Viral Video: ರೆಸ್ಟೋರೆಂಟ್ನಲ್ಲಿ ಕುಳಿತಿದ್ದ ಅಣ್ಣ-ತಂಗಿ ಮೇಲೆ ಪೊಲೀಸ್ ದರ್ಪ; ಇಲ್ಲಿದೆ ವಿಡಿಯೊ
Police officer misbehaves with siblings: ಬಿಹಾರದ ರೆಸ್ಟೋರೆಂಟ್‌ವೊಂದರಲ್ಲಿ ಕುಳಿತಿದ್ದ ಸಹೋದರ ಮತ್ತು ಸಹೋದರಿಯೊಂದಿಗೆ ಪೊಲೀಸ್ ಅಧಿಕಾರಿ ಅನುಚಿತವಾಗಿ ವರ್ತಿಸಿದ್ದಾರೆ. ಇದರ ಸಿಸಿಟಿವಿ ವಿಡಿಯೊ ವೈರಲ್ ಆದ ನಂತರ ಬರ್ಸೋಯ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅನ್ನು ಅಮಾನತು ಮಾಡಲಾಗಿದೆ.
-
Priyanka P
Oct 29, 2025 3:25 PM
ಪಟನಾ: ರೆಸ್ಟೋರೆಂಟ್‌ನಲ್ಲಿ (restaurant) ಸಹೋದರ ಮತ್ತು ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಸಿಸಿಟಿವಿ ವಿಡಿಯೊ ವೈರಲ್ (Viral Video) ಆದ ನಂತರ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಒಡಹುಟ್ಟಿದವರ ಜೊತೆ ಬರ್ಸೋಯ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ರಾಮ್ ಚಂದ್ರ ಮಂಡಲ್ ಅವರು ಜಗಳವಾಡಿದ್ದಾರೆ. ಘಟನೆಯ ಅಧಿಕೃತ ತನಿಖೆಯ ನಂತರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಕತಿಹಾರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶಿಖರ್ ಚೌಧರಿ ಅವರು ಮಂಡಲ್ ಅವರ ಅಮಾನತುಗೊಳಿಸುವಿಕೆಯನ್ನು ದೃಢಪಡಿಸಿದರು ಮತ್ತು ಹೆಚ್ಚಿನ ತನಿಖೆಗೆ ಆದೇಶಿಸಿದರು. ಅಕ್ಟೋಬರ್ 28 ರಂದು ಬಿಡುಗಡೆಯಾದ ಅಮಾನತು ಆದೇಶವನ್ನು ಕತಿಹಾರ್ ಪೊಲೀಸರ ಅಧಿಕೃತ ಎಕ್ಸ್ ಖಾತೆಯಲ್ಲಿ ಪತ್ರಿಕಾ ಪ್ರಕಟಣೆಯ ಮೂಲಕ ಹಂಚಿಕೊಳ್ಳಲಾಗಿದೆ. ಕತಿಹಾರ್ ಜಿಲ್ಲೆಯ ಬರ್ಸೋಯ್‌ನಲ್ಲಿರುವ ಬಿಆರ್ -11 ರೆಸ್ಟೋರೆಂಟ್‌ನಲ್ಲಿ, ಅಕ್ಟೋಬರ್ 24 ರಂದು ಈ ಘಟನೆ ನಡೆದಿತ್ತು. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ, ಮಂಡಲ್ ಅವರು ನಿಯಮಿತ ಚುನಾವಣಾ ಪರಿಶೀಲನೆ ಸಲುವಾಗಿ ರೆಸ್ಟೋರೆಂಟ್‌ಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
In India, police officers should first be trained on how to behave & communicate with common people.
— Ashwini Shrivastava (@AshwiniSahaya) October 27, 2025
This incident took place in Katihar dist of Bihar, where a sibling pair had gone to a café for dinner.
This officer should be terminated immediately to set an example.… pic.twitter.com/FPydk8oocf
ನಾಲ್ಕು ನಿಮಿಷಗಳಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಮಂಡಲ್ ಒಬ್ಬ ಪುರುಷ ಅಧಿಕಾರಿ ಮತ್ತು ಮೂವರು ಮಹಿಳಾ ಕಾನ್‌ಸ್ಟೇಬಲ್‌ಗಳೊಂದಿಗೆ ರೆಸ್ಟೋರೆಂಟ್‌ಗೆ ಪ್ರವೇಶಿಸುವುದನ್ನು ತೋರಿಸಲಾಗಿದೆ. ಈ ವೇಳೆ ಅವರು ಜೊತೆಗೆ ಕುಳಿತಿದ್ದ ಒಬ್ಬ ಯುವಕ ಮತ್ತು ಯುವತಿಯ ಬಳಿಗೆ ಹೋಗಿ ಆಕೆಯ ಜೊತೆ ಕುಳಿತಿರುವ ಬಗ್ಗೆ ಆ ವ್ಯಕ್ತಿಯನ್ನು ಆಕ್ರಮಣಕಾರಿಯಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Viral Video: ಗಡದ್ದಾಗಿ ತಿಂದು ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ಪ್ರವಾಸಿಗರು; ಬೆನ್ನಟ್ಟಿದ ಸಿಬ್ಬಂದಿ
ಆ ವ್ಯಕ್ತಿ ಶಾಂತವಾಗಿ ಆಕೆ ತನ್ನ ಸಹೋದರಿ ಎಂದು ವಿವರಿಸಿದರೂ, SHO ತನ್ನ ಧ್ವನಿಯನ್ನು ಹೆಚ್ಚಿಸಿ ಜಗಳವಾಡಿದ್ದಾರೆ. ಯುವಕನ ಮಾತಿಗೆ ಕಿವಿಗೊಡದ ಅವರು ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ. ಈ ವೇಶೆ ಜಗಳ ಹೆಚ್ಚಾಗಿದೆ. ಇದರಿಂದ ರೆಸ್ಟೋರೆಂಟ್‍ನಲ್ಲಿದ್ದ ಇತರೆ ಗ್ರಾಹಕರು ತೊಂದರೆ ಅನುಭವಿಸುವಂತಾಯಿತು. ಆದರೆ, ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದನು.
ಬರ್ಸೈ ರಾಸ್ ಚೌಕ್‌ನಲ್ಲಿರುವ ಬಿಆರ್ -11 ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಒಡಹುಟ್ಟಿದವರೊಂದಿಗೆ ಬರ್ಸೈ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿರುವ ಅಧಿಕಾರಿ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಈ ಪ್ರಕರಣದ ತನಿಖೆಯನ್ನು ಕತಿಹಾರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಚೇರಿ) ನಡೆಸಿದ್ದಾರೆ ಎಂದು ಕತಿಹಾರ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಬಾರ್ಸೋಯ್ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದವರು ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಅಣ್ಣ-ತಂಗಿ ಜೊತೆ ಅಸಭ್ಯ ಭಾಷೆ ಬಳಸಿದ್ದರು ಎಂದು ಕಂಡುಬಂದಿದೆ. ಇದು ಅವರ ಕರ್ತವ್ಯ ನಿರ್ಲಕ್ಷ್ಯ ಮತ್ತು ಅನಿಯಂತ್ರಿತ ನಡವಳಿಕೆಯನ್ನು ತೋರಿಸುತ್ತದೆ. ಹಾಗೆಯೇ ಇದು ಪೊಲೀಸರ ವರ್ಚಸ್ಸಿಗೆ ಕಳಂಕ ತರುತ್ತಿದೆ ಎಂದು ಅದು ಹೇಳಿದೆ. ಈ ವಿಚಾರದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.