Viral Video: ತೆರೆದ ಮ್ಯಾನ್‌ಹೋಲ್‌ನಿಂದ ಎದ್ದು ಬಂದ ವ್ಯಕ್ತಿ- ಈ ಶಾಕಿಂಗ್ ವಿಡಿಯೊ ಇಲ್ಲಿದೆ
ಭಾರೀ ಮಳೆಯದಿಂದ ನೀರು ತುಂಬಿದ್ದ ರಸ್ತೆಯಲ್ಲಿ ತೆರೆದ ಮ್ಯಾನ್‌ಹೋಲ್‌ನಿಂದ ಶರ್ಟ್ ಧರಿಸದ ವ್ಯಕ್ತಿಯೊಬ್ಬ ಹೊರಬಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಚಿತ್ರ ದೃಶ್ಯ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.


ನವದೆಹಲಿ: ದೇಶದಾದ್ಯಂತ ಭಾರಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿಯುತ್ತಿದೆ.ಹಾಗಾಗಿ, ಅಲ್ಲಲ್ಲಿ ಮ್ಯಾನ್‍ಹೋಲ್‍ಗಳನ್ನು ತೆರೆದಿರುತ್ತಾರೆ. ಇಂತಹ ಮ್ಯಾನ್‍ಹೋಲ್‍ಗಳಲ್ಲಿ ಜನರು ಬಿದ್ದ ಘಟನೆ ಈ ಹಿಂದೆ ಹಲವು ವರದಿಯಾಗಿತ್ತು. ಇದೀಗ ಅಂತಹದೊಂದು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರೀ ಮಳೆಯ ಸಮಯದಲ್ಲಿ ನೀರು ತುಂಬಿದ್ದ ತೆರೆದ ಮ್ಯಾನ್‌ಹೋಲ್‌ನಿಂದ ಶರ್ಟ್ ಧರಿಸದ ವ್ಯಕ್ತಿಯೊಬ್ಬ ಹೊರಬಂದು ತನ್ನ ಎದೆಯನ್ನು ಗೊರಿಲ್ಲಾದಂತೆ ಬಡಿದುಕೊಂಡಿದ್ದಾನೆ. ಈ ವಿಚಿತ್ರ ದೃಶ್ಯ ನೋಡಿ(Viral Video) ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಆದ ಈ ವಿಡಿಯೊದಲ್ಲಿ, ನೀರು ತುಂಬಿದ ರಸ್ತೆಯಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಹಲವಾರು ಪಾದಚಾರಿಗಳು ಹತ್ತಿರದ ಅಂಗಡಿ ಮುಂಗಟ್ಟುಗಳ ಹತ್ತಿರ ನಿಂತು ಮಳೆ ಕಡಿಮೆಯಾಗುವುದಕ್ಕಾಗಿ ಕಾಯುತ್ತಿದ್ದರು. ಇದ್ದಕ್ಕಿದ್ದಂತೆ, ಒಬ್ಬ ವ್ಯಕ್ತಿಯು ತೆರೆದ ಮ್ಯಾನ್‌ಹೋಲ್‌ನಿಂದ ಹೊರಬಂದಿದ್ದಾನೆ. ಬಂದವನು ಎದ್ದು ನಿಂತು ಗೊರಿಲ್ಲಾದಂತೆ ತನ್ನ ಎದೆಯನ್ನು ಬಡಿದುಕೊಳ್ಳಲು ಶುರುಮಾಡಿದ್ದಾನಂತೆ. ಸುತ್ತಮುತ್ತಲಿನ ಜನಸಮೂಹವು ಅವನನ್ನು ನೋಡಿ ಶಾಕ್ ಆಗಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಈಗಾಗಲೇ 5.8 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಈಗ ವೈರಲ್ ಆಗಿರುವ ಈ ವಿಡಿಯೊ 77,000 ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 300 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು, “ಅಕ್ವಾಮನ್ ಅಲ್ಟ್ರಾ ಪ್ರೊ ಮ್ಯಾಕ್ಸ್” ಎಂದು ಹೇಳಿದ್ದಾರೆ. "ಅವನು ಕುಡಿದಿದ್ದನೇ?" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದನ್ನು ನೋಡಲು ಭಯವಾಗುತ್ತದೆ" ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರನ್ನು ಐಜ್ವಾಲ್‌ನೊಂದಿಗೆ ಹೋಲಿಸಿದ ವಿದೇಶಿ ಕಂಟೆಂಟ್ ಕ್ರಿಯೇಟರ್; ಕಾರಣವೇನು?
ಸೋಶಿಯಲ್ ಮೀಡಿಯಾದ ಕೆಲವು ನೆಟ್ಟಿಗರು ಇದನ್ನು ನೋಡಿ ತಮಾಷೆ ಮಾಡಿದರೆ, ಇನ್ನು ಕೆಲವರು ತೆರೆದ ಮ್ಯಾನ್‌ಹೋಲ್‌ಗಳ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.