ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸೆಕೆಯೆಂದು ಎಸಿ ಆನ್ ಮಾಡಲು ಹೋದ ವ್ಯಕ್ತಿಗೆ ಶಾಕ್‌ ಕಾದಿತ್ತು! ವಿಡಿಯೊ ನೋಡಿದ್ರೆ ನೀವು ಕೂಡ ಬೆಚ್ಚಿಬೀಳೋದು ಗ್ಯಾರಂಟಿ

ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿಯಲ್ಲಿ ಸತ್ಯನಾರಾಯಣ ಎಂಬ ವ್ಯಕ್ತಿ ಎಸಿಯನ್ನು ಆನ್ ಮಾಡಲು ಹೋಗಿ ಬೆಚ್ಚಿಬಿದ್ದಿದ್ದಾನೆ. ಅರೇ.. ಎಸಿಯಲ್ಲಿ ಏನಿತ್ತು? ಎಂಬ ಕುತೂಹಲ ನಿಮಗೂ ಕಾಡ್ತಿದೆಯಾ....? ಹೌದು ಹಲವು ದಿನಗಳಿಂದ ಆಫ್‌ ಆಗಿದ್ದ ಎಸಿಯೊಳಗೆ ಹಾವೊಂದು 8-10 ಮರಿಗಳೊಂದಿಗೆ ವಾಸವಾಗಿತ್ತಂತೆ. ಇದರ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ಒಂದಲ್ಲ... ಎರಡಲ್ಲ ಎಸಿಯೊಳಗೆ 8-10 ಹಾವು! ಶಾಕಿಂಗ್‌ ವಿಡಿಯೊ ಇಲ್ಲಿದೆ

Profile pavithra Mar 13, 2025 1:05 PM

ಅಮರಾವತಿ : ಚಳಿ, ಮಳೆಗಾಲದಲ್ಲಿ ಸಾಮಾನ್ಯವಾಗಿ ಎಸಿಯ ಅಗತ್ಯವಿರುವುದಿಲ್ಲ. ಹಾಗಾಗಿ ಕೆಲವರು ಎಸಿ ಆಫ್‌ ಮಾಡುತ್ತಾರೆ. ಆದರೆ ಸೆಕೆ ಬಂದಾಗ ಮಾತ್ರ ಎಸಿ ಇಲ್ಲದೇ ಒಂದು ದಿನ ಕೂಡ ಇರುವುದಕ್ಕೆ ಆಗುವುದಿಲ್ಲ. ಹಲವು ದಿನಗಳಿಂದ ಆಫ್‌ ಆಗಿದ್ದ ಎಸಿಯನ್ನು ಆನ್‌ ಮಾಡಲು ಹೋಗಿ ವ್ಯಕ್ತಿಯೊಬ್ಬ ಬೆಚ್ಚಿಬಿದ್ದ ಘಟನೆಯೊಂದು ನಡೆದಿದೆ.ಹೆದರುವಂತದ್ದು ಏನಿತ್ತು ಅದರೊಳಗೆ ಅಂದುಕೊಳ್ಳುತ್ತಿದ್ದೀರಾ....? ಎಸಿಯೊಳಗೆ ಹಾವೊಂದು ತನ್ನ 8-10 ಮರಿಗಳೊಂದಿಗೆ ಎಸಿಯೊಳಗೆ ಬೆಚ್ಚಗೆ ಮಲಗಿತ್ತಂತೆ. ಸುಮಾರು ದಿನಗಳಿಂದ ಎಸಿ ಬಳಸದ ಹಿನ್ನೆಲೆ ಹಾವೊಂದು ಅದರೊಳಗೆ ಹೊಕ್ಕು ಮರಿ ಹಾಕಿದೆ. ಎಸಿ ಆನ್‌ ಮಾಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೊ ಈಗ ಸೋಶಿಯಲ್ ವಿಡಿಯೊದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಎಸಿಯೊಳಗೆ ಹಾವು ಹಾಗೂ ಮರಿಗಳನ್ನು ನೋಡಿ ಶಾಕ್‌ ಆದ ಸತ್ಯನಾರಾಯಣ ತಕ್ಷಣ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾನೆ. ನಂತರ ಹಾವು ಹಿಡಿಯವವರು ಬಂದು ಹಾವು ಮತ್ತು ಅದರ ಮರಿಗಳನ್ನು ಎಸಿಯಿಂದ ಎಚ್ಚರಿಕೆಯಿಂದ ತೆಗೆದಿದ್ದಾರೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.



ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೂಡಲೇ ಇದು ವೈರಲ್ ಆಗಿದೆ. ಇದುವರೆಗೆ ಈ ವಿಡಿಯೊ 84 ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ ಮತ್ತು ಅನೇಕ ಜನರು ಅದನ್ನು ಲೈಕ್‍ ಮಾಡಿದ್ದಾರೆ. ವಿಡಿಯೊವನ್ನು ನೋಡಿ, ನೆಟ್ಟಿಗರು ಎಸಿಯನ್ನು ಆನ್ ಮಾಡುವ ಮೊದಲು ನಾವು ಕೂಡ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ದೀರ್ಘಕಾಲದವರೆಗೆ ಬಳಸದಿರುವ ಎಲೆಕ್ಟ್ರಾನಿಕ್ ಸಾಧನಗಳ ಒಳಗೆ ಧೂಳು ತುಂಬಿರುವುದು ಮಾತ್ರವಲ್ಲ ಸಣ್ಣ ಜೀವಿಗಳು ಪ್ರವೇಶಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಅವುಗಳನ್ನು ಆನ್ ಮಾಡುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮುಖ್ಯ. ಇದರಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಲೈಬ್ರೇರಿಯಲ್ಲಿ ಪುಸ್ತಕಗಳ ಮೇಲೆ ಮಲಗಿದ್ದ 8 ಅಡಿ ಉದ್ದದ ಹಾವು; ಭಯಗೊಂಡ ವಿದ್ಯಾರ್ಥಿಗಳು ಹೀಗ್‌ ಮಾಡೋದಾ?

ಇತ್ತೀಚೆಗೆ ತೆಲಂಗಾಣದ ನಲ್ಗೊಂಡದ ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವೊಂದು ಮಲಗಿದ್ದು, ಇದನ್ನು ಕಂಡು ಭಯಭೀತರಾದ ವಿದ್ಯಾರ್ಥಿಗಳು ಅದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾವಿನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿ ಹಾವನ್ನು ಗಾಯಗೊಳಿಸುವುದು ಸೆರೆಯಾಗಿದೆ. ಈ ದಾಳಿಯಲ್ಲಿ ಕೋಲುಗಳಿಂದ ಕ್ರೂರವಾಗಿ ಥಳಿಸಿದ ಕಾರಣ ಹಾವು ಅಲ್ಲೇ ಸಾವನ್ನಪ್ಪಿದೆ. ನಂತರ ಸತ್ತ ಹಾವನ್ನು ಗೋಣಿ ಚೀಲದಲ್ಲಿ ಹಾಕಿ ಗ್ರಂಥಾಲಯದಿಂದ ಹೊರಗೆ ಹಾಕಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಾವಿನ ಮೇಲೆ ದಾಳಿ ಅದನ್ನು ಕೊಂದುಹಾಕಿದ್ದಾರೆ ಎನ್ನಲಾಗಿದೆ.