Viral News: ಇದು ‘ಲಾಂಡ್ರಿ ಲವ್’ – ಈ ಪ್ರೀತಿ ಅರಳಿದ ಬಗೆಯೇ ವಿಶೇಷ! ಈ ಸುದ್ದಿಯೂ ಅಷ್ಟೇ ಸ್ಪೆಷಲ್
ಕೆಲವೊಂದು ಪ್ರೀತಿಗಳು ಅರಳೋದೇ ವಿಚಿತ್ರ ಸನ್ನಿವೇಶಗಳಲ್ಲಿ ಮತ್ತು ವಿಶಿಷ್ಟ ಜಾಗಗಳಲ್ಲಿ. ಅಂತಹ ಒಂದು ವಿಚಿತ್ರ ಲವ್ ಸ್ಟೋರಿ ಇದೀಗ ನಮ್ಮ ನೆರೆ ರಾಷ್ಟ್ರ ಚೀನಾದಿಂದ ವರದಿಯಾಗಿದೆ. ಲಾಂಡ್ರಿ ವಿಳಾಸ ಕೇಳುವ ನೆಪದಲ್ಲೊಂದು ಪ್ರೀತಿ ಅರಳಿದರೆ ಹೇಗಿದ್ದೀತು..? ಹೀಗೆ ಅರಳಿದ ಪ್ರೀತಿ ಮುಂದೇನಾಯ್ತು ಎಂಬುದೇ ಈ ಸುದ್ದಿಯ ಸಾರ..!

ಸಾಂದರ್ಭಿಕ ಚಿತ್ರ

ಬೀಜಿಂಗ್: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ (Marriages are made in heaven) ಎಂಬ ಮಾತಿದೆ ಆದ್ರೆ ಈ ಲವ್ (Love) ಅನ್ನೋದು ಎಲ್ಲಿ, ಹೇಗೆ ಬೇಕಾದರೂ ಆಗಬಹುದು ಮಾರ್ರೆ..! ಅದೂ ಕೆಲವೊಂದು ಪ್ರೀತಿಗಳು ಅರಳೋದೇ ವಿಚಿತ್ರ ಸನ್ನಿವೇಶಗಳಲ್ಲಿ ಮತ್ತು ವಿಶಿಷ್ಟ ಜಾಗಗಳಲ್ಲಿ. ಅಂತಹ ಒಂದು ವಿಚಿತ್ರ ಲವ್ ಸ್ಟೋರಿ (Love Story) ಇದೀಗ ನಮ್ಮ ನೆರೆ ರಾಷ್ಟ್ರ ಚೀನಾದಿಂದ (China) ವರದಿಯಾಗಿದ್ದು, ತನಗೆ ಲಾಂಡ್ರಿಯ (Launderettes) ದಾರಿ ತೋರಿದ ಯುವತಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಮಲೇಷಿಯಾ ಯುವಕನ ಕಥೆಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ.
ಎತಿಕ್ ಮಲಾಯ್ ಝೈರಿ ಅಮಿರ್ ಎಂಬ 38ನೇ ವರ್ಷದ ಮಲೇಷ್ಯಾ (Malaysia) ಮೂಲದ ಯುವಕ ಚೀನಾದಲ್ಲಿ ತನ್ನ ಬಟ್ಟೆಗಳನ್ನು ಒಗೆಯುವುದಕ್ಕೆಂದು ಲಾಂಡ್ರಿ ಸಿಗದೇ ಒದ್ದಾಡುತ್ತಿದ್ದಾಗ ಚಿನಾದ ಯುವತಿಯೊಬ್ಬಳು ಈತನ ನೆರವಿಗೆ ಬಂದು ಆತನಿಗೆ ಲಾಂಡ್ರಿ ವಿಳಾಸವನ್ನು ಮತ್ತು ಅಲ್ಲಿಗೆ ಹೋಗುವ ದಾರಿಯನ್ನು ತೋರಿಸುತ್ತಾಳೆ. ಅಷ್ಟಕ್ಕೇ ಈತನಿಗೆ ಆ ಚೀನಾ ಯುವತಿಯಲ್ಲಿ ಲವ್ ಆಗಿದೆ.
ದಕ್ಷಿಣ ಚೀನಾದ (South China) ಯುನ್ನಾನ್ ಪ್ರಾಂತ್ಯದಲ್ಲಿ (Yunnan province) ಈ ಘಟನೆ ವರದಿಯಾಗಿದ್ದು, ಇಲ್ಲಿನ ಸೂಫಿಯಾ ಎಂಬ ಯುವತಿ ಎತಿಕ್‌ಗೆ ಲಾಂಡ್ರಿಯ ವಿಳಾಸ ತೋರಿಸಿಕೊಟ್ಟಿದ್ದಾಳೆ. ಅಷ್ಟಕ್ಕೇ ಇವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದ್ದು, ಈ ಚೈನೀಸ್ ಮುಸ್ಲಿಂ ಹುಡುಗಿಯನ್ನು ಎತಿಕ್ ಮದುವೆಯಾಗಿದ್ದಾನೆ ಎಂದು ಮಲೇಷ್ಯಾ ಮೂಲದ ದಿನಪತ್ರಿಕೆಯೊಂದು ವರದಿ ಮಾಡಿದೆ.
‘ವಿದೇಶದಲ್ಲಿ ವಾಸವಾಗಿರುವ ಸಂದರ್ಭದಲ್ಲಿ ನನಗೆ ಒಂಟಿತನದ ಭಾವನೆ ಕಾಡುತ್ತಿತ್ತು.. ನನಗಿಲ್ಲಿ ಯಾರೂ ಗೆಳೆಯರು ಇರಲಿಲ್ಲ.. ನಮ್ಮಿಬ್ಬರ ಭೇಟಿ ಹೀಗೆ ಮುಕ್ತಾಯಗೊಳ್ಳುತ್ತದೆ ಎಂದೇ ನಾನು ಭಾವಿಸಿಕೊಂಡಿದ್ದೆ’ ಎಂದು ಮಲೆಷಿಯಾ ಯುವಕ ಎತಿಕ್‌ನ ಹೇಳಿಕೆ ಪತ್ರಿಕಾ ವರದಿಯಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ: Viral Video: ನಾ ನಿನ್ನ ಬಿಡಲಾರೆ... ಕುಂಭಮೇಳದಲ್ಲಿ ಗಮನ ಸೆಳೆದ ದಂಪತಿ- ವಿಡಿಯೊ ನೋಡಿ
ಲಾಂಡ್ರಿ ವಿಳಾಸ ಕೇಳುವ ನೆಪದಲ್ಲಿ ಪ್ರಾರಂಭವಾದ ಇವರಿಬ್ಬರ ಪರಿಚಯ ಬಳಿಕ ಪ್ರತೀನಿತ್ಯ ಭೇಟಿಯಾಗುವಲ್ಲಿವರೆಗೆ ಮುಂದುವರೆದಿತ್ತು. ಸೂಫಿಯಾ ತನಗಾಗಿ ಪ್ರತೀದಿನ ಊಟವನ್ನು ತಯಾರಿಸಿ ಕೊಡುತ್ತಿದ್ದಳು ಮತ್ತು ಅದನ್ನು ಹತ್ತಿರದ ಸಬ್ ವೇ ಸ್ಟೇಷನ್‌ನಲ್ಲಿ ನನಗೆ ತಂದು ಕೊಡುತ್ತಿದ್ದಳು ಎಂದು ಎತಿಕ್ ಹೇಳಿಕೊಂಡಿದ್ದಾನೆ. ತನ್ನ ಮನೆ ಹತ್ತಿರ ವಿಶೇಷ ರಮ್ಜಾನ್ ಪ್ರಾರ್ಥನೆಯಲ್ಲಿ ಭಾಗಿಯಾಗುವಂತೆ ಈಕೆ ಎತಿಕ್‌ನನ್ನು ಆಹ್ವಾನಿಸಿದ್ದಳಂತೆ.
‘ತನಗೆ ಮತ್ತು ತನ್ನ ತಾಯಿಗೆ ರಮ್ಜಾನ್ ಪ್ರಾರ್ಥನೆ ತರವಿಹ್ ಆಯೋಜಿಸುವಂತೆ ನನ್ನನ್ನು ಆಹ್ವಾನಿಸಿದ್ದಳು. ಇದು ನನಗೆ ಗೌರವದ ವಿಷಯವಾಗಿತ್ತು, ಆದರೆ ನಾನು ಆ ಸಂದರ್ಭದಲ್ಲಿ ಸ್ವಲ್ಪ ನರ್ವಸ್ ಆಗಿದ್ದೆ, ಯಾಕಂದರೆ ನಾನು ಇದುವರೆಗೆ ಮುಂದೆ ನಿಂತು ಯಾವುದೇ ಪ್ರಾರ್ಥನೆಗಳನ್ನು ನಡೆಸಿಕೊಟ್ಟಿರಲಿಲ್ಲ’ ಎಂದು ಆತ ಹೇಳಿಕೊಂಡಿದ್ದಾನೆ.
ಒಟ್ಟಿನಲ್ಲಿ ವಿದೇಶದಲ್ಲಿ, ಲಾಂಡ್ರಿ ವಿಳಾಸ ತೊರುವ ನೆಪದಲ್ಲಿ ಅರಳಿದ ಪ್ರೀತಿಯೊಂದು ಎರಡು ಜೀವಗಳನ್ನು ಬೆಸೆದ ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.