ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೆಲ್ಮೆಟ್ ಧರಿಸದಿದ್ದಕ್ಕೆ ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ಟ್ರಾಫಿಕ್ ಪೊಲೀಸ್: ಇಂದೋರ್‌ನಲ್ಲಿ ಹೈಡ್ರಾಮ

Viral News: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಹೆಲ್ಮೆಟ್ ಧರಿಸದ ವಿಚಾರವಾಗಿ ನಡೆದ ಜಗಳವು ವಿಕೋಪಕ್ಕೆ ಕಾರಣವಾಗಿದೆ. ಹೆಲ್ಮೆಟ್ ತಪಾಸಣೆ ವೇಳೆ ಬಿಜೆಪಿ ನಾಯಕನಿಗೆ ಸಂಚಾರಿ ಪೊಲೀಸ್‌ ಒಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್

ಮಧ್ಯ ಪ್ರದೇಶದ ಇಂದೋರ್‌ನಲ್ಲಿ ವಾಹನ ತಪಾಸಣೆ ವೇಳೆ ನಡೆದ ಹೈಡ್ರಾಮ -

Profile
Pushpa Kumari May 9, 2026 7:50 PM

ಭೋಪಾಲ್‌, ಮೇ 9: ಭಾರತದಲ್ಲಿ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ನಿಯಮ ಉಲ್ಲಂಘನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದೇ ಇರುವುದು, ವೇಗದ ಪ್ರಯಾಣ, ಸಿಗ್ನಲ್ ಜಂಪ್ ಪ್ರಯಾಣ ಹೀಗೆ ಹಲವು ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಹೆಲ್ಮೆಟ್ ಧರಿಸದ ವಿಚಾರವಾಗಿ ನಡೆದ ಜಗಳವು ವಿಕೋಪಕ್ಕೆ ತಿರುಗಿದೆ. ಹೆಲ್ಮೆಟ್ ತಪಾಸಣೆ ವೇಳೆ ಬಿಜೆಪಿ ನಾಯಕನಿಗೆ ಮಹಿಳಾ ಸಂಚಾರಿ ಪೊಲೀಸ್ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದ್ದು ಹೆಲ್ಮೆಟ್ ವಿಚಾರವಾಗಿ ಆರಂಭವಾದ ಜಗಳವು ವಿಕೋಪಕ್ಕೆ ತಿರುಗಿದೆ. ಮಾಹಿತಿಯ ಪ್ರಕಾರ, ಬಿಜೆಪಿ ನಾಯಕ ವೀರೇಂದ್ರ ಶೆಂಡ್ಗೆ ಅವರನ್ನು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದ ಕಾರಣ ವಾಹನ ನಿಲ್ಲಿಸಿದ್ದರು. ಅಧಿಕಾರಿ ಅವರ ದಾಖಲೆಗಳನ್ನು ತೋರಿಸಲು ಕೇಳಿದ್ದು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಾರೆ.

ಇನ್ಸ್ಟಾಗ್ರಾಮ್​ನಲ್ಲಿ ಗೆಳೆಯನಿಗೆ ಹುಡುಗಿಯಿಂದ ಮೆಸೇಜ್‌; ಬೆಲ್ಟ್‌ನಲ್ಲಿ ಅಟ್ಟಾಡಿಸಿ ಹೊಡೆದ ಗೆಳತಿ

ಇಂದೋರ್‌ನಲ್ಲಿ ಎಂದಿನಂತೆ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಚಲಾಯಿಸುತ್ತಿದ್ದ ಬಿಜೆಪಿ ನಾಯಕ ವೀರೆಂದ್ರ ಶೆಂಡ್ಗೆ ಅವರನ್ನು ಟ್ರಾಫಿಕ್ ಪೊಲೀಸ್‌ ಅಧಿಕಾರಿಯೊಬ್ಬರು ತಡೆದಿದ್ದಾರೆ. ಆಗ ದಂಡ ಪಾವತಿಸಲು ಹೋದಾಗ ಜಗಳ ಆರಂಭವಾಗಿದೆ. ಎರಡೂ ಕಡೆಯವರು ರಸ್ತೆಯಲ್ಲಿ ತೀವ್ರ ಮಾತಿನ ಚಕಮಕಿಯಲ್ಲಿ ತೊಡಗಿದರು. ವಾಗ್ವಾದದ ಸಮಯದಲ್ಲಿ ಸಂಚಾರ ಪೊಲೀಸ್ ಅಧಿಕಾರಿ ಶೆಂಡ್ಗೆಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಸ್ಥಳದಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದು ಜನರು ಸುತ್ತಲೂ ಜಮಾಯಿಸಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ.

ಘಟನೆ ಬೆಳಕಿಗೆ ಬಂದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವರದಿಗಳ ಪ್ರಕಾರ, ಸಂಚಾರ ಪೊಲೀಸ್ ಅಧಿಕಾರಿಯನ್ನು ಮುಂದಿನ ವಿಚಾರಣೆಯವರೆಗೆ ಅಮಾನತುಗೊಳಿಸಲಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದು ಕರ್ತವ್ಯದ ಭಾಗವಾಗಿದ್ದರೂ, ಯಾವುದೇ ರೀತಿಯ ದೈಹಿಕ ಹಲ್ಲೆ ಮಾನ್ಯವಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.