Viral Video: ಕೈಯಲ್ಲಿದ್ದ ಬ್ಯಾಗ್ ಎಗರಿಸಿದ ಮಹಿಳೆ; ತಲೆಕೆರೆದುಕೊಂಡ ರೋಬೋಟ್‌ನ ಫನ್ನಿ ವಿಡಿಯೊ ಇಲ್ಲಿದೆ ನೋಡಿ
ಮಹಿಳೆಯೊಬ್ಬಳು ಎಐ ಚಾಲಿತ ರೋಬೋಟ್ನ ಕೈಯಲ್ಲಿದ್ದ ಚೀಲವನ್ನು ದರೋಡೆ ಮಾಡಿದ್ದು, ಚೀಲ ಕಳೆದುಕೊಂಡ ಎಐ ತಲೆಕರೆದುಕೊಂಡಿದೆ. ಈ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದು, ನೆಟ್ಟಿಗರ ಮುಖದಲ್ಲಿ ನಗುವನ್ನು ಮೂಡಿಸಿದೆ.


ನವದೆಹಲಿ: ಎಐ ರೋಬೋಟ್‍ಗಳು ಮನುಷ್ಯರಿಗಿಂತ ಬಹಳ ಬುದ್ಧಿವಂತವುಗಳು ಎಂದು ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ಮನುಷ್ಯರನ್ನು ಈ ಎಐ ಮೆಷಿನ್‍ಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಮಹಿಳೆಯೊಬ್ಬಳು ಎಐ ರೋಬೋಟ್ ಅನ್ನು ಸುಲಭವಾಗಿ ಯಾಮಾರಿಸಿದ್ದಾಳೆ. ಅದಕ್ಕೆ ತಿಳಿಯದಂತೆ ಅದರ ಕೈಯಲ್ಲಿದ್ದ ಚೀಲವನ್ನು ಕದ್ದು ಅದು ತಲೆ ಕೆರೆದುಕೊಳ್ಳುವಂತೆ ಮಾಡಿದ್ದಾಳೆ. ಮಹಿಳೆ ಎಐ ಚಾಲಿತ ರೋಬೋಟ್ನ ಕೈಯಲ್ಲಿದ್ದ ವಸ್ತುವನ್ನು "ದರೋಡೆ" ಮಾಡುತ್ತಿರುವ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರ ಮುಖದಲ್ಲಿ ನಗುವನ್ನು ಮೂಡಿಸಿದೆ.
ವೈರಲ್ ಆದ ವಿಡಿಯೊದಲ್ಲಿ ಎಐ ರೋಬೋಟ್ ಕೈಯೊಂದು ಬ್ಯಾಗ್ ಹಿಡಿದುಕೊಂಡು ವ್ಯಕ್ತಿಯ ಟೇಬಲ್ ಹಿಂದೆ ನಿಂತಿದೆ. ಇದೇ ತಕ್ಕ ಸಮಯವೆಂದುಕೊಂಡು ರೋಬೋಟ್ ಕೈಯಲ್ಲಿದ್ದ ಚೀಲವನ್ನು ಮಹಿಳೆಯೊಬ್ಬಳು ಕಣ್ಣು ಮಿಟುಕಿಸುವಷ್ಟರಲ್ಲಿ ಎಗರಿಸಿದ್ದಾಳೆ. ರೋಬೊಟ್ ಕೈಯಲ್ಲಿದ್ದ ಚೀಲವನ್ನು ತನ್ನ ಬ್ಯಾಗೊಳಗೆ ತುಂಬಿಸಿಕೊಂಡಿದ್ದಾಳೆ. ಕೈಯಲ್ಲಿದ್ದ ಚೀಲ ಕಾಣಿಸದೆ ಗೊಂದಲಕ್ಕೊಳಕ್ಕಾದ ರೋಬೋಟ್ ಚೀಲಕ್ಕಾಗಿ ಎಲ್ಲಾ ಕಡೆ ಹುಡುಕಿದೆ. ಚೀಲ ಎಲ್ಲಿಯೂ ಸಿಗದೆ ಇದ್ದಾಗ ತಲೆ ಕೆರೆದುಕೊಂಡಿದೆ.
ರೋಬೋಟ್‌ನ ಫನ್ನಿ ವಿಡಿಯೊ ಇಲ್ಲಿದೆ ನೋಡಿ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಈ ಘಟನೆಯ ಬಗ್ಗೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ನಿಯೋಜಿಸಲಾದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ರೋಬೋಟ್‍ಗೆ ಸ್ಟ್ರೀಟ್-ಸ್ಮಾರ್ಟ್ ಕಳ್ಳರ ಬಗ್ಗೆ ಏಕೆ ತರಬೇತಿ ನೀಡಲಿಲ್ಲ ಎಂದು ಕೆಲವರು ಕೇಳಿದ್ದಾರೆ. "ಎಐ ಕಳ್ಳತನವನ್ನು ಪತ್ತೆಹಚ್ಚಲು ಸಿದ್ಧವಾಗಿಲ್ಲ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. "ಎಐ ಮಾನವರಿಗೆ ಅಪಾಯಕಾರಿ ಅಲ್ಲ, ಆದರೆ ಮಾನವರು ಎಐಗೆ ಅಪಾಯಕಾರಿ” ಎಂದು ಇನ್ನೊಬ್ಬರು ಕಮೆಂಟ್ ಮಾಡಿ ನಕ್ಕಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮಾನವ ದೇಹದಂತೆ ಕಾಣುವ ರೋಬೋಟ್ ವಿಡಿಯೊ ವೈರಲ್; ಇದು ಬಲು ಡೇಂಜರಸ್ ಅಂತೆ!
ಇದೇ ವರ್ಷದ ಕಳೆದ ತಿಂಗಳು ಚೀನಾದಲ್ಲಿ ನಡೆದ ಉತ್ಸವದಲ್ಲಿ ಎಐ ಚಾಲಿತ ಹ್ಯೂಮನಾಯ್ಡ್ ರೋಬೋಟ್ ಒಂದು ವಿಚಿತ್ರವಾಗಿ ವರ್ತಿಸಿದ್ದು, ಇದು ರೋಬೋಟ್‍ಗಳ ಬಗ್ಗೆ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಹೊಸ ಚರ್ಚೆಯ ಅಲೆಯನ್ನು ಹುಟ್ಟುಹಾಕಿತ್ತು. ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ಈ ವಿಡಿಯೊ ಕೂಡಲೇ ವೈರಲ್ ಆಗಿತ್ತು. ವಿಡಿಯೊದಲ್ಲಿ, ರೋಬೋಟ್ ಅನಿರೀಕ್ಷಿತವಾಗಿ ಮುಂದೆ ಹೋಗಿದ್ದು, ಇದು ಸುರಕ್ಷತಾ ಬ್ಯಾರಿಕೇಡ್‍ನ ಹಿಂದೆ ಇದ್ದವರನ್ನು ಬೆಚ್ಚಿಬೀಳಿಸಿತ್ತು. ರೋಬೋಟ್ ಆಕ್ರಮಣಕಾರಿಯಾಗಿ ವರ್ತಿಸಿದ್ದು, ಅದು ದಾಳಿ ಮಾಡುವ ಮೊದಲು ಭದ್ರತಾ ಸಿಬ್ಬಂದಿ ಕೂಡಲೇ ಅದನ್ನು ನಿಯಂತ್ರಿಸಿದ್ದಾರೆ. ರೋಬೋಟ್‍ನ ಹಠಾತ್ ಆಕ್ರಮಣಕಾರಿ ಕೃತ್ಯಕ್ಕೆ ಯಾಂತ್ರಿಕ ವೈಫಲ್ಯವೇ ಕಾರಣ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.