ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದ್ವೆ ಸಂಭ್ರಮದಲ್ಲಿದ್ದ ವಧುವಿನ ಮನೆಯವ್ರಿಗೆ ಕಾದಿತ್ತು ಬಿಗ್‌ ಶಾಕ್! ಅಷ್ಟಕ್ಕೂ ನಡೆದಿದ್ದೇನು?

ವರನು ಆಹ್ವಾನಿಸಿದ 600 ಅತಿಥಿಗಳ ಊಟಕ್ಕಾಗಿ ವಧುವಿನ ಕುಟುಂಬವು ಹಣ ಪಾವತಿಸಲು ನಿರಾಕರಿಸಿದ ಕಾರಣ ವರ ಮದುವೆಯನ್ನು ರದ್ದುಗೊಳಿಸಿದ್ದಾನೆ. ಈ ವಿಚಾರವನ್ನು ವಧುವಿನ ಸಹೋದರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral News)ಆಗಿದೆ. ನೆಟ್ಟಿಗರು ವರನ ವಿರುದ್ಧ ಕಿಡಿಕಾರಿದ್ದಾರೆ.

ಏಕಾಏಕಿ ಮದ್ವೆ ಕ್ಯಾನ್ಸಲ್‌ ಎಂದ ವರ!

Profile pavithra Apr 11, 2025 3:34 PM

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅಮೂಲ್ಯವಾದ ದಿನವಾಗಿದೆ. ಹಾಗಾಗಿ ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಕೆಲವೊಂದು ಮದುವೆಗಳು ಕ್ಷುಲಕ ಕಾರಣಕ್ಕೆ ರದ್ದಾಗುತ್ತದೆ. ಅಂತಹ ಎಷ್ಟೋ ಮದುವೆಗಳು ರದ್ದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿತ್ತು. ಇದೀಗ ಮತ್ತೊಂದು ಮದುವೆ ಊಟದ ವಿಚಾರಕ್ಕೆ ರದ್ದಾಗಿದೆಯಂತೆ. ವರನು ಆಹ್ವಾನಿಸಿದ 600 ಅತಿಥಿಗಳ ಊಟಕ್ಕಾಗಿ ವಧುವಿನ ಕುಟುಂಬವು ಹಣ ಪಾವತಿಸಲು ನಿರಾಕರಿಸಿದ ಕಾರಣ ವರ ಮದುವೆಯನ್ನು ರದ್ದುಗೊಳಿಸಿದ್ದಾನೆ. ಈ ವಿಚಾರವನ್ನು ವಧುವಿನ ಸಹೋದರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral News) ಆಗಿದೆ.

ಆತ ತನ್ನ ಪೋಸ್ಟ್‌ನಲ್ಲಿ ಹಣದ ಬೇಡಿಕೆಯಿಂದಾಗಿ ತನ್ನ ಸಹೋದರಿಯ ಮದುವೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾನೆ. ತನ್ನ ಸಹೋದರಿ ಸಂಬಂಧಿಕರ ಮೂಲಕ ತಮಗೆ ಪರಿಚಯವಿದ್ದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಮದುವೆಯ ಶುರುವಿನ ಮಾತುಕತೆಯಲ್ಲಿ ಎರಡೂ ಕುಟುಂಬಗಳು ತಮ್ಮ ತಮ್ಮ ಅತಿಥಿಗಳ ಊಟೋಪಚಾರದ ಖರ್ಚನ್ನು ಪಾವತಿಸಲು ಒಪ್ಪಿಕೊಂಡಿದ್ದವು. ಮದುವೆ ಮೇ ತಿಂಗಳಿನಲ್ಲಿ ನಡೆಯಬೇಕಾಗಿತ್ತು. ಆದರೆ ವರನು ಕಾಲ್ ಮಾಡಿ ಇದ್ದಕ್ಕಿದ್ದಂತೆ ತನ್ನ 600 ಮಂದಿ ಅತಿಥಿಗಳ ಊಟಕ್ಕಾಗಿ ಹಣವನ್ನು ಪಾವತಿಸಬೇಕೆಂದು ಒತ್ತಾಯಿಸಿದ್ದಾನೆ. ಆದರೆ ತಾವು ಶ್ರೀಮಂತರಲ್ಲ, ತಮ್ಮ ಬಳಿ ಅಷ್ಟೊಂದು ಹಣವಿರದ ಕಾರಣ ಅದನ್ನು ನಿರಾಕರಿಸಿದೆವು ಹಾಗಾಗಿ ವರ ಈ ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ಹೇಳಿದ್ದಾನೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ವಧುವಿನ ಕುಟುಂಬವನ್ನು ಬೆಂಬಲಿಸಿ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅನೇಕರು ವರನು ಮದುವೆಗಿಂತ ಹಣದಲ್ಲಿ ಆಸಕ್ತಿ ಹೊಂದಿದ್ದಾನೆ. ಹಾಗಾಗಿ ಈ ಮದುವೆ ರದ್ದಾಗಿದ್ದೆ ಒಳ್ಳೆಯದು ಎಂದು ಹೇಳಿದ್ದಾರೆ. “ಮದುವೆಯಾಗಿ ವಿಚ್ಛೇದನ ಪಡೆಯವುದಕ್ಕಿಂತ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಒಳ್ಳೆಯದಾಯಿತು”ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.“ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಮದುವೆಯನ್ನು ರದ್ದುಗೊಳಿಸುವುದು ಯಾವುದೇ ಅಪರಾಧವಲ್ಲ. ಮದುವೆ ಸಮಾರಂಭದ ವಿಧ ಮತ್ತು ವೆಚ್ಚಗಳ ಬಗ್ಗೆ ನಿಮಗೆ ಭಿನ್ನಾಭಿಪ್ರಾಯವಿತ್ತು. ಇದು ವರದಕ್ಷಿಣೆ ತಡೆ ಕಾಯ್ದೆ, 1861 ರ ಪ್ರಕಾರ ವರದಕ್ಷಿಣೆಯ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ" ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ನಡೀತು ಮಾರಾಮಾರಿ; ಶಾಕಿಂಗ್‌ ವಿಡಿಯೊ ನೋಡಿ!

ಈ ಹಿಂದೆ ಸೂರತ್‍ನ ಪ್ರಸಿದ್ಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಮದುವೆಯೊಂದರಲ್ಲಿ ಅತಿಥಿಗಳಿಗೆ ಸರಿಯಾಗಿ ಊಟ ಸಿಗದೆ ಊಟದಲ್ಲಿ ಕೊರತೆಯಾದ ಕಾರಣ ಕೋಪಗೊಂಡ ವರನ ಕಡೆಯವರು ವಧುವಿನ ಕುಟುಂಬದ ಜೊತೆ ಜಗಳವಾಡಿ ಮದುವೆ ರದ್ದು ಮಾಡಲು ಮುಂದಾಗಿದ್ದಾರೆ. ಈ ಘಟನೆ ಕೊನೆಗೆ ಪೊಲೀಸ್‍ ಠಾಣೆಯ ಮೆಟ್ಟಿಲೇರಿದ ಕಾರಣ ಪೊಲೀಸರು ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ.