Viral Video: ಇಪಿಸಿ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷರ ಕೈ ಹಿಡಿದು ಶಕ್ತಿ ಪ್ರದರ್ಶನ ತೋರಿದರೆ ಟರ್ಕಿ ಅಧ್ಯಕ್ಷ?
ಇಪಿಸಿ ಶೃಂಗಸಭೆಯ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಸಂವಾದದ ವೇಳೆಯಲ್ಲಿ ಮೊದಲು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಸ್ನೇಹಪರವಾಗಿ ಹಸ್ತಲಾಘವ ಮಾಡಿ ಬಳಿಕ ಅವರ ಕೈ ಬೆರಳೊಂದನ್ನು ಗಟ್ಟಿಯಾಗಿ ಹಿಡಿದರು. ಅನಂತರ ಅವರ ಕೈಗಳ ಮೇಲೆ ಮೃದುವಾಗಿ ತಟ್ಟಿದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಟಿರಾನಾ: ಭಾರತದ ಆಪರೇಷನ್ ಸಿಂದೂರ್ (Operation Sindoor) ಬಳಿಕ ಪಾಕಿಸ್ತಾನದ (Pakistan) ಬೆಂಬಲಕ್ಕೆ ನಿಂತ ಟರ್ಕಿ (Turkey) ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬಳಿಕ ಫ್ರಾನ್ಸ್ ಅಧ್ಯಕ್ಷರೊಂದಿಗೆ (French President Emmanuel Macron) ಟರ್ಕಿ ಅಧ್ಯಕ್ಷರ (Turkish President Recep Tayyip Erdogan) ವಿಚಿತ್ರ ನಡೆಯೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಟಿರಾನಾದಲ್ಲಿ ನಡೆಯುತ್ತಿರುವ ಯುರೋಪಿಯನ್ ರಾಜಕೀಯ ಸಮುದಾಯ (ಇಪಿಸಿ) ಶೃಂಗಸಭೆಯ ಸಂದರ್ಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕೈ ಬೆರಳನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಬಲವಾಗಿ ಹಿಡಿದಿರುವ ಅಸಾಮಾನ್ಯ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇಪಿಸಿ ಶೃಂಗಸಭೆಯ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಸಂವಾದದ ವೇಳೆಯಲ್ಲಿ ಮೊದಲು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಸ್ನೇಹಪರವಾಗಿ ಹಸ್ತಲಾಘವ ಮಾಡಿ ಬಳಿಕ ಅವರ ಕೈ ಬೆರಳೊಂದನ್ನು ಗಟ್ಟಿಯಾಗಿ ಹಿಡಿದರು. ಅನಂತರ ಅವರ ಕೈಗಳ ಮೇಲೆ ಮೃದುವಾಗಿ ತಟ್ಟಿದರು. ಈ ದೃಶ್ಯ ಕ್ಯಾಮೆರಾ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಸ್ತಲಾಘವ ಮಡಿದ ಬಳಿಕ ಮ್ಯಾಕ್ರನ್ ಅವರ ಕೈಯನ್ನು ಬಿಡುವ ಬದಲು ಟರ್ಕಿ ಅಧ್ಯಕ್ಷರು ಅನಿರೀಕ್ಷಿತವಾಗಿ ಅವರ ಬೆರಳನ್ನು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಅವರು ಫ್ರಾನ್ಸ್ ಅಧ್ಯಕ್ಷರ ಮುಖ ನೋಡುವ ಬದಲು ಎದುರು ದಿಟ್ಟಿಸಿ ನೋಡುತ್ತಿದ್ದರು. ಮುಂದಿನ ಕೆಲವು ಸೆಕೆಂಡುಗಳ ಕಾಲ ಫ್ರಾನ್ಸ್ ಅಧ್ಯಕ್ಷರು ತಮ್ಮ ಕೈಯನ್ನು ಬಿಡಿಸಲು ಪ್ರಯತ್ನಿಸುತ್ತಿದ್ದಾಗ ಎರ್ಡೊಗನ್ ಮ್ಯಾಕ್ರನ್ ಅವರ ಬೆರಳನ್ನು ಬಿಟ್ಟರು. ಬಳಿಕ ಇಬ್ಬರೂ ನಾಯಕರು ನಗುತ್ತಾ ಮಾತನಾಡಿದರು.
ಈ ಸಂವಾದದ ಸಮಯದಲ್ಲಿ ಫ್ರಾನ್ಸ್ ಅಧ್ಯಕ್ಷರು ನಿಂತಿದ್ದರೆ ಎರ್ಡೊಗನ್ ಕುಳಿತೇ ಇದ್ದರು. ಈ ವೈರಲ್ ವಿಡಿಯೊ ನೋಡಿ ಅನೇಕರು ಇದು ಎರ್ಡೊಗನ್ ಅವರ ಶಕ್ತಿಯ ಸೂಕ್ಷ್ಮ ಪ್ರದರ್ಶನವೇ ಎಂದು ಪ್ರಶ್ನಿಸಿದ್ದಾರೆ. ಟರ್ಕಿಶ್ ನಾಯಕ ಬಹುಶಃ ದೇಹ ಭಾಷೆಯ ಮೂಲಕ ತಮ್ಮ ಪ್ರಾಬಲ್ಯವನ್ನು ತೋರಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಇದು ಅಧ್ಯಕ್ಷ ಎರ್ಡೋಗನ್ ಅವರ ಅಧಿಕಾರಯುತ ನಡೆ. ಮ್ಯಾಕ್ರನ್ ಅವರು ಸಾಮಾನ್ಯವಾಗಿ ತಮ್ಮ ಪ್ರಾಬಲ್ಯವನ್ನು ತೋರ್ಪಡಿಸುತ್ತಾರೆ. ಇದು ಕೂಡ ಅದರಲ್ಲಿ ಒಂದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ವಿವಿಧ ರೀತಿಯಲ್ಲಿ ಹ್ಯಾಂಡ್‌ಶೇಕ್‌ಗಳನ್ನು ಮಾಡುತ್ತಾರೆ ಎಂದು ಎಕ್ಸ್ ನಲ್ಲಿ ಜಾರ್ಜ್ ಎಂ ನಿಕೋಲಸ್ ಎಂಬವರು ಬರೆದಿದ್ದಾರೆ.
Turkish President Recep Tayyip Erdoğan spotted clamping down on French President Emmanuel Macron's finger.
— Collin Rugg (@CollinRugg) May 17, 2025
The incident took place at the European Political Community summit in Albania yesterday.
Turkish media is claiming that Macron was attempting to "establish… pic.twitter.com/nqo6eqXvCX
ಈ ಕುರಿತು ಪ್ರತಿಕ್ರಿಯಿಸಿರುವ ಟರ್ಕಿಯ ಮಾಧ್ಯಮ ಸಂಸ್ಥೆ ಸಬಾ, ಫ್ರಾನ್ಸ್ ಅಧ್ಯಕ್ಷರು ಎರ್ಡೋಗನ್ ಅವರ ಭುಜದ ಮೇಲೆ ಕೈ ಹಾಕಿ ಶ್ರೇಷ್ಠತೆಯನ್ನು ಪ್ರದರ್ಶಿಸಲು ಪ್ರಯತ್ನಿಸಿದರು. ಆದರೆ ಎರ್ಡೋಗನ್ ಅದನ್ನು ಅನುಮತಿಸಲಿಲ್ಲ ಎಂದು ಹೇಳಿದೆ.
ಇದನ್ನು ರಷ್ಯಾದ ಮಾಧ್ಯಮ ಸಂಸ್ಥೆ ಪಿಟಿ ಪವರ್‌ಪ್ಲೇ ನಡೆ ಎಂದು ಕರೆದಿದೆ. ಫ್ರಾನ್ಸ್ ಅಧ್ಯಕ್ಷರು ತಮ್ಮ ಭುಜದ ಮೇಲೆ ಕೈಹಾಕಲು ಪ್ರಯತ್ನಿಸಿದ್ದು ಟರ್ಕಿಯ ಅಧ್ಯಕ್ಷರಿಗೆ ಖುಷಿ ಕೊಡಲಿಲ್ಲ. ಅಲ್ಬೇನಿಯಾ ಶೃಂಗಸಭೆಯಲ್ಲಿ ಅವರು ತಮ್ಮ ಸ್ಥಾನದಿಂದ ಎದ್ದೇಳ ಬೇಕು ಎಂದು ಕೂಡ ಯೋಚಿಸಲಿಲ್ಲ. ಕೊನೆಯಲ್ಲಿ ಅವರ ನಗು ಎಲ್ಲವನ್ನೂ ಹೇಳಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಪ್ರಾಧ್ಯಾಪಕ ಅಲಿ ಖಾನ್ ಅರೆಸ್ಟ್
ನ್ಯಾಟೋ ವಿಸ್ತರಣೆ, ಉಕ್ರೇನ್- ರಷ್ಯಾದ ಯುದ್ಧಕ್ಕೆ ಅವರ ಪ್ರತಿಕ್ರಿಯೆ ಸೇರಿದಂತೆ ಹಲವಾರು ಭೌಗೋಳಿಕ ರಾಜಕೀಯ ಸಮಸ್ಯೆಗಳ ಕುರಿತು ಫ್ರಾನ್ಸ್ ಮತ್ತು ಟರ್ಕಿ ನಡುವಿನ ರಾಜತಾಂತ್ರಿಕ ಘರ್ಷಣೆ ನಡೆಯುತ್ತಿದೆ. ರಷ್ಯಾದ ಆಕ್ರಮಣದ ವಿರುದ್ಧ ಯುರೋಪ್‌ನಲ್ಲಿ ಮ್ಯಾಕ್ರನ್ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಈ ನಡುವೆ ಎರ್ಡೋಗನ್ ಯುದ್ಧ ಮಾಡುತ್ತಿರುವ ದೇಶಗಳ ನಡುವೆ ಶಾಂತಿಯುತ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದಾರೆ.