ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಯಂತ್ರಣ ತಪ್ಪಿ ಟ್ರಕ್‌ ಪಲ್ಟಿ: ರಸ್ತೆಗೆ ಚೆಲ್ಲಿದ ತುಪ್ಪ ಸಂಗ್ರಹಿಸಲು ಕ್ಯಾನ್ ಹಿಡಿದು ಮುಗಿಬಿದ್ದ ಸ್ಥಳೀಯರು

Viral Video: ಪ್ರಾಣ ಹೋಗುವ ಸಮಯದಲ್ಲೂ ಜನರು ತಮ್ಮ ಲಾಭವನ್ನೇ ನೋಡಿಕೊಳ್ಳುವವರೇ ಹೆಚ್ಚು. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ದೇಸಿ ತುಪ್ಪ ಚೆಲ್ಲಿ ರಸ್ತೆಯುದ್ದಕ್ಕೂ ಹರಿಡಿತ್ತು. ಇದನ್ನು ಗಮನಿಸಿದ ಜನರು ಸಂತ್ರಸ್ತರಿಗೆ ನೆರವಾಗುವ ಬದಲು ಪ್ಲಾಸ್ಟಿಕ್ ಕ್ಯಾನ್ ಹಿಡಿದು ತುಪ್ಪ ತುಂಬಿಸಿಕೊಳ್ಳಲು ಮುಗಿಬಿದ್ದರು.

ಟ್ರಕ್ ಪಲ್ಟಿಯಾಗಿ ದೇಸಿ ತುಪ್ಪ ಚೆಲ್ಲಾಪಿಲ್ಲಿ; ಸಂಗ್ರಹಿಸಲು ಮುಗಿಬಿದ್ದ ಜನ

ಟ್ರಕ್ ಪಲ್ಟಿಯಾಗಿ ರಸ್ತೆಗೆ ಚೆಲ್ಲಿದ ದೇಸಿ ತುಪ್ಪ -

Profile
Pushpa Kumari Sep 24, 2026 10:07 PM

ಲಖನೌ, ಸೆ. 24: ಆಧುನಿಕ ಜಗತ್ತಿನಲ್ಲಿ ಮಾನವೀಯತೆ ಅನ್ನೋದು ಮರೆಯಾಗಿ ಬಿಟ್ಟಿದೆ. ಪ್ರಾಣ ಹೋಗುವ ಸಮಯದಲ್ಲೂ ಜನರು ತಮ್ಮ ಸ್ವಾರ್ಥ ನೋಡಿಕೊಳ್ಳುವವರೇ ಹೆಚ್ಚು. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಆಘಾತಕಾರಿ ಘಟನೆಯೊಂದು (Viral News) ನಡೆದಿದೆ. ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ದೇಸಿ ತುಪ್ಪ ಚೆಲ್ಲಿ ರಸ್ತೆ ಯುದ್ದಕ್ಕೂ ಹರಿಡಿತ್ತು. ಇದನ್ನು ಗಮನಿಸಿದ ಜನರು ಸಂತ್ರಸ್ತರಿಗೆ ನೆರವಾಗುವ ಬದಲು ಪ್ಲಾಸ್ಟಿಕ್ ಕ್ಯಾನ್ ಹಿಡಿದು ತುಪ್ಪ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಹರಿಯಾಣದಿಂದ ರುದ್ರಪುರದ ಕಾರ್ಖಾನೆಯೊಂದಕ್ಕೆ ತೆರಳುತ್ತಿದ್ದ ಟ್ರಕ್‌ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಹೆಚ್ಚಿನ ಪ್ರಮಾಣದ ದೇಸಿ ತುಪ್ಪ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿತು. ಈ ಘಟನೆಯಿಂದಾಗಿ ಸ್ಥಳೀಯರು ಪಲ್ಟಿಯಾದ ವಾಹನದತ್ತ ಧಾವಿಸಿ, ರಸ್ತೆಯಲ್ಲಿ ಚೆಲ್ಲಿದ್ದ ತುಪ್ಪವನ್ನು ತುಂಬಿಸಿಕೊಳ್ಳಲು ಮುಂದಾದರು.

ವಿಡಿಯೊ ನೋಡಿ:



ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜನರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಜನರು ಚಾಲಕನಿಗೆ ನೆರವು ನೀಡುವ ಬದಲು ರಸ್ತೆಗೆ ಚೆಲ್ಲಿದ ತುಪ್ಪವನ್ನು ತುಂಬಿಕೊಳ್ಳಲು ಪಾತ್ರೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಮುಗಿಬಿದ್ದರು. ​ಟ್ರಕ್ ರಸ್ತೆಬದಿಗೆ ಮಗುಚಿ ಬಿದ್ದಿದ್ದ ಪರಿಣಾಮವಾಗಿ , ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.

ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಚದುರಿಸಿ ರಸ್ತೆಯಲ್ಲಿದ್ದ ವಾಹನವನ್ನು ತೆರವುಗೊಳಿಸಿದರು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಗಾಯ ಸಂಭವಿಸಿಲ್ಲ. ​ಜನರು ರಸ್ತೆಯಲ್ಲಿ ಚೆಲ್ಲಿದ ತುಪ್ಪವನ್ನು ಸಂಗ್ರಹಿಸುತ್ತಿರುವ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕರು ಟೀಕಿಸಿದ್ದಾರೆ.

ವೈರಲ್ ವಿಡಿಯೊದಲ್ಲಿ ಕೆಲವರು ತುಪ್ಪವನ್ನು ಸಂಗ್ರಹಿಸುತ್ತಿದ್ದರೆ, ಇನ್ನೂ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯುತ್ತಿದ್ದರು. ನೆಟ್ಟಿಗರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಪಘಾತದ ಸಮಯದಲ್ಲಿ ಸಂತ್ರಸ್ತರಿಗೆ ನೆರವಾಗುವ ಬದಲು ತುಪ್ಪವೇ ನೋಡದ ರೀತಿ ವರ್ತನೆ ತೋರುತ್ತಿದ್ದಾರೆ ಎಂದಿದ್ದಾರೆ.