Viral Video: ಸೆಕೆಂಡ್ ಹ್ಯಾಂಡ್ ಬಟ್ಟೆ ಧರಿಸುವ ಮುನ್ನ ಎಚ್ಚರ- ವೈರಲ್ ಸಂದೇಶದಲ್ಲಿ ಏನಿದೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು (Viral Video) ಸರಿಯಾಗಿ ತೊಳೆಯದೆ ಹಾಕಿದ ಕಡಿಮೆ ದರದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಯುವಕ ತೊಳೆಯದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುವ ಅಭ್ಯಾಸ ಹೊಂದಿದ್ದರಿಂದ ತನಗೆ ನೋವಿನಿಂದ ಕೂಡಿದ ಚರ್ಮದ ಸೋಂಕು ಉಂಟಾಗಿದೆ ಎಂದು ಹೇಳಿದ್ದಾನೆ.


ಬೆಂಗಳೂರು: ಮಾರುಕಟ್ಟೆಯಲ್ಲಿ ಎಲ್ಲವೂ ಈಗ ಸೆಕೆಂಡ್ ಹ್ಯಾಂಡ್ ( second-hand clothes) ವಸ್ತುಗಳು ಸಿಗುತ್ತವೆ. ಇದರಲ್ಲಿ ಬಟ್ಟೆಗಳೂ ಸೇರಿರುತ್ತವೆ. ಆದರೆ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುವ ಮುನ್ನ ಕೆಲವೊಂದು ಕಾಳಜಿ ವಹಿಸಲೇ ಬೇಕು. ಇಲ್ಲವಾದರೆ ಪ್ರಾಣಕ್ಕೆ ಅಪಾಯ ತರಬಹುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಡಿಯೋವೊಂದು ಈ ಬಗ್ಗೆ ಎಚ್ಚರಿಕೆ ನೀಡಿದೆ. ಈ ವಿಡಿಯೋದಲ್ಲಿ ಒಗೆಯದ, ಹರಿದ ಬಟ್ಟೆಗಳನ್ನು ಧರಿಸಿದ ಒಬ್ಬ ವ್ಯಕ್ತಿ ಚರ್ಮ ರೋಗಕ್ಕೆ (Skin Infection) ಒಳಗಾಗಿರುವುದಾಗಿ ಹೇಳಿದ್ದಾನೆ. ತನಗೆ ತೊಳೆಯದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುವ ಅಭ್ಯಾಸವಿರುವುದರಿಂದ ನೋವಿನಿಂದ ಕೂಡಿದ ಚರ್ಮದ ಸೋಂಕಿಗೆ ಕಾರಣವಾಗಿದೆ ಎಂಬುದನ್ನು ಆತ ಎಂಬುದನ್ನು ಬಹಿರಂಗಪಡಿಸಿದ್ದಾನೆ.
ಹಣವನ್ನು ಉಳಿಸಲು ಬಯಸುವ ಫ್ಯಾಷನ್ ಪ್ರಿಯರು ದೆಹಲಿಯ ಸರೋಜಿನಿ ನಗರ, ಜನಪತ್‌ನಂತಹ ಮಾರುಕಟ್ಟೆಗಳು,ಬೆಂಗಳೂರಿನ ಶಿವಾಜಿ ನಗರ, ಕೆಆರ್ ಮಾರುಕಟ್ಟೆ,ಮುಂಬೈಯ ಕೆಲವು ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಕೈಗೆಟುಕುವ ದರದಲ್ಲಿ ಟ್ರೆಂಡಿ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಪ್ರಪಂಚದಾದ್ಯಂತ ಸೆಕೆಂಡ್ ಹ್ಯಾಂಡ್ ಬಟ್ಟೆಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಚೋರ್ ಬಜಾರ್‌ಗಳಿವೆ. ಇಲ್ಲಿ ಸಿಗುವ ಬಟ್ಟೆಗಳು ಬಹುತೇಕ ಸೆಕೆಂಡ್ ಹ್ಯಾಂಡ್ ಆಗಿರುತ್ತದೆ.
ಇದೀಗ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಸರಿಯಾಗಿ ತೊಳೆಯದೆ ಹಾಕಿದ ಕಡಿಮೆ ದರದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಯುವಕ ತೊಳೆಯದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುವ ಅಭ್ಯಾಸ ಹೊಂದಿದ್ದರಿಂದ ತನಗೆ ನೋವಿನಿಂದ ಕೂಡಿದ ಚರ್ಮದ ಸೋಂಕು ಉಂಟಾಗಿದೆ ಎಂದು ಹೇಳಿದ್ದಾನೆ.
ಆತನ ಹೇಳಿರುವಂತೆ ಮೊದಲು ಆತನಿಗೆ ತೀವ್ರವಾದ ತುರಿಕೆ ಕಾಣಿಸಿಕೊಂಡಿದೆ. ಬಳಿಕ ದೊಡ್ಡದೊಡ್ಡ ಹುಣ್ಣುಗಳು ಕಾಣಿಸಿಕೊಂಡವು. ವೈದ್ಯರುಇದನ್ನು ಮೊಲಸ್ಕಮ್ ಕಾಂಟ್ಯಾಜಿಯೊಸಮ್ ಎಂದು ಗುರುತಿಸಿದ್ದಾರೆ. ಇದು ಸಾಂಕ್ರಾಮಿಕ ವೈರಲ್ ಚರ್ಮದ ಸೋಂಕಾಗಿದೆ. ಒಬ್ಬರಿಂದ ಒಬ್ಬರಿಗೆ ಬಟ್ಟೆಯ ಮೂಲಕ ಅಥವಾ ಇನ್ನೊಬ್ಬರು ಬಳಸಿದ ವಸ್ತುಗಳನ್ನು ಬಳಸುವುದರಿಂದ ಬಹು ಬೇಗನೆ ಹರಡುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ನೆಲ್ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕಿ ಫ್ರಾನ್ಸಿಸ್ ಕೋಜೆನ್, ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಸಂರಕ್ಷಿಸಲು ಕೆಲವು ಕಠಿಣ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ತೀವ್ರವಾದ ಚರ್ಮದ ರೋಗಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Operation Sindoor: ಭಾರತದ ದಾಳಿ ಖಚಿತಪಡಿಸಿ ಯುದ್ಧಕ್ಕೆ ಸನ್ನದ್ಧ ಎಂದ ಪಾಕ್ ಪ್ರಧಾನಿ
ವೈರಲ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ಮೂಲದ ಚರ್ಮರೋಗ ತಜ್ಞ ಡಾ. ಚಾರ್ಲ್ಸ್ ಪುಜಾ, ಕಡಿಮೆ ದರದಲ್ಲಿ ಸಿಗುವ ಎಲ್ಲ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು. ತೊಳೆಯದ ಬಟ್ಟೆಗಳು ಮೃದ್ವಂಗಿ ಸೋಂಕುಗಳಿಗೆ ಮಾತ್ರವಲ್ಲದೆ ರಿಂಗ್‌ವರ್ಮ್‌ನಂತಹ ಶಿಲೀಂಧ್ರಗಳ ಸೋಂಕಿಗೂ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.ವೈರಲ್ ಆಗಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಅನೇಕ ತಜ್ಞರು ಮಿತವ್ಯಯದ ವಸ್ತುಗಳು ಜನಪ್ರಿಯತೆ ಹೆಚ್ಚುತ್ತಿದೆ. ಖರೀದಿದಾರರು ಜಾಗರೂಕರಾಗಿರಬೇಕು ಎಂದು ಒತ್ತಾಯಿಸಿದ್ದು, ಅನಗತ್ಯ ಚರ್ಮದ ತೊಂದರೆಗಳನ್ನು ತಪ್ಪಿಸಲು ಮೊದಲು ಚೆನ್ನಾಗಿ ತೊಳೆಯಿರಿ ಬಳಿಕ ಬಳಕೆ ಮಾಡಿ ಎಂದು ಹೇಳಿದ್ದಾರೆ.