Viral Video: ರೈಫಲ್ ಹಿಡ್ಕೊಂಡು ಫುಟ್ಬಾಲ್ ಆಡಿದ ಆಟಗಾರರು – ಇವರು ಕುಕಿ ಉಗ್ರರೇ?
ಜನಾಂಗೀಯ ಹಿಂಸೆಗೆ ನಲುಗಿರುವ ಮಣಿಪುರದಲ್ಲಿ ಇದೀಗ ಹೊಸ ವಿವಾದವೊಂದು ಸಖತ್ ಸುದ್ದಿಯಾಗುತ್ತಿದೆ. ಇಲ್ಲಿ ನಡೆದ ಫುಟ್ಬಾಲ್ ಟೂರ್ನಮೆಂಟ್ ಸಂದರ್ಭದಲ್ಲಿ ಆಟಗಾರರು ತಮ್ಮ ಕೈಯಲ್ಲಿ ಅತ್ಯಾಧುನಿಕ ರೈಫಲ್ ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇಂಫಾಲ್: ತಿಳಿ ಹಸಿರು ಬಣ್ಣದ ಜೆರ್ಸಿ ತೊಟ್ಟಿರುವ ಯುವಕನೊಬ್ಬ ಕೆಮರಾ ಕಡೆಗೆ ನಡೆದು ಬರುತ್ತಿದ್ದಾನೆ. ಆತ ಮೊಣಕಾಲಿನವರೆಗಿನ ಸಾಕ್ಸ್ ಧರಿಸಿ, ರನ್ನಿಂಗ್ ಶಾರ್ಟ್ಸ್ ಧರಿಸಿದ್ದಾನೆ. ಇದನ್ನು ನೋಡುವಾಗ ಆತ ಮೈದಾನದಲ್ಲಿ ಫುಟ್ಬಾಲ್ ಆಡಲು ಸಿದ್ಧನಾಗಿರುವ ಫುಟ್ಬಾಲಿಗ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಈತ ಕೇವಲ ಫುಟ್ಬಾಲ್ ಆಟಗರನಲ್ಲ, ಈತನ ಕೈಯಲ್ಲಿ ಅಟೊಮ್ಯಾಟಿಕ್ ರೈಫಲ್‌ಗಳಿವೆ! ಅದೂ ಎರಡೆರಡು, ಒಂದು ಆತನ ಬಲ ತೋಳಿನಲ್ಲಿ ನೇತು ಹಾಕಲ್ಪಟ್ಟಿದ್ದರೆ, ಇನ್ನೊಂದು ಆತನ ಕೈಯಲ್ಲಿದೆ. ತನ್ನ ಕೈಯಲ್ಲಿರುವ ಗನ್ ಅನ್ನು ಮೇಲಕ್ಕೆತ್ತಿ ಆತ ನಗುತ್ತಿದ್ದಾನೆ. ಈ ರೀತಿಯ ಒಂದು ಫುಟ್ಬಾಲ್ ಪಂದ್ಯದ ವಾರ್ಮ್ ಅಪ್ ಸಂದರ್ಭದ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ವಿಡಿಯೋವನ್ನು ಮಣಿಪುರದ (Manipur) ಕಾಂಗ್ ಪೋಕ್ಪಿ ಜಿಲ್ಲೆಯ ಸೋಷಿಯಲ್ ಮೀಡಿಯಾ ಇನ್ ಫ್ಲ್ಯುವೆನ್ಸರ್ ಒಬ್ಬರು ಇನ್ ಸ್ಟಾಗ್ರಾಂನಲ್ಲಿ (Instagram) ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿರುವಂತೆ 12ಕ್ಕೂ ಹೆಚ್ಚಿನ ಯುವಕರು ತಮ್ಮ ಕೈಯಲ್ಲಿ ಅಮೆರಿಕ ನಿರ್ಮಿತ ಎಂ-ಸಿರೀಸ್ ರೈಫಲ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ಮೈದಾನದಲ್ಲಿ ಫುಟ್ಬಾಲ್ ಒದಿಯುತ್ತಿರುವ ದೃಶ್ಯ ಇದರಲ್ಲಿದೆ. ಈ ಗನ್‌ಗಳ ಬ್ಯಾರೆಲ್ ಗಳ ಸುತ್ತ ಕೆಂಪು ರಿಬ್ಬನ್ ಸುತ್ತಿರುವುದನ್ನೂ ಕಾಣಬಹುದಾಗಿದೆ.
ಇದನ್ನೂ ಓದಿ: Viral Video: ರೀಲ್‍ಗಾಗಿ 30 ಅಡಿ ಎತ್ತರದ ಹೋರ್ಡಿಂಗ್ ಹತ್ತಿದ ಯುವಕ; ಮುಂದೇನಾಯ್ತು? ವಿಡಿಯೊ ನೋಡಿ
ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಪೋಸ್ಟರ್ ನಲ್ಲಿರುವ ಪ್ರಕಾರ (ಎಲ್) ನೊಹ್ ಜಂಗ್ ಕಿಪ್ಗೆನ್ ಸ್ಮಾರಕ ಮೈದಾನ ಎಂದು ಕಾಣಿಸುತ್ತಿದ್ದು, ಇದು ಮಣಿಪುರದ ರಾಜಧಾನಿ ಇಂಫಾಲ್ ನಿಂದ 30 ಕಿ,ಮೀ ದೂರದಲ್ಲಿರುವ ಕಾಂಗ್ ಪೊಕ್ಪಿ ಜಿಲ್ಲೆಯಲ್ಲಿದೆ. ಈ ಯುವಕರು ತೊಟ್ಟಿರುವ ಜೆರ್ಸಿಯಲ್ಲಿ ‘ಸನಖಾಂಗ್’ ಎಮದು ಬರೆಯಲಾಗಿದೆ, ಮತ್ತು ಅವರಲ್ಲಿ ಒಬ್ಬ ‘ಗಿನ್ನ ಕಿಗ್ ಪೆನ್’ ಎಂದು ಬರೆದಿರುವ ಎಕೆ ರೈಫಲನ್ನು ಹಿಡಿದುಕೊಂಡಿದ್ದಾನೆ. ಈ ಆಟಗಾರನ ಜೆರ್ಸಿ ಸಂಖ್ಯೆ 15 ಆಗಿದೆ.

This video of a football tournament in Manipur has gone viral on social media. What is deeply disturbing is the open display of sophisticated weapons by the so called footballers. Or is it a football tournament of Kuki Militants?

We urge the authorities to investigate this… pic.twitter.com/3IC5uY9BkH
— Meitei Heritage Society (@meiteiheritage) February 6, 2025

ಈ ಇವೆಂಟ್ ಪೋಸ್ಟರ್‌ನಲ್ಲಿರುವಂತೆ ಈ ಫುಟ್ಬಾಲ್ ಪಂದ್ಯಾಟ ಜ.20ರಂದು ಪ್ರಾರಂಭಗೊಂಡಿದೆ. ನಂಪಿ ರೋಮಿಯೋ ಹನ್ಸಾಂಗ್ ಎಂಬ ಸೋಷಿಯಲ್ ಮೀಡಿಯಾ ಇನ್ ಫ್ಲ್ಯುವೆನ್ಸರ್ ‘ಕುಕಿ ಲ್ಯಾಂಡ್’ ಎಂದು ವಾಟರ್ ಮಾರ್ಕ್ ಇದ್ದ ವಿಡಿಯೋವನ್ನು ಬಳಿಕ ಡಿಲೀಟ್ ಮಾಡಿದ್ದಾರೆ. ಹ್ಯಾನ್ಸಂಗ್ ಅವರಿಗೆ 11 ಸಾವಿರ ಫಾಲೋವರ್ಸ್ ಇದ್ದಾರೆ. ಇದನ್ನು ಡಿಲೀಟ್ ಮಾಡಿದ ಬಳಿಕ ಈತ ಫುಟ್ಬಾಲ್ ಪಂದ್ಯದ ವಿಡಿಯೊವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಯುವಕರು ರೈಫಲ್ ಹಿಡಿದುಕೊಂಡಿರುವ ದೃಶ್ಯಗಳಿಲ್ಲ.
ಇನ್ನು ಹನ್ಸಂಗ್‌ನ ಯೂಟ್ಯೂಬ್ ಚಾನೆಲ್‌ಗೆ 1 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ ಇದ್ದು, ಇದರಲ್ಲಿ ಆರು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಆ ಯುವಕರು ಗನ್ ಹಿಡಿದುಕೊಂಡಿರುವ ದೃಶ್ಯಗಳಿವೆ. ಆದರೆ ಆ ಬಳಿಕ ಈ ಗನ್ ಧಾರಿ ವಿಡಿಯೋಗಳನ್ನು ಡಿಲೀಟ್ ಮಾಡಿ ರಿ ಅಪ್ಲೋಡ್ ಮಾಡಲಾಗಿದೆ. ಆದರೆ, ಇದರ ಒರಿಜಿನಲ್ ವಿಡಿಯೋವನ್ನು ಸುದ್ದಿ ವಾಹಿನಿ ವೆಬ್ ಸೈಟ್ ಪೋಸ್ಟ್ ಮಾಡಿದ್ದು, ಇದರ ಮೂಲ ವಿಡಿಯೋ ತನ್ನಲ್ಲಿದೆ ಎಂದು ವೆಬ್ ಸೈಟ್ ಹೇಳಿಕೊಂಡಿದೆ.
ಯುವಕರು ಗನ್ ಹಿಡಿದುಕೊಂಡಿರುವ ದೃಶ್ಯಗಳನ್ನು ಡಿಲೀಟ್ ಮಾಡಿದ ಬಳಿಕ ಇರುವ ವಿಡಿಯೋದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ದೃಶ್ಯಗಳು ಮತ್ತು ಫುಟ್ಬಾಲ್ ಪಂದ್ಯಾಟದ ದೃಶ್ಯಗಳಿವೆ. ವಿಡಿಯೊದ ಕೊನೆಯಲ್ಲಿ ಶಸ್ತ್ರಧಾರಿ ಯುವಕರು ನರ್ತಿಸುತ್ತಿರುವುದನ್ನು ಕಾಣಬಹುದಾಗಿದೆ. ಇವರ ಹೆಲ್ಮೆಟ್ ಗಳಲ್ಲಿ ಮತ್ತು ತೊಳು ಬಂಧಿಯಲ್ಲಿ ಕುಕಿ ನ್ಯಾಷನಲ್ ಫ್ರಂಟ್ (ಪಿ) ಅಥವಾ ಕೆ.ಎನ್.ಎಫ್.-ಪಿ ಉಗ್ರಗಾಮಿಗಳು ಸಾಮಾನ್ಯವಾಗಿ ಬಳಸುವ ಕೆಂಪು ಲೋಗೋವನ್ನು ಹಾಕಿಕೊಳ್ಳಲಾಗಿದೆ.
ಈ ವಿಡಿಯೊಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯನ್ನು ನಡೆಸುವಂತೆ ಮೈತಿ ಸಮುದಾಯದ ಸಂಘಟನೆಯೊಂದು ಆಗ್ರಹಿಸಿದೆ. ಸದ್ಯಕ್ಕೆ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಫುಟ್ಬಾಲ್ ಆಟಗಾರರೆಂದು ಕರೆಸಿಕೊಳ್ಳುವ ಯುವಕರು ಮುಕ್ತವಾಗಿ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ನರ್ತಿಸುತ್ತಿರುವುದು ಎಲ್ಲರಲ್ಲೂ ಭೀತಿಯ ವಾತಾವರಣವನ್ನು ಹುಟ್ಟುಹಾಕಿದೆ. ಈ ಪಂದ್ಯಾಟವನ್ನು ಕುಕಿ ಉಗ್ರಗಾಮಿಗಳು ಆಯೋಜಿಸಿದ್ದರೇ? ಈ ಘಟನೆಯ ಬಗ್ಗೆ ಸೂಕ್ತ ತನಿಖೆಗೆ ನಾವು ಆಗ್ರಹಿಸುತ್ತಿದ್ದೇವೆ ಎಂದು ಮೈಟಿ ಹೆರಿಟೇಜ್ ಸೊಸೈಟಿ ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.