ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಖಾಲಿ ರಸ್ತೆಯಲ್ಲೂ 1 ಗಂಟೆ ಸಿಗ್ನಲ್‌ಗಾಗಿ ಕಾದ ವ್ಯಕ್ತಿ: ಸಿಂಗಾಪುರದ ಶಿಸ್ತಿನ ನಡೆಗೆ ನೆಟ್ಟಿಗರು ಮೆಚ್ಚುಗೆ!

Viral News: ವಾಹನ ಚಾಲನೆ ಮಾಡುವಾಗ ಪರವಾನಗಿ, ನೋಂದಣಿ ಪ್ರಮಾಣಪತ್ರ ಹೀಗೆ ವಿವಿಧ ದಾಖಲೆಯನ್ನು ಇಟ್ಟುಕೊಳ್ಳುವುದು, ರಸ್ತೆಯ ಸೂಚನಾ ಫಲಕಗಳನ್ನು ಗಮನಿಸುವುದು ಹೀಗೆ ಸಂಚಾರ ನಿಯನಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ ಕೆಲವರು ಇಂತಹ ನಿಯಮಗಳನ್ನು ಪಾಲಿಸದೇ ದಂಡ ಕಟ್ಟಿಸಿಕೊಂಡವರು ಅನೇಕರು ಇದ್ದಾರೆ. ಇದೀಗ ಸಿಂಗಾಪುರದ ಖಾಲಿ ರಸ್ತೆಯಲ್ಲೂ ವ್ಯಕ್ತಿ ಯೊಬ್ಬರು ಟ್ರಾಫಿಕ್ ನಿಮಯ ಪಾಲನೆ ಮಾಡಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ...

ರಸ್ತೆ ಖಾಲಿ ಇದ್ದರೂ ಟ್ರಾಫಿಕ್ ನಿಮಯ ಪಾಲಿಸಿದ ವ್ಯಕ್ತಿ: ವಿಡಿಯೊ ವೈರಲ್

ಖಾಲಿ ರಸ್ತೆಯಲ್ಲೂ ಬೆಳಿಗ್ಗೆ 1 ಗಂಟೆಗೆ ಸಿಗ್ನಲ್‌ಗಾಗಿ ಕಾದ ವ್ಯಕ್ತಿ -

Profile
Pushpa Kumari Jun 3, 2026 11:31 AM

ನವದೆಹಲಿ,ಜೂ.3: ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ. ವಾಹನ ಚಾಲನೆ ಮಾಡುವಾಗ ಪರವಾನಗಿ, ನೋಂದಣಿ ಪ್ರಮಾಣಪತ್ರ ಹೀಗೆ ವಿವಿಧ ದಾಖಲೆಯನ್ನು ಇಟ್ಟುಕೊಳ್ಳುವುದು, ರಸ್ತೆಯ ಸೂಚನಾ ಫಲಕಗಳನ್ನು ಗಮನಿಸುವುದು ಹೀಗೆ ಸಂಚಾರ ನಿಯನಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ ಕೆಲವರು ಇಂತಹ ನಿಯಮ ಗಳನ್ನು ಪಾಲಿಸದೇ ದಂಡ ಕಟ್ಟಿಸಿಕೊಂಡವರು ಅನೇಕರು ಇದ್ದಾರೆ.ಇದೀಗ ಸಿಂಗಾಪುರದ ಖಾಲಿ ರಸ್ತೆಯಲ್ಲೂ ವ್ಯಕ್ತಿಯೊಬ್ಬರು ಟ್ರಾಫಿಕ್ ನಿಮಯ ಪಾಲನೆ ಮಾಡಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ಎಲ್ಲರ ಗಮನ ಸೆಳೆದಿದೆ.

ಈ ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿಯೂ ಬೆಳಗಿನ ಜಾವ 1 ಗಂಟೆಗೆ ಪಾದಚಾರಿ ಕ್ರಾಸಿಂಗ್‌ನಲ್ಲಿ ನಿಂತಿದ್ದಾರೆ.. ಸುತ್ತಲೂ ಯಾವುದೇ ಸಂಚಾರವಿಲ್ಲದಿದ್ದರೂ ಸಹ, ರಸ್ತೆ ದಾಟುವ ಮೊದಲು ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗಲು ಆತ ಕಾಯುತ್ತಿದ್ದಾರೆ. ಈ ವೀಡಿಯೊ ವನ್ನು ಕೃತಿಕಾ ಜೈನ್ ಪೋಸ್ಟ್ ಮಾಡಿದ್ದಾರೆ, ಕೆಲವು ಜನರು ಸಮಯವನ್ನು ಲೆಕ್ಕಿಸದೆ ನಿಯಮಗಳನ್ನು ಎಷ್ಟು ಸ್ವಾಭಾವಿಕ ವಾಗಿ ಪಾಲನೆ ಮಾಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ವಿಡಿಯೋ ನೋಡಿ:

ಯಾರೂ ಇಲ್ಲದ ನಿರ್ಜನ ರಸ್ತೆಯಲ್ಲೂ ವ್ಯಕ್ತಿಯೊಬ್ಬ ನಿಯಮ ಪಾಲಿಸಿದ ರೀತಿ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದೆ. ಬೆಳಗಿನ ಜಾವ 1ಗಂಟೆಗೆ ರಸ್ತೆಯೂ ಸಂಪೂರ್ಣವಾಗಿ ಖಾಲಿ ಇರುತ್ತದೆ. ಯಾವುದೇ ವಾಹನಗಳು ಕೂಡ ಚಲಿಸುವುದಿಲ್ಲ.. ಆದರೂ ಅಲ್ಲಿದ್ದ ಪಾದಚಾರಿ ವ್ಯಕ್ತಿಯೊಬ್ಬ , ಸಿಗ್ನಲ್ ದೀಪ ಕೆಂಪು ಇರುವುದನ್ನು ಗಮನಿಸಿ ದೀಪ ಹಸಿರಾಗುವವರೆಗೂ ಅತ್ಯಂತ ತಾಳ್ಮೆಯಿಂದ ಕಾಯುತ್ತಿರುವುದು ವಿಡಿಯೋದಲ್ಲಿದೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

​ಇದನ್ನು ಹಂಚಿಕೊಂಡ ಯುವತಿಯೂ ಇದು ಅಭ್ಯಾಸವೋ, ಶಿಸ್ತೋ ತಿಳಿಯದು ಎಂದು ಬರೆದಿದ್ದಾರೆ. ಯಾರೂ ಗಮನಿಸುತ್ತಿಲ್ಲ ಎಂದು ತೋರುತ್ತಿದ್ದರೂ ನಿಯಮ ಗಳನ್ನು ಪಾಲಿಸಿದ್ದಕ್ಕಾಗಿ ಅನೇಕ ಜನರು ಪಾದಚಾರಿಯನ್ನು ಹೊಗಳಿದ್ದಾರೆ. ಆದಾಗ್ಯೂ, ಹಲವು ಬಳಕೆದಾರರು ಸಿಂಗಾ ಪುರದ ಕಠಿಣ ಕಾನೂನುಗಳು ಮತ್ತು ದಂಡಗಳು ಈ ನಡವಳಿಕೆಯ ಹಿಂದೆ ಕಾರಣ ವಾಗಿರಬಹುದು ಎಂದು ಭಾವಿಸಿದ್ದಾರೆ.ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರ ರೊಬ್ಬರು ​"ಭಾರತಕ್ಕೂ ಇಂತಹ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನ ಅಗತ್ಯವಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಜನರಿಗೆ ಶಿಸ್ತಿನ ಪಾಠ ಮೊದಲೇ ಅರಿತಿದ್ದರೆ ಯಾರು ಕೂಡ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.