Viral Video: ಮಗು ಉಸಿರಾಡೋಕೆ ಒದ್ದಾಡ್ತಿದ್ರೆ ಪಾಪಿ ತಾಯಿ ಮಾಡಿದ್ದೇನು ಗೊತ್ತಾ? ಇಲ್ಲಿದೆ ಶಾಕಿಂಗ್ ವಿಡಿಯೊ
ಇನ್‌ಸ್ಟಾಗ್ರಾಂ ರೀಲ್ ಕ್ರಿಯೇಟರ್ ಸಲೋನಿ ಅಗರ್ವಾಲ್ ತನ್ನ ಕಿರಿಯ ಮಗ ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡುವುದನ್ನು ಅಪಹಾಸ್ಯ ಮಾಡಿ ವಿಡಿಯೊ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ವೈರಲ್(Viral News) ಆಗಿದ್ದು, ಈ ಬಗ್ಗೆ ಮನಶಾಸ್ತ್ರಜ್ಞರು, ಪೋಷಕರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನವದೆಹಲಿ: ತಾಯಿಯಾದವಳು ತನ್ನ ಮಕ್ಕಳಿಗೆ ಸಣ್ಣ ಮಟ್ಟಿಗೆ ಆರೋಗ್ಯ ಸಮಸ್ಯೆಯಾದರೆ ಸಾಕು ಎದ್ದುಬಿದ್ದು ಮಕ್ಕಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಾಳೆ. ಅಂತಹದರಲ್ಲಿ ಇಲ್ಲೊಬ್ಬ ತಾಯಿ ಮಗು ತನ್ನ ಆರೋಗ್ಯ ಸಮಸ್ಯೆ ಬಗ್ಗೆ ತಾಯಿಯ ಬಳಿ ಹೇಳಿದರೆ ಆಕೆ ಅದನ್ನು ಅಪಹಾಸ್ಯ ಮಾಡಿ ವಿಡಿಯೊ ಶೂಟ್ ಮಾಡಿದ್ದಾಳೆ. 556 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಇನ್‌ಸ್ಟಾಗ್ರಾಂ ರೀಲ್ ಕ್ರಿಯೇಟರ್ ಸಲೋನಿ ಅಗರ್ವಾಲ್ ತನ್ನ ಕಿರಿಯ ಮಗ ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡುವುದನ್ನು ರೆಕಾರ್ಡ್ ಮಾಡಿದ್ದಾಳೆ. ಮತ್ತು ಅದನ್ನು ಇತ್ತೀಚೆಗೆ ಪೋಸ್ಟ್ ಮಾಡಿದ್ದಾಳೆ. ಇದು ವೈರಲ್(Viral Video) ಆಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅವಳು ಮಗುವಿನ ಸಂಕಟವನ್ನು ಕೇವಲ "ನೌಟಂಕಿ (ನಾಟಕ)" ಎಂದು ತಳ್ಳಿಹಾಕಿದ್ದಾಳೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಚಿಕ್ಕ ಹುಡುಗನೊಬ್ಬ ತನ್ನ ಹೋಂವರ್ಕ್ ಮಾಡುವಾಗ ಅಳುತ್ತಿರುವುದು ಸೆರೆಯಾಗಿದೆ. ಅವನು ತನ್ನ ತಾಯಿಯ ಬಳಿ ತನಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾನೆ. ಆದರೆ ಅವಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅವನನ್ನು ಅಪಹಾಸ್ಯ ಮಾಡಲು ಶುರುಮಾಡಿದ್ದಾಳೆ.ಕಾಳಜಿಯನ್ನು ತೋರಿಸುವ ಬದಲು, ಅವನು ಹೋಂವರ್ಕ್ ತಪ್ಪಿಸಲು ಹುಷಾರಿಲ್ಲದವನಂತೆ ನಟಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಹೊರಗಡೆ ಆಡುವಾಗ ಅವನಿಗೆ ಯಾವುದೇ ತೊಂದರೆ ಇಲ್ಲ. ಅದೇ ಓದುವ ಸಮಯದಲ್ಲಿ ಮಾತ್ರ ದೂರು ನೀಡುತ್ತಾನೆ ಎಂದು ಅವಳು ಹೇಳಿದ್ದಾಳೆ. ಆಟವಾಡುವಾಗಲೂ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಮಗು ನಂತರ ಸ್ಪಷ್ಟಪಡಿಸಿದರೂ, ಸಲೋನಿ ಅದನ್ನು ನಾಟಕ ಎಂದು ಹೇಳಿದ್ದಾಳೆ.
ಮಗುವಿನ ವಿಡಿಯೊ ಇಲ್ಲಿದೆ ನೋಡಿ...
ಈ ರೀಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತು ಈ ಬಗ್ಗೆ ಮನಶಾಸ್ತ್ರಜ್ಞರು, ಪೋಷಕರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನಶಾಸ್ತ್ರಜ್ಞೆ ರೂಪಾಲಿ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, "ನಾನು ಪ್ರತಿದಿನ ಮಕ್ಕಳೊಂದಿಗೆ ಸಂವಹನ ನಡೆಸುತ್ತೇನೆ. ಕೆಲವರು ಸಮಸ್ಯೆ ಇರುವಂತೆ ನಟಿಸಬಹುದು... ಆದರೆ ಈ ಮಗು ಅದನ್ನು ನಕಲು ಮಾಡುತ್ತಿಲ್ಲ. ತನ್ನ ದುಃಖವನ್ನು ವ್ಯಕ್ತಪಡಿಸುವ ಅವನು ಹೇಳುವುದನ್ನು ಕೇಳಿದರೆ ಅವನು ನಿಜವಾದ ಸಮಸ್ಯೆಯನ್ನು ಅನುಭವಿಸುತ್ತಿದ್ದಾನೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಇದನ್ನು ಎಂದಿಗೂ ನಿರ್ಲಕ್ಷಿಸಬಾರದು” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸಾವಿನ ಜೊತೆ ಸೆಣಸಾಟ ಅಂದ್ರೆ ಇದಪ್ಪಾ! ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ಇನ್ನೊಬ್ಬರು , "ಓಹ್ ದೇವರೇ, ಇದನ್ನು ನೋಡಿದ ನಂತರ ನನಗೆ ಅಳುಬಂದಿದೆ. ಇಬ್ಬರು ಹುಡುಗರ ತಾಯಿಯಾಗಿ, ನನಗೆ ಈ ಬಗ್ಗೆ ಬೇಸರವಾಗಿದೆ. ಅವನು ಭಯಭೀತನಾಗಿದ್ದಾನೆ. ಅವನು ಹೇಳುವ ರೀತಿ ನಿಜವಾಗಿಯೂ ಹೃದಯ ವಿದ್ರಾವಕವಾಗಿತ್ತು” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, "ಇದು ನೌಟಾಂಕಿ ಅಲ್ಲ. ಅವನಿಗೆ ಆತಂಕವಿದೆ."ಎಂದಿದ್ದಾರೆ. ಇನ್ನೊಬ್ಬರು "ನಿಮಗೆ ನಾಚಿಕೆಯಾಗಬೇಕು. ಅವನನ್ನು ಅಪಹಾಸ್ಯ ಮಾಡುವ ಬದಲು, ನೀವು ಕೇಳಬೇಕಿತ್ತು. ಇಲ್ಲವಾದರೆ ನೀವು ಮುಂದೆ ಈ ಬಗ್ಗೆ ಪಶ್ಚಾತಾಪ ಪಡಬೇಕಾಗಬಹುದು” ಎಂದಿದ್ದಾರೆ.