Viral Video: ಏಕಾಏಕಿ ಕುಸಿದು ಬಿದ್ದ ಕಟ್ಟಡ.... ಜೀವ ಉಳಿಸಿಕೊಳ್ಳಲು ಈ ಬಡಪಾಯಿ ಜೀವ ಪಟ್ಟ ಪಾಡನ್ನೊಮ್ಮೆ ನೋಡಿ
ಹಳೆಯ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದ್ದು ನೋಡಿ ನೆಟ್ಟಿಗರು ಅಘಾತ ವ್ಯಕ್ತ ಪಡಿಸಿದ್ದಾರೆ.ಈ ಅವಘಡ ನಡೆಯುತ್ತಿದ್ದಂತೆ ಬೀದಿ ನಾಯಿಯೊಂದು ಪ್ರಾಣ ಉಳಿಸಿಕೊಳ್ಳಲು ಪರದಾಡಿದೆ. ಆದರೆ ನಾಯಿ ಓಡುತ್ತಿದ್ದಂತೆ ಈ ಭೀಕರ ದೃಶ್ಯಕ್ಕೆ ಸಿಲುಕಿ ಪ್ರಾಣ ಕಳೆದು ಕೊಂಡಿದೆ. ಕಟ್ಟಡ ಪಕ್ಕ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ಸ್ವಲ್ಪದರಲ್ಲೇ ಪಾರಾಗಿದ್ದಾನೆ.


ಫಿರೋಜಾಬಾದ್: ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿರುವ ಅಘಾತಕಾರಿ ದೃಶ್ಯ ನೆಟ್ಟಿಗರನ್ನು ಬೆಚ್ಚಿ ಬೇಳಿಸಿದೆ. ಸುಮಾರು ನೂರು ವರ್ಷ ಹಳೆಯದು ಎನ್ನಲಾದ ಕಟ್ಟಡ ಕುಸಿಯುತ್ತಿದ್ದಂತೆ ನಾಯಿಯೊಂದು ತನ್ನ ಪ್ರಾಣ ರಕ್ಷಿಸಿಕೊಳ್ಳಲು ಓಡಾಡುತ್ತಿರುವ ದೃಶ್ಯ ಮನ ಕಲುಕುವಂತಿದೆ. ಆದರೆ ದುರಾದೃಷ್ಟವಶಾತ್ ಈ ಅವಘಡದಲ್ಲಿ ನಾಯಿ ತನ್ನ ಪ್ರಾಣ ಕಳೆದುಕೊಂಡಿದೆ. ಕಟ್ಟಡ ಕುಸಿದು ಬೀಳುತ್ತಿದ್ದಂತೆ ಸ್ಥಳೀಯರು ಪ್ರಾಣ ರಕ್ಷಣೆಗಾಗಿ ಓಡಲು ಆರಂಭಿಸಿದ್ದಾರೆ. ಸದ್ಯ ಕ್ಯಾಮರಾ ದಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗಿದೆ.
ಈ ಹಳೆಯ ಕಟ್ಟಡವು ಏಕಾಏಕಿ ಕುಸಿದು ಬಿದ್ದಿದ್ದು ನೋಡಿ ನೆಟ್ಟಿಗರು ಅಘಾತ ವ್ಯಕ್ತಪಡಿಸಿದ್ದಾರೆ. ಈ ಅವಘಡ ನಡೆಯುತ್ತಿದ್ದಂತೆ ಬೀದಿ ನಾಯಿ ಯೊಂದು ಪ್ರಾಣ ಉಳಿಸಿಕೊಳ್ಳಲು ಪರದಾಡಿದೆ.ಆದರೆ ನಾಯಿ ಓಡುತ್ತಿ ದ್ದಂತೆ ಈ ಭೀಕರ ದೃಶ್ಯಕ್ಕೆ ಸಿಲುಕಿ ಪ್ರಾಣ ಕಳೆದು ಕೊಂಡಿದೆ. ಕಟ್ಟಡ ಪಕ್ಕ ಚಲಿಸುತ್ತಿದ್ದ ವ್ತಕ್ತಿ ಯೊಬ್ಬ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಘಟನೆಯಲ್ಲಿ ಸದ್ಯ ದವರೆಗೂ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
🚨 फिरोजाबाद: पुरानी इमारत गिरने से मची भगदड़ 🚨
— भारत समाचार | Bharat Samachar (@bstvlive) March 20, 2025
भरभराकर गिरी जर्जर इमारत, इलाके में अफरा-तफरी। गनीमत रही कि घटना में कोई जनहानि नहीं हुई। पुलिस फोर्स मौके पर पहुंचकर बचाव कार्य में जुटी।
📹 CCTV फुटेज में लोग इमारत से भागते नजर आए
📍 थाना दक्षिण क्षेत्र, अट्टा बाला मोहल्ला… pic.twitter.com/6tOzPu2uI3
ಈ ಘಟನೆ ಬಳಿಕ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ದವರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಲಿನ ರಸ್ತೆ ಪ್ರದೇಶ ವನ್ನುನಿರ್ಬಂಧಿಸಲಾಗಿದ್ದು, ಅಲ್ಲಿಂದ ವಾಹನಗಳ ಸಂಚಾರ ಸ್ಥಗಿತಗೊಳಿ ಸಿದ್ದಾರೆ.. ಸದ್ಯ ಕಟ್ಟಡದ ಅವಶೇಷಗಳನ್ನು ತೆಗೆಯುವ ಕಾರ್ಯ ಭರದಿಂದ ನಡೆಯುತ್ತಿದೆ. ಒಟ್ಟು 49 ಸೆಕೆಂಡ್‌ಗಳ ವಿಡಿಯೊ ಇದಾಗಿದ್ದು, ಇಷ್ಟು ದೊಡ್ಡ ಕಟ್ಟಡ ಕೇವಲ ಎರಡೇ ಸೆಕೆಂಡ್‌ನಲ್ಲಿ ಕುಸಿದು ಬೀಳೋದು ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ.. ಕಟ್ಟಡ ಕುಸಿದು ಬಿದ್ದ ತಕ್ಷಣ ಸ್ಥಳದಲ್ಲಿದ್ದ ಜನರು ಪ್ರಾಣ ಉಳಿಸಿಕೊಳ್ಳಲು ಅಕ್ಕಪಕ್ಕ ಓಡತೊಡಗುತ್ತಾರೆ. ಸಮೀಪದ ಮನೆಗಳು ಮತ್ತು ಅಂಗಡಿಗಳು ಹಾಗೂ ಕಟ್ಟಡದ ಕೆಳಗೆ ನಿಲ್ಲಿಸಿದ ಕೆಲವು ವಾಹನಗಳಿಗೂ ಕೂಡ ಈ ಹಾನಿಯಾಗಿದೆ.
ಇದನ್ನು ಓದಿ: Viral Video: ಕೈಯಲ್ಲಿದ್ದ ಬ್ಯಾಗ್ ಎಗರಿಸಿದ ಮಹಿಳೆ; ತಲೆಕೆರೆದುಕೊಂಡ ರೋಬೋಟ್‌ನ ಫನ್ನಿ ವಿಡಿಯೊ ಇಲ್ಲಿದೆ ನೋಡಿ
ಕ್ಷಣಾರ್ಧದಲ್ಲಿ ಕಟ್ಟಡ ಕುಸಿಯುತ್ತಿರುವ ದೃಶ್ಯವನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದು ಎರಡು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಈ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದ್ದು ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಈ ದೃಶ್ಯ ನಿಜಕ್ಕೂ ಭಯಭೀತಗೊಳಿಸುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಹಳೆಯ ಕಟ್ಟಡದ ಸುತ್ತಲಿರುವ ಜನರು ಈ ಮೊದಲೇ ಜಾಗೃತಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ