ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೋಗಿಗಳನ್ನು ಕರೆದೊಯ್ಯುವ ಆಂಬ್ಯುಲೆನ್ಸ್‌ನಲ್ಲಿ ಈರುಳ್ಳಿ ಮೂಟೆಗಳ ಸಾಗಾಟ: ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ

Viral Video: ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗೆ ಬಳಸಬೇಕಾದ ಆಂಬ್ಯುಲೆನ್ಸ್‌ಗಳನ್ನು ಈರುಳ್ಳಿ‌ ಮೂಟೆ ಸಾಗಿಸಲು ಬಳಸಲಾಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಸರಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಆಂಬ್ಯುಲೆನ್ಸ್‌ನಲ್ಲೇ ಮಾರುಕಟ್ಟೆಗೆ ಈರುಳ್ಳಿ ಸಾಗಾಟ: ನೆಟ್ಟಿಗರು ಕಿಡಿ

ಆಂಬ್ಯುಲೆನ್ಸ್‌ನಲ್ಲೇ ಮಾರುಕಟ್ಟೆಗೆ ಈರುಳ್ಳಿ ಸಾಗಾಟ -

Profile
Pushpa Kumari Aug 8, 2026 4:56 PM

ಭೋಪಾಲ್‌, ಆ. 8: ಏನೇ ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಬಳಸಲಾಗುತ್ತದೆ. ಆದರೆ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗೆ ಬಳಸಬೇಕಾದ ಆಂಬ್ಯುಲೆನ್ಸ್‌ ಅನ್ನು ಈರುಳ್ಳಿ‌ ಮೂಟೆ ಸಾಗಿಸಲು ಉಪಯೋಗಿಸಲಾಗಿದೆ. ಈ ದೃಶ್ಯ (Viral Video) ನೋಡಿದ ಬಳಕೆದಾರರು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸಗಟು ತರಕಾರಿ ಮಾರುಕಟ್ಟೆಗೆ ಆಂಬ್ಯುಲೆನ್ಸ್‌ಗಳಲ್ಲಿ ಈರುಳ್ಳಿ ಮೂಟೆಗಳನ್ನು ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಮಾರುಕಟ್ಟೆಯಲ್ಲಿ ತರಕಾರಿಗಳಿದ್ದ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳಿಂದ ಈರುಳ್ಳಿ ಮೂಟೆಗಳನ್ನು ಕೆಳಗಿಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಎರಡು ಆಂಬ್ಯುಲೆನ್ಸ್‌ಗಳಲ್ಲಿ ಈರುಳ್ಳಿ ಮೂಟೆಗಳಿದ್ದು ಇಂತಹ ವಾಹನಗಳನ್ನು ಸರಕು ಸಾಗಣೆಕೆಗೆ ಬಳಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇತ್ತೀಚೆಗೆ ಅಧಿಕಾರಿಗಳೂ ಕೂಡ ಸರ್ಕಾರಿ ವಾಹನಗಳನ್ನು ವೈಯಕ್ತಿಕ ಕೆಲಸಕ್ಕೆ ಬಳಸಿದ ಅನೇಕ ದೃಶ್ಯಗಳು ವೈರಲ್ ಆಗಿವೆ. ಸರ್ಕಾರ ಈ ಬಗ್ಗೆ ಅಧಿಸೂಚನೆ ನೀಡಿದರೂ ಕೆಲವರು ನಿಯಮವನ್ನು ಗಾಳಿಗೆ ತೂರುತ್ತಾರೆ. ತುರ್ತು ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೆ ಪರದಾಡುವ ಜನರ ಮಧ್ಯೆ ಇಂತಹ ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವ ಬಗ್ಗೆ ಆಕ್ರೋಶ ಕೇಳಿಬಂದಿದೆ.

8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ

ವಿಡಿಯೊವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ? ವಾಹನಗಳನ್ನು ನಿಜವಾಗಿಯೂ ಈರುಳ್ಳಿ ಸಾಗಿಸಲು ಬಳಸಲಾಗಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸಬೇಕಿದೆ. ಸ್ಥಳೀಯ ನಿವಾಸಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದ್ದಾರೆ. ಅಧಿಕಾರಿಗಳು ವೀಡಿಯೊದ ಸತ್ಯಾ ಸತ್ಯತೆಯನ್ನು ಪರಿಶೀಲನೆ ನಡೆಸಬೇಕು, ಆಂಬ್ಯುಲೆನ್ಸ್‌ಗಳ ಮಾಲೀಕರನ್ನು ಗುರುತಿಸಿ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಬಳಕೆದಾರರೊಬ್ಬರು ನಿಯಮ ಗಳನ್ನು ಉಲ್ಲಂಘಿಸಲಾಗಿದೆ ಎಂದು ಕಂಡುಬಂದಲ್ಲಿ ಸರಿಯಾದ ದಂಡ ವಿಧಿಸಬೇಕೆಂದು ಕೋರಿದ್ದಾರೆ.