ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡುರಸ್ತೆಯಲ್ಲಿ ನಡೀತು ಮಾರಾಮಾರಿ; ಶಾಕಿಂಗ್‌ ವಿಡಿಯೊ ನೋಡಿ!

ಉತ್ತರ ಪ್ರದೇಶದ ಸಂಭಾಲ್‍ನ ಚಂದೌಸಿ ಕೊಟ್ವಾಲಿಯಲ್ಲಿ ನಡುರಸ್ತೆಯಲ್ಲಿ ತರಕಾರಿ ಗಾಡಿಗೆ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ತರಕಾರಿ ಮಾರಾಟಗಾರ ಮತ್ತು ಕಾರು ಚಾಲಕನ ನಡುವೆ ಜಗಳ ನಡೆದಿದೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.

ಕಾರು ಚಾಲಕ ಹಾಗೂ ವ್ಯಾಪಾರಿ ನಡುವೆ ಬಿಗ್‌ಫೈಟ್‌; ನಡೆದಿದ್ದೇನು?

Profile pavithra Apr 11, 2025 1:33 PM

ಲಖನೌ: ಬೀದಿಗಳಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ ಜನರು ಹೊಡೆದಾಡಿಕೊಳ್ಳುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದೀಗ ಉತ್ತರ ಪ್ರದೇಶದ ಸಂಭಾಲ್‍ನ ಚಂದೌಸಿ ಕೊಟ್ವಾಲಿಯಲ್ಲಿ ನಡುರಸ್ತೆಯಲ್ಲಿ ತರಕಾರಿ ಮಾರಾಟಗಾರ ಮತ್ತು ಕಾರು ಚಾಲಕನ ನಡುವೆ ಜಗಳ ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಕಾರು ಚಾಲಕ ತರಕಾರಿ ಗಾಡಿಗೆ ಡಿಕ್ಕಿ ಹೊಡೆದಿದ್ದಲ್ಲದೇ ತರಕಾರಿ ಮಾರಾಟಗಾರನನ್ನು ಬೆದರಿಸಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದರಿಂದಾಗಿ ಅವರ ನಡುವೆ ಜಗಳ ನಡೆದು ಒಬ್ಬರು ಇನ್ನೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್‍ನ ಚಂದೌಸಿ ಪ್ರದೇಶದ ಪೊಲೀಸ್ ಠಾಣೆಯ ಮುಂದೆಯೇ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತರಕಾರಿ ಮಾರಾಟಗಾರನ ಗಾಡಿಗೆ ಕಾರು ಡಿಕ್ಕಿ ಹೊಡೆದಿದೆ. ಆಗ ತರಕಾರಿ ಮಾರಾಟಗಾರ ಕಾರಿನ ಚಾಲಕನಿಗೆ ಬೈದಿದ್ದಾನೆ. ಇದರಿಂದ ಕೋಪಗೊಂಡ ಕಾರು ಚಾಲಕ ಕಾರಿನಿಂದ ಹೊರಬಂದು ಮಾರಾಟಗಾರನಿಗೆ ಹೊಡೆಯಲು ಮುಂದಾಗಿದ್ದಾನೆ. ಚಾಲಕ ಹತ್ತಿರ ಬರುತ್ತಿದ್ದಂತೆ, ತರಕಾರಿ ಮಾರಾಟಗಾರ ತಡಮಾಡದೆ ಕಾರು ಚಾಲಕನಿಗೆ ತಿರುಗೇಟು ನೀಡಿದ್ದಾನೆ.

ಜಗಳದ ವಿಡಿಯೊ ಇಲ್ಲಿದೆ ನೋಡಿ...



ವೈರಲ್ ವಿಡಿಯೊದಲ್ಲಿ ಮಾರಾಟಗಾರನು ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದು, ಆತನ ಅಂಗಿಯನ್ನು ಹರಿದುಹಾಕಿದ ದೃಶ್ಯ ಸೆರೆಯಾಗಿದೆ.ಈ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, 26,000 ಕ್ಕೂ ಹೆಚ್ಚು ವ್ಯೂವ್ಸ್ ಮತ್ತು 400ಕ್ಕೂ ಹೆಚ್ಚು ಲೈಕ್‍ಗಳು ಮತ್ತು ಸಾಕಷ್ಟು ಕಾಮೆಂಟ್‍ಗಳನ್ನು ಗಳಿಸಿದೆ. ಸೋಶಿಯಲ್ ಮೀಡಿಯಾದ ನೆಟ್ಟಿಗರು ಈ ವಿಡಿಯೊ ನೋಡಿ ನಕ್ಕಿದ್ದಾರೆ. ಜನರು ತರಕಾರಿ ಮಾರಾಟಗಾರನ ಪರವಾಗಿ ನಿಂತಿದ್ದಕ್ಕಾಗಿ ಅನೇಕರು ಹೊಗಳಿದ್ದಾರೆ. "ಯಾರಾದರೂ ತರಕಾರಿಗಳನ್ನು ಮಾರಾಟ ಮಾಡುತ್ತಾರೆ ಎಂದ ಮಾತ್ರಕ್ಕೆ ಅವರು ನಿಮ್ಮ ಅಸಂಬದ್ಧ ನಡವಳಿಕೆಯನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥವಲ್ಲ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ಇದು ಫಿಟ್ನೆಸ್ ಕಾಪಾಡಿಕೊಳ್ಳುವವರಿಗೆ ಪ್ರೇರಣೆಯಾಗಿದೆ - ದಪ್ಪಗಿರುವವರೆಲ್ಲರೂ ಬಲಶಾಲಿಯಾಗಿರುತ್ತಾರೆ ಎಂದರ್ಥವಲ್ಲ!" ಎಂದಿದ್ದಾರೆ.

ಈ ವಿಡಿಯೊ ವೈರಲ್ ಆದ ಬಳಿಕ ಇದು ಪೊಲೀಸರ ಗಮನಸೆಳೆದು ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ. ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರಿ ಚಂದೌಸಿಗೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಕುಡಿದ ಮತ್ತಿನಲ್ಲಿ ಬ್ರಿಟಿಷ್‌ ಪ್ರವಾಸಿಗನ ಪುಂಡಾಟ; ನಶೆ ಇಳಿದಾಗ ನಡೆದಿದ್ದೇ ಬೇರೆ! ವಿಡಿಯೊ ನೋಡಿ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ರೀತಿ ಬೀದಿ ಜಗಳ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮಾ ಪೂರ್ಣಗಿರಿ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಗುಂಪನ್ನು ಹಣ್ಣಿನ ವ್ಯಾಪಾರಿಗಳು ಥಳಿಸಿದ ಘಟನೆ ವರದಿಯಾಗಿತ್ತು. ಹಣ್ಣುಗಳ ಬೆಲೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಶುರುವಾದ ಜಗಳವು ಶೀಘ್ರದಲ್ಲೇ ಹಿಂಸಾಚಾರಕ್ಕೆ ತಿರುಗಿತು. ಈ ಘಟನೆಯ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.