Viral News: ʼಚೋಲಿ ಕೆ ಪೀಚೆ ಕ್ಯಾ ಹೈʼ ಡ್ಯಾನ್ಸ್ ಮಾಡಿದ ವರ ; ಸಿಟ್ಟಿಗೆದ್ದ ವಧುವಿನ ತಂದೆ ಮಾಡಿದ್ದೇನು?ವಿಡಿಯೊ ನೋಡಿ
ಮದುವೆಯ ದಿನ ವರನೊಬ್ಬ ಬಾಲಿವುಡ್ ಹಾಡು ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾನೆ. ವರನ ಈ ಕೃತ್ಯದಿಂದ ವಧುವಿನ ತಂದೆ ಕೋಪಗೊಂಡು ಮದುವೆಯನ್ನೇ ರದ್ದುಗೊಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ನವದೆಹಲಿ: ವರನೊಬ್ಬ ತನ್ನ ಮದುವೆಯ ದಿನ ಬಾಲಿವುಡ್ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಇದೇ ಆತನ ಮದುವೆಗೆ ಕಂಟಕವಾಗಿದೆ. ವರನ ಡ್ಯಾನ್ಸ್‌ನಿಂದಾಗಿ ಮದುವೆ ಸಮಾರಂಭವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.ವರನೊಬ್ಬ ಬಾಲಿವುಡ್ ಹಾಡು ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾನೆ. ವರನ ಈ ಕೃತ್ಯದಿಂದ ವಧುವಿನ ತಂದೆ ಕೋಪಗೊಂಡು ಮದುವೆಯನ್ನೇ ರದ್ದುಗೊಳಿಸಿದ್ದಾನೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ವರನು ಮೆರವಣಿಗೆಯೊಂದಿಗೆ ವಿವಾಹ ಸ್ಥಳಕ್ಕೆ ಬರುವಾಗ, ಅವನ ಸ್ನೇಹಿತರು ಡ್ಯಾನ್ಸ್ ಮಾಡಲು ಒತ್ತಾಯಿಸಿದ್ದಾರೆ ಮತ್ತು ಜನಪ್ರಿಯ ಬಾಲಿವುಡ್ ಹಾಡು ಪ್ಲೇ ಮಾಡಿ ಎಲ್ಲರೂ ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಆದರೆ ವರನ ಡ್ಯಾನ್ಸ್ ವಧುವಿನ ತಂದೆಗೆ ಹಿಡಿಸಲಿಲ್ಲ. ಅನುಚಿತ ಪ್ರದರ್ಶನದಿಂದ ಕೋಪಗೊಂಡ ವಧುವಿನ ತಂದೆ ತಕ್ಷಣ ಮಧ್ಯಪ್ರವೇಶಿಸಿ, ಮದುವೆಯನ್ನು ನಿಲ್ಲಿಸಿ ಅದನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾನೆ. ವರನ ವರ್ತನೆಯು ತನ್ನ ಕುಟುಂಬದ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಅವಮಾನಿಸಿದೆ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾನೆ ಎಂದು ವರದಿಯಾಗಿದೆ.
probably the funniest ad placement i’ve seen till date 😂 pic.twitter.com/a189IFuRPP
— Xavier Uncle (@xavierunclelite) January 30, 2025
ಹಠಾತ್ ಘಟನೆಗಳಿಂದ ಆಘಾತಗೊಂಡ ವಧು ಕಣ್ಣೀರು ಹಾಕಿದ್ದಾಳೆ. ವರನು ಇದು ಕೇವಲ ಮೋಜಿಗಾಗಿ ಮಾಡಿದ ಡ್ಯಾನ್ಸ್ ಎಂದು ವಿವರಿಸಲು ಪ್ರಯತ್ನಿಸಿದನು, ಆದರೆ ಅವನ ಮನವಿಗೆ ವಧುವಿನ ತಂದೆ ಕರಗಲಿಲ್ಲ. ಹಾಗೇ ಎರಡು ಕುಟುಂಬಗಳ ನಡುವೆ ಯಾವುದೇ ಸಂಪರ್ಕ, ಮಾತುಕತೆ ನಡೆಸದಂತೆ ನಿಷೇಧ ಹೇರಿದ್ದಾನೆ ಎಂದು ವರದಿಯಾಗಿದೆ.ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral News: ರೋಟಿ ನೀಡುವುದು ತಡವಾಯಿತೆಂದು ಮದುವೆ ಮುರಿದುಕೊಂಡ ವರ; ಠಾಣೆ ಮೆಟ್ಟಿಲೇರಿದ ವಧು!
ಅನಿರೀಕ್ಷಿತ ವಿವಾದದಿಂದಾಗಿ ವಿವಾಹವನ್ನು ರದ್ದುಗೊಳಿಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಇದೇ ರೀತಿಯ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದ ಮದುವೆಯನ್ನು ಹಠಾತ್ತನೆ ರದ್ದುಗೊಳಿಸಲಾಗಿತ್ತು. ಆಹಾರವನ್ನು ಬಡಿಸುವುದು ತಡವಾಯ್ತು ಎಂದು ವರನು ಕೋಪಗೊಂಡು ಮದುವೆ ಸ್ಥಳದಿಂದ ಹೊರನಡೆದಿದ್ದಾನೆ ಮತ್ತು ನಂತರ ಅದೇ ದಿನ ತನ್ನ ಸೋದರಸಂಬಂಧಿಯನ್ನು ಮದುವೆಯಾಗಿದ್ದಾನೆ. ಈ ಘಟನೆಯಿಂದ ಆಘಾತಕ್ಕೊಳಗಾದ ವಧುವಿನ ಕುಟುಂಬವು ಪೊಲೀಸರಿಗೆ ದೂರು ನೀಡಿದ್ದು, ಈಗಾಗಲೇ ಮಾಡಿದ ವ್ಯವಸ್ಥೆಗಳಿಂದಾಗಿ 7 ಲಕ್ಷ ರೂ.ಗಳ ನಷ್ಟವಾಗಿದೆ ಎಂದು ಹೇಳಿದ್ದಾರೆ.