ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಿಯರ್‌ ಗ್ಲಾಸ್‌ನೊಳಗೆ ಕೋಳಿಯ ಕಾಲನ್ನು ಅದ್ದಿದ ಭೂಪ; ವಿಚಿತ್ರ ರೆಸಿಪಿ ಕಂಡು ನೆಟ್ಟಿಗರು ಶಾಕ್‌!

ಆಗಾಗ ವಿಚಿತ್ರ ಆಹಾರ ತಯಾರಿಸುವ ಮೂಲಕ ಫೇಮಸ್ ಆದ ಸಿಂಗಾಪುರದ ಕ್ಯಾಲ್ವಿನ್ ಲೀ ಈ ಬಾರಿ ಬಿಯರ್‌ ಗ್ಲಾಸ್‌ನೊಳಗೆ ಕೋಳಿಯ ಕಾಲು ಮತ್ತು ಮೆಣಸಿನಕಾಯಿಯನ್ನು ಮಿಕ್ಸ್ ಮಾಡಿ ರುಚಿ ನೋಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಯರ್‌ ಪ್ರೀಯರೇ ಈ ರೆಸಿಪಿ ಒಮ್ಮೆ ಟ್ರೈ ಮಾಡಿ ನೋಡಿ!

Profile pavithra Jun 19, 2025 4:33 PM

ನವದೆಹಲಿ: ಸಾಮಾನ್ಯವಾಗಿ ಬಿಯರ್ ಕುಡಿಯುವಾಗ ಚಿಕನ್, ಮಟನ್‍ ಪೀಸ್‍ಗಳನ್ನು ಸೈಡ್‍ ಡಿಶ್ ಆಗಿ ಸವಿಯುತ್ತಾರೆ. ಆದರೆ ಇಲ್ಲೊಬ್ಬ ಫುಡ್ ವಾಗ್ಲರ್‌ ಕೋಳಿ ಕಾಲು ಮತ್ತು ಮೆಣಸಿನಕಾಯಿ ಮಿಕ್ಸ್ ಮಾಡಿ ಬಿಯರ್ ರುಚಿಯನ್ನು ಸವಿದಿದ್ದಾನೆ. ಅವನ ಈ ವಿಚಿತ್ರ ಆಹಾರ ಪ್ರಯೋಗದ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆದು ವೈರಲ್(Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಇಷ್ಟಪಟ್ಟರೆ, ಇನ್ನೂ ಕೆಲವರು ಮುಖ ಕಿವುಚಿಕೊಂಡಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ, ಕ್ಯಾಲ್ವಿನ್ ಲೀ ಎಂಬಾತ ಕೋಳಿಯ ಕಾಲಿನ ಒಂದು ತುಂಡನ್ನು ಹಿಡಿದುಕೊಂಡು, ಅದನ್ನು ಬಿಯರ್‌ ಗ್ಲಾಸ್‌ನೊಳಗೆ ನಿಧಾನವಾಗಿ ತಿರುಗಿಸಿರುವುದು ಸೆರೆಯಾಗಿದೆ. ಹಾಗೇ ಬಿಯರ್‌ ಕುಡಿದು ತುಂಬಾ ಚೆನ್ನಾಗಿದೆ ಎಂದು ಆತ ಹೇಳಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವರು ಇದನ್ನು ಇಷ್ಟಪಟ್ಟರೆ, ಇತರರು ಈ ರೆಸಿಪಿಯನ್ನು ಟ್ಎಂರೈ ಮಾಡುವುದಿಲ್ಲ ಎಂದು ಮುಖ ಕಿವುಚಿದ್ದಾರೆ. ಲೀ ಈ ವೀಡಿಯೊ ಈಗಾಗಲೇ 13,000 ಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.

ಆಗಾಗ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ವಿಚಿತ್ರವಾದ ಆಹಾರಗಳನ್ನು ತಯಾರಿಸುವ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಸಿಂಗಾಪುರದ ಕ್ಯಾಲ್ವಿನ್ ಲೀ ಈ ಹಿಂದೆ ಕೂಡ ಪರೋಟವನ್ನು ಫ್ಯಾಂಟಾ ಜೊತೆ ಬೇಯಿಸಿದ ವಿಡಿಯೊವನ್ನು ಪೋಸ್ಟ್ ಮಾಡಿದ್ದನು. ಅದು ಸಹ ಎಲ್ಲರ ಗಮನಸೆಳೆದು ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಊಟದ ವಿಷಯಕ್ಕೆ ಕಿರಿಕ್; ರೊಚ್ಚಿಗೆದ್ದ ಪ್ರಯಾಣಿಕರಿಂದ ಅನಾಗರಿಕ ವರ್ತನೆ

ಅದರಲ್ಲಿ ಆತ ಪರೋಟವನ್ನು ಫಾಂಟಾ ಜೊತೆ ಬೇಯಿಸಿದ್ದನು ಮತ್ತು ಅದನ್ನು ತಿಂದು ರುಚಿ ಅದ್ಭುತವಾಗಿದೆ ಎಂದು ಹೇಳಿದ್ದನು.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಐದು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿತ್ತು.