Viral Video: ಲೈಬ್ರೇರಿಯಲ್ಲಿ ಪುಸ್ತಕಗಳ ಮೇಲೆ ಮಲಗಿದ್ದ 8 ಅಡಿ ಉದ್ದದ ಹಾವು; ಭಯಗೊಂಡ ವಿದ್ಯಾರ್ಥಿಗಳು ಹೀಗ್ ಮಾಡೋದಾ?
ತೆಲಂಗಾಣದ ನಲ್ಗೊಂಡದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವೊಂದು ಮಲಗಿದ್ದು, ಪುಸ್ತಕಗಳನ್ನು ತೆಗೆದುಕೊಳ್ಳಲು ಬಂದ ವಿದ್ಯಾರ್ಥಿಗಳು ಹಾವನ್ನು ಕಂಡು ಭಯಭೀತರಾಗಿ ಅದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
![ಲೈಬ್ರೇರಿಯಲ್ಲಿ ಪುಸ್ತಕಗಳ ನಡುವೆ ಹಾಯಾಗಿ ಮಲಗಿದ್ದ ಹಾವು!](https://cdn-vishwavani-prod.hindverse.com/media/original_images/snake_viral_video_2Qn3AAP.jpg)
snake viral video
![Profile](https://vishwavani.news/static/img/user.png)
ತೆಲಂಗಾಣ: ಇತ್ತೀಚೆಗೆ ತೆಲಂಗಾಣದ ನಲ್ಗೊಂಡದ ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವೊಂದು ಮಲಗಿದ್ದು, ಇದನ್ನು ಕಂಡು ಭಯಭೀತರಾದ ವಿದ್ಯಾರ್ಥಿಗಳು ಅದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾವಿನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿ ಹಾವನ್ನು ಗಾಯಗೊಳಿಸುವುದು ಸೆರೆಯಾಗಿದೆ. ಈ ದಾಳಿಯಲ್ಲಿ ಕೋಲುಗಳಿಂದ ಕ್ರೂರವಾಗಿ ಥಳಿಸಿದ ಕಾರಣ ಹಾವು ಅಲ್ಲೇ ಸಾವನ್ನಪ್ಪಿದೆ. ನಂತರ ಸತ್ತ ಹಾವನ್ನು ಗೋಣಿ ಚೀಲದಲ್ಲಿ ಹಾಕಿ ಗ್ರಂಥಾಲಯದಿಂದ ಹೊರಗೆ ಕರೆದೊಯ್ದಿದ್ದಾರೆ.
ವರದಿ ಪ್ರಕಾರ, ವಿದ್ಯಾರ್ಥಿಗಳು ಪುಸ್ತಕಗಳನ್ನು ಹುಡುಕುತ್ತಿದ್ದಾಗ ಹಾವು ಪುಸ್ತಕಗಳ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದ್ದಾರೆ. ಸುಮಾರು 8 ಅಡಿ ಉದ್ದದ ಹಾವನ್ನು ನೋಡಿದ ಅವರು ಹೆದರಿಕೊಂಡು ಸಹಾಯಕ್ಕಾಗಿ ಕಿರುಚಿದ್ದಾರೆ. ವಿದ್ಯಾರ್ಥಿಗಳ ಕೂಗಾಟ ಕೇಳಿ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತ್ವರಿತವಾಗಿ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಾವಿನ ಮೇಲೆ ದಾಳಿ ಅದನ್ನು ಕೊಂದುಹಾಕಿದ್ದಾರೆ ಎನ್ನಲಾಗಿದೆ.
MGU లైబ్రరీలో పుస్తకాలపై ప్రత్యక్షమైన పాము.. ఉలిక్కిపడ్డ విద్యార్థులు
— Telugu Scribe (@TeluguScribe) February 11, 2025
నల్గొండ - మహాత్మాగాంధీ యూనివర్సిటీ లైబ్రరీలో పుస్తకాలు తీసుకునే క్రమంలో పుస్తకాలపై పాము కనిపించడంతో ఒక్కసారిగా ఉలిక్కిపడ్డ విద్యార్థులు
సుమారు 8 అడుగుల పాము కనిపించడంతో కేకలు వేశారు.. దీనిని గమనించిన… pic.twitter.com/pfqwgOM5eT
ಇದೇ ರೀತಿಯ ಘಟನೆ ಕಳೆದ ವರ್ಷ ಪುದುಚೇರಿಯಲ್ಲಿ ನಡೆದಿತ್ತು. ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ತರಗತಿಯ ಸಮಯದಲ್ಲಿ ತನ್ನ ಚೀಲದಿಂದ ಪುಸ್ತಕಗಳನ್ನು ತೆಗೆಯುವಾಗ ಒಳಗೆ ಹಾವನ್ನು ಕಂಡು ದಿಗ್ಭ್ರಮೆಗೊಂಡು ತನ್ನ ಚೀಲವನ್ನು ಕೆಳಗಿಳಿಸಿ, ತರಗತಿಯಿಂದ ಓಡಿಹೋಗಿದ್ದಾನೆ. ಈ ಬಗ್ಗೆ ಶಿಕ್ಷಕರಿಗೆ ಮಾಹಿತಿ ತಿಳಿದ ನಂತರ ಶಾಲೆಯ ಪ್ರಾಂಶುಪಾಲರು ತಕ್ಷಣ ಸಹಾಯಕ್ಕಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಇಬ್ಬರು ಹಿರಿಯ ಪ್ರಾಣಿ ಪಾಲಕರಾದ ಕಣ್ಣದಾಸನ್ ಮತ್ತು ವೇಲಾಯುಧಮ್ ಎಂಬುವವರು ಸ್ಥಳಕ್ಕೆ ಆಗಮಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
ಈ ಸುದ್ದಿಯನ್ನೂ ಓದಿ: Snake bite: ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು
ಹಾವು ಕಡಿದು ಅಂಗನವಾಡಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಮಯೂರಿ ಸುರೇಶ ಕುಂಬಳಪ್ಪನವರ (5) ಮೃತ ಬಾಲಕಿ.ಮಯೂರಿ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿ ತೆರಳಿದಾಗ ಹಾವು ಕಡಿದಿದೆ. ಬಾಲಕಿ ತಕ್ಷಣ, ಕಾಲಿಗೆ ಹಾವು ಕಡಿದಿದೆ ಎಂದು ಅಳುತ್ತಾ ಓಡಿ ಬಂದಿದ್ದಾಳೆ. ಈ ವೇಳೆ ಸ್ಥಳೀಯರು ಆಟೋದಲ್ಲಿ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.