Viral Video: ಮದುವೆ ಮನೆಯೋ? ಇಲ್ಲ, ರಣರಂಗವೋ? ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಈ ವಿಡಿಯೊ ನೋಡಿ
ಮದುವೆಯ ದಿನದಂದು ವರರಿಬ್ಬರು ವರದಕ್ಷಿಣೆಯಾಗಿ ಕಾರು ಕೇಳಿದ್ದಕ್ಕೆ ಕೋಪಗೊಂಡ ಇಬ್ಬರು ಯುವತಿಯರು ಮದುವೆಯನ್ನು ಕ್ಯಾನ್ಸಲ್ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಲಖನೌ: ವರದಕ್ಷಿಣೆಯ ಪಿಡುಗು ಇನ್ನು ನಮ್ಮ ದೇಶದಲ್ಲಿ ಕೆಲವು ಕಡೆ ತಾಂಡವಾಡುತ್ತಿದೆ. ಈ ವರದಕ್ಷಿಣಿಯಿಂದಾಗಿ ಎಷ್ಟೋ ಹೆಣ್ಣು ಮಕ್ಕಳ ಮದುವೆ ಮುರಿದುಬಿದ್ದಿದೆ. ಇದೀಗ ಉತ್ತರಪ್ರದೇಶದ ಹತ್ರಾಸ್‍ನಲ್ಲಿ ಕೂಡ ಅಂತಹದೊಂದು ಘಟನೆ ನಡೆದಿರುವುದಾಗಿ ವರದಿಯಾಗಿದೆ. ಮದುವೆಯ ದಿನದಂದು ವರರಿಬ್ಬರು ವರದಕ್ಷಿಣೆಯಾಗಿ ಕಾರು ಕೇಳಿದ್ದಕ್ಕೆ ಕೋಪಗೊಂಡ ಇಬ್ಬರು ಸಹೋದರಿಯರು ಮದುವೆಯನ್ನು ಕ್ಯಾನ್ಸಲ್ ಮಾಡಿದ ಅಘಾತಕಾರಿ ಘಟನೆ ನಡೆದಿದೆ. ಮದುವೆಯ ಆಚರಣೆಗಳ ಮಧ್ಯದಲ್ಲಿ ವರರಿಬ್ಬರು ಹಾಗೂ ಅವರ ಕುಟುಂಬ ಸದಸ್ಯರ ಜೊತೆ ಸೇರಿ ವರದಕ್ಷಿಣೆಗಾಗಿ ಕಾರನ್ನು ಬೇಡಿಕೆ ಇಟ್ಟಿದ್ದರಿಂದ ಈ ಮದುವೆ ಬೇಡ ಎಂದು ವಧುಗಳಿಬ್ಬರು ಹೇಳಿದ್ದಾರೆ. ಇದರಿಂದ ಎರಡೂ ಕಡೆಗಳ ನಡುವೆ ಜಗಳ ಭುಗಿಲೆದ್ದಿತು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಏಪ್ರಿಲ್ 14 ರಂದು ಹತ್ರಾಸ್‍ನ ಸಮದ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಧು ಶಿವಾನಿ ಮತ್ತು ಭಾರತಿ ಎಂದು ಗುರುತಿಸಲಾಗಿದ್ದು, ಸದಾಬಾದ್ ತಹಸಿಲ್‍ನಲ್ಲಿರುವ ಒಂದೇ ಗ್ರಾಮದ ನಿವಾಸಿಗಳಾಗಿದ್ದಾರೆ. ವರರನ್ನು ಮೋಹಿತ್ ಮತ್ತು ನಾರಾಯಣ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಸಹೋದರರು ಹತ್ತಿರದ ತಾಜ್ಪುರ ಗ್ರಾಮದವರಾಗಿದ್ದಾರೆ. ಮದುವೆಯ ದಿನ ವರನ ಕುಟುಂಬದವರು ವರದಕ್ಷಿಣೆಯಾಗಿ ಕಾರನ್ನು ನೀಡುವಂತೆ ವಧುವಿನ ಕುಟುಂಬದವರ ಮೇಲೆ ಒತ್ತಡ ಹೇರಿದ್ದಾರಂತೆ.
ವಿಡಿಯೊ ಇಲ್ಲಿದೆ ನೋಡಿ...
दहेज में कार की मांग पर दो बहनों ने तोड़ी शादी, बारात लौटी खाली हाथ – हाथरस की बेटियों का सशक्त फैसला #HathrasNews #DowrySystem #DahejPratha #StrongWomen #ShaadiTooti #ViralNewsIndia #HathrasGirls #NoToDowry #DowryDemandRejected #BaratReturned #WomensEmpowerment #DeshKiBeti pic.twitter.com/RA21pMWP39
— Aarambh News Official (@aarambhnewsoffi) April 17, 2025
ವರದಕ್ಷಿಣೆ ಬೇಡಿಕೆಯಿಂದಾಗಿ ಮದುವೆ ಸ್ಥಳದಲ್ಲಿ ತೀವ್ರ ಜಗಳ ಭುಗಿಲೆದ್ದಿದೆ. ವರನ ಕಡೆಯವರು ವಧುವಿನ ಕುಟುಂಬ ಸದಸ್ಯರನ್ನು ಥಳಿಸಿದ ನಂತರ ಅವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ಪೊಲೀಸರು ಎರಡು ಕಡೆಯವರ ಮನವೊಲಿಸಲು ಯತ್ನಿಸಿದ್ದಾರೆ. ಯುವತಿಯರು ಮದುವೆಗೆ ನಿರಾಕರಿಸಿದ್ದಾರಂತೆ. ನಂತರ ವಧುವಿನ ಕುಟುಂಬವು ವರ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಲ್ಲೆ ಮತ್ತು ಕಾನೂನುಬಾಹಿರ ವರದಕ್ಷಿಣೆ ಬೇಡಿಕೆಯ ಲಿಖಿತ ದೂರು ನೀಡಿದೆ.
ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಹಾಗೂ ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕೋರ್ಟ್‍ನೊಳಗೆ ವಕೀಲರ ಮಾರಾಮಾರಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಈ ರೀತಿ ಮದುವೆ ರದ್ದಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಮದುವೆ ಮನೆಯಲ್ಲಿ ಊಟದ ಕೊರತೆಯಾಗಿದ್ದಕ್ಕೆ ವರನ ಕುಟುಂಬದವರು ಮದುವೆಯನ್ನೇ ರದ್ದುಪಡಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಕೊನೆಗೆ ಮಂಟಪದಲ್ಲಿ ನಡೆಯಬೇಕಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ನಡೆಯಿತು. ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.