Viral Video: ಮೆಟ್ರೋದಲ್ಲಿ ಸೀಟಿಗಾಗಿ ಮಹಿಳೆಯರೊಂದಿಗೆ ಜಗಳಕ್ಕಿಳಿದ ವ್ಯಕ್ತಿ; ಬಿದ್ದು ಬಿದ್ದು ನಕ್ಕ ಪ್ರಯಾಣಿಕರು- ಫನ್ನಿ ವಿಡಿಯೊ ಫುಲ್ ವೈರಲ್
ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊರ್ವ ಸೀಟಿಗಾಗಿ ಮಹಿಳೆಯರ ಬಳಿ ಜಗಳಕ್ಕಿಳಿದಿದ್ದಾನೆ. ಮೆಟ್ರೋದಲ್ಲಿ ಸಾಕಷ್ಟು ಮಂದಿ ಮಹಿಳೆಯರು ನಿಂತಿದ್ದರು ಕೂಡ ಅವರಿಗೆ ತನ್ನ ಸೀಟನ್ನು ಬಿಟ್ಟುಕೊಡದೇ ಸುಮ್ಮನೇ ಕುಳಿತಿದ್ದಾನೆ. ಕೊನೆಗೆ ಎದ್ದು ಬಾಗಿಲ ಬಳಿ ಹೋದಾಗ ಮಹಿಳೆಯರು ಅವನಿಗೆ ವ್ಯಂಗ್ಯ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ದೆಹಲಿ ಮೆಟ್ರೋ ಒಂದಲ್ಲ ಒಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.ಜಗಳ, ಡ್ಯಾನ್ಸ್, ಹೊಡೆದಾಟ ಬಡಿದಾಟಗಳಿಗೂ ಕೂಡ ಈ ದೆಹಲಿ ಮೆಟ್ರೋ ಸಾಕ್ಷಿಯಾಗಿತ್ತು!ಇದೀಗ ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಮತ್ತೊಮ್ಮೆ ಜಗಳ ನಡೆದಿದೆ. ವ್ಯಕ್ತಿಯೊರ್ವ ಸೀಟಿಗಾಗಿ ಮಹಿಳೆಯರ ಬಳಿ ಜಗಳಕ್ಕಿಳಿದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅವನು ತಾನು ಇಳಿಯುವ ಸ್ಥಳ ಬರುವವರೆಗೂ ತನ್ನ ಸೀಟನ್ನು ಮಹಿಳಾ ಪ್ರಯಾಣಿಕರಿಗಾಗಿ ನೀಡಲು ನಿರಾಕರಿಸಿದ್ದಾನಂತೆ.
ವೈರಲ್ ವಿಡಿಯೊದಲ್ಲಿ ಆರಾಮವಾಗಿ ಕುಳಿತ ಆ ವ್ಯಕ್ತಿ ಕಿಕ್ಕಿರಿದ ಮೆಟ್ರೋ ರೈಲಿನಲ್ಲಿ ಫುಲ್ ಡ್ರಾಮಾ ಮಾಡಿದ್ದಾನಂತೆ. ಮೆಟ್ರೋದಲ್ಲಿ ಸಾಕಷ್ಟು ಮಂದಿ ಮಹಿಳೆಯರು ನಿಂತಿದ್ದರು ಕೂಡ ಅವರಿಗೆ ತನ್ನ ಸೀಟನ್ನು ಬಿಟ್ಟುಕೊಡದೇ ಗಟ್ಟಿಯಾಗಿ ಕುಳಿತುಕೊಂಡಿದ್ದಾನೆ. ಆದರೆ ಸ್ವಲ್ಪ ಸಮಯ ಬಿಟ್ಟು ಆತ ಸೀಟಿನಿಂದ ಎದ್ದು ಬಾಗಿಲ ಬಳಿ ಹೋದಾಗ ಅಲ್ಲಿದ್ದ ಮಹಿಳೆಯರು ತಕ್ಷಣ ಅವನನ್ನು ನಿಲ್ಲಿಸಿ, ಅಲ್ಲೇ ಕುಳಿತುಕೊಳ್ಳುವಂತೆ ಮತ್ತು ಬೇರೆ ಯಾರಿಗೂ ಸೀಟನ್ನು ಬಿಟ್ಟು ಕೊಡಬೇಡ ಎಂದು ವ್ಯಂಗ್ಯವಾಗಿ ಹೇಳಿದ್ದಾರಂತೆ.
ಮೆಟ್ರೋದಲ್ಲಿ ಜಗಳವಾಡಿದ ವ್ಯಕ್ತಿಯ ವಿಡಿಯೊ ಇಲ್ಲಿದೆ ನೋಡಿ...
Kalesh b/w a Guy and Ladies inside Delhi Metro over Seat issues: pic.twitter.com/S7hihLFqXa
— Ghar Ke Kalesh (@gharkekalesh) March 30, 2025
ಈ ವಿಡಿಯೊವನ್ನು 'ಘರ್ ಕೆ ಕಾಲೇಶ್' ಎಂಬ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಈಗ ನೆಟ್ಟಿಗರ ಗಮನಸೆಳೆದು ವೈರಲ್ ಆಗಿದೆ. ದೆಹಲಿ ಮೆಟ್ರೋದಲ್ಲಿ ಆಗಾಗ ಇಂತಹ ಜಗಳಗಳು ನಡೆಯುತ್ತಿರುತ್ತದೆ. ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಯುವಕ ಹಾಗೂ ಯುವತಿಯ ನಡುವಿನ ಜಗಳದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೆಟ್ರೋದಲ್ಲಿ ಪ್ರಯಾಣಿಸುವಾಗ ಯುವಕನೊಬ್ಬ ಯುವತಿಯನ್ನು ದಿಟ್ಟಿಸಿ ನೋಡಿದ್ದಕ್ಕೆ ದೊಡ್ಡ ಜಗಳವೇ ಆಗಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪ್ರಯಾಣಿಕರು ಇವರ ಜಗಳ ನೋಡಿ ನಕ್ಕಿದ್ದರು.
ಈ ಸುದ್ದಿಯನ್ನೂ ಓದಿ:Viral News: ಇನ್‌ಸ್ಟಾದಲ್ಲಿ ಸ್ನೇಹ... ಆಮೇಲೆ ಲವ್- ಆತನ ಅಸಲಿಯತ್ತು ಬಯಲಾದಾಗ ಕಾಲ ಮಿಂಚಿತ್ತು!
ಮೆಟ್ರೋದಲ್ಲಿ ಬಾಡಿ ಶೇಮಿಂಗ್!
ಮತ್ತೊಂದು ಘಟನೆಯಲ್ಲಿ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಮಧ್ಯವಯಸ್ಸಿನ ಮಹಿಳಾ ಪ್ರಯಾಣಿಕಳೊಬ್ಬಳು ಬಾಡಿ ಶೇಮಿಂಗ್ ಮಾಡಿದ ಘಟನೆಯೊಂದು ನಡೆದಿತ್ತು. ನೋಡುವುದಕ್ಕೆ ಸ್ವಲ್ಪ ದಪ್ಪಗಿದ್ದ ಯುವತಿಗೆ ಮಹಿಳೆಯೊಬ್ಬಳು ನೀವು 50 ವರ್ಷದ ಮುದುಕಿಯಂತೆ ಕಾಣುತ್ತಿದ್ದಿಯಾ ಎಂದು ಅವಮಾನಿಸಿದ್ದಾಳೆ. 20 ವರ್ಷದ ಯುವತಿ ಮೆಟ್ರೋದಲ್ಲಿ ಚಿಪ್ಸ್ ತಿಂದ ಹುಡುಗಿಯೊಬ್ಬ ಪರವಾಗಿ ಮಾತನಾಡಿದ್ದಕ್ಕೆ ಮಹಿಳೆ ಸಿಟ್ಟಾಗಿ ಈಕೆಯ ಮೇಲೆ ಹರಿಹಾಯ್ದಿದ್ದಾಳೆ. ಕೊನೆಗೆ ಸಹಪ್ರಯಾಣಿಕರೊಬ್ಬರು ಮದ್ಯಪ್ರವೇಶಿಸಿ ಈ ರೀತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.