ಹಲ್ಲೆಗೂ ಕಾರಣವಾಯ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಪ್ರವಾಸಿಗರ ಕಾರನ್ನು ಸುಮಾರು 15 ಕಿಲೋ ಮೀಟರ್‌ವರೆಗೆ ಬೆನ್ನಟ್ಟಿ ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿದ್ದಾರೆ.

ವಿಡಿಯೊ ನೋಡಿ:



ಪೊಲೀಸರ ಪ್ರಕಾರ, ಈ ದುಷ್ಕರ್ಮಿಗಳ ಗುಂಪು ಪ್ರವಾಸಿ ಮಹಿಳೆಯೊಬ್ಬರ ಬಳಿ ಬಂದು ಶಿಳ್ಳೆ ಹೊಡೆದು ಕಿರುಕುಳ ನೀಡಿದೆ. ಇದನ್ನು ಮಹಿಳೆಯ ಸಂಬಂಧಿಕರು ಪ್ರಶ್ನಿಸಿದ್ದು, ಈ ವಾಗ್ವಾದ ದೈಹಿಕ ಘರ್ಷಣೆಗೆ ಕಾರಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ಧಂತೆ ಪ್ರವಾಸಿಗರು ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ. ದುಷ್ಕರ್ಮಿಗಳು ಬಿಳಿ ಬಲೆನೊ ಕಾರ್‌ ಮತ್ತು ಬೈಕ್ ಮೂಲಕ ಹೆದ್ದಾರಿಯಲ್ಲಿ ಸುಮಾರು 15 ಕಿಲೋ ಮೀಟರ್ ಬೆನ್ನಟ್ಟಿದ್ದಾರೆ.

ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ

ಬೆನ್ನಟ್ಟುವ ಸಮಯದಲ್ಲಿ ದುಷ್ಕರ್ಮಿಗಳು ಪ್ರವಾಸಿಗರ ಕಾರಿನ ಮೇಲೆ ಕಬ್ಬಿಣದ ರಾಡ್‌ಗಳನ್ನು ಎಸೆದು ಕಿಟಕಿ ಗಾಜುಗಳು ಒಡೆದು ಅಪಾರ ಹಾನಿಯನ್ನುಂಟು ಮಾಡಿದವು. ಸಂತ್ರಸ್ತರು ನೀಡಿದ ವಿಡಿಯೊ ಪುರಾವೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಇದುವರೆಗೆ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪೈಕಿ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ. ಬಂಧಿತರಲ್ಲಿ ಇಗತ್ಪುರಿ, ನಂದಗಾಂವ್ ಸಾದೋ ಮತ್ತು ಮಾಣಿಕ್ ಖಾಂಬ್ ಭಾಗದ ಯುವಕರು ಸೇರಿದ್ದಾರೆ. ಇವರಲ್ಲಿ ಪ್ರಮುಖ ಆರೋಪಿ ಭೋಯಿರ್ ವಿರುದ್ಧ ಈಗಾಗಲೇ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಅಡಿಯಲ್ಲಿ ದೂರು ದಾಖಲಿಸಲಾಗಿದೆ.