Viral Video: ಪಾನಿಪುರಿ ಸವಿದ ವಿದೇಶಿ ವಿದ್ಯಾರ್ಥಿಗಳು ಹೇಳಿದ್ದೇನು ಗೊತ್ತಾ? ವಿಡಿಯೊ ವೈರಲ್
ಅಂತರರಾಷ್ಟ್ರೀಯ ದಿನಾಚರಣೆಯ ದಿನ ಬುಡಾಪೆಸ್ಟ್‌ನಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳು ಪಾನಿಪುರಿಯನ್ನು ತಿಂದಿದ್ದಾರೆ. ಪಾನಿಪುರಿ ತಿಂದ ಅವರ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು. ಪಾನಿಪುರಿ ಸವಿದ ವಿದ್ಯಾರ್ಥಿಗಳ ರಿಯಾಕ್ಷನ್ ಹೇಗಿತ್ತು ಎಂಬುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ನವದೆಹಲಿ: ಪಾನಿಪುರಿ ಭಾರತದ ಅತ್ಯಂತ ಪ್ರಸಿದ್ಧ ಬೀದಿ ಆಹಾರಗಳಲ್ಲಿ ಒಂದಾಗಿದೆ. ರುಚಿ ರುಚಿಯಾದ ಈ ಪಾನಿಪುರಿಗಳನ್ನು ಸವಿಯುವುದೇ ಒಂದು ಖುಷಿ. ಇದೀಗ ವಿದೇಶಿ ವಿದ್ಯಾರ್ಥಿಗಳು ಪಾನಿಪುರಿ ಸವಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಬುಡಾಪೆಸ್ಟ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ದಿನಾಚರಣೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೊದಲ್ಲಿ, ಹಲವಾರು ವಿದೇಶಿ ವಿದ್ಯಾರ್ಥಿಗಳಿದ್ದು, ಅವರು ಪಾನಿಪುರಿಯನ್ನು ತಿನ್ನುವುದು ರೆಕಾರ್ಡ್ ಆಗಿದೆ.
ವಿಡಿಯೊ ನೋಡಿದ ನಂತರ, ಪಾನಿಪುರಿ ಪ್ರಿಯರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. "ಪಾನಿಪುರಿಯನ್ನು ಒಮ್ಮೆ ನೀವು ಇಷ್ಟಪಡಲು ಶುರುಮಾಡಿದರೆ ನಂತರ ಅದನ್ನು ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಎಲ್ಲರೂ ಪಾನಿಪುರಿಯನ್ನು ಇಷ್ಟಪಡುತ್ತಾರೆ” ಎಂದು ಬರೆದಿದ್ದಾರೆ.
ಪಾನಿಪುರಿ ಸವಿದ ವಿದ್ಯಾರ್ಥಿಗಳ ವಿಡಿಯೊ ಇಲ್ಲಿದೆ ನೋಡಿ...
ಈ ಹಿಂದೆ ಜನರು ಪಾನಿಪುರಿ ತಿನ್ನಲು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ಬಂಡವಾಳ ಮಾಡಿಕೊಂಡ ನಾಗ್ಪುರದ ಗೋಲ್‌ಗಪ್ಪ ಮಾರಾಟಗಾರನೊಬ್ಬ 99,000 ನೀಡಿದ್ರೆ ಜೀವನಪರ್ಯಂತ ಫ್ರಿಯಾಗಿ ಯಾವಾಗ ಬೇಕಾದ್ರೂ ಗೋಲ್‌ಗಪ್ಪ ನೀಡಲಿದ್ದಾನೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವೈರಲ್ ಆದ ಪೋಸ್ಟ್‌ವೊಂದರಲ್ಲಿ ತಿಳಿಸಿದ ಪ್ರಕಾರ, ನಾಗ್ಪುರದ ಗೋಲ್‍ಗಪ್ಪ ವಾಲಾ ಗುಪ್ತಾ ಜನರ ಪಾನಿಪುರಿ ಕ್ರೇಜ್‍ನ ಲಾಭವನ್ನು ಪಡೆಯಲು ಸ್ಕೆಚ್ ಹಾಕಿದ್ದಾರೆ. ಅದರಂತೆ ಗ್ರಾಹಕರು ಒಮ್ಮೆಗೆ 99,000 ರೂಪಾಯಿ ನೀಡಿದರೆ ಈತ ಅವರ ಜೀವಮಾನವಿಡೀ ಗೋಲ್‍ಗಪ್ಪ ನೀಡುತ್ತಾನಂತೆ. ಇದು ಮಾತ್ರವಲ್ಲ, ಅವರು ಯಾವುದೇ ಸಮಯದಲ್ಲಿ ಬಂದು ತಮಗೆ ಬೇಕಾದಷ್ಟು ಗೋಲ್‍ಗಪ್ಪಗಳನ್ನು ತಿನ್ನಬಹುದು ಎಂದಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಮದುವೆ ಮನೆಯೋ? ಇಲ್ಲ, ರಣರಂಗವೋ? ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ವಿಡಿಯೊ ನೋಡಿ
ಮತ್ತೊಂದು ಘಟನೆಯಲ್ಲಿ ಪಾನಿಪುರಿ ಪ್ರಿಯೆ ಮಹಿಳೆಯೊಬ್ಬಳು ಕಾಳಿ ಮಾತಾ ವೇಷ ಧರಿಸಿ ಬೀದಿ ಬದಿ ಫುಡ್ ಕೌಂಟರ್ ಬಳಿ ನಿಂತು 'ಪಾನಿಪುರಿ' ತಿಂದು ಆನಂದಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಮಹಿಳೆ ಮೇಲೆ ಕಿಡಿಕಾರಿದ್ದಾರೆ. ವೈರಲ್ ವಿಡಿಯೊದಲ್ಲಿ ಕಾಳಿ ಮಾತೆಯ ವೇಷದಲ್ಲಿರುವ ಮಹಿಳೆ ಪಾನಿಪುರಿ ಅಂಗಡಿಯ ಬಳಿ ನಿಂತು ಪ್ಲೇಟ್ ಹಿಡಿದುಕೊಂಡು ಪಾನಿಪುರಿ ತಿನ್ನುವುದು ರೆಕಾರ್ಡ್ ಆಗಿದೆ. ಇದನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.