Viral Video: ಮಹಾ ಕುಂಭಮೇಳದಲ್ಲಿ ಕಿಡಿಗೇಡಿಗೆ ಕಪಾಳಮೋಕ್ಷ ಮಾಡಿದ ಸಾಧು; ಕಾರಣ ಏನು?
ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿದ್ದ ಸಾಧುವೊಬ್ಬರು ಯುವಕನೊರ್ವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಧು ಯುವಕನಿಗೆ ಹೊಡೆಯಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
![ಸಾಧುವನ್ನು ನಕಲು ಮಾಡಲು ಹೋಗಿ ಕೆನ್ನೆ ಊದಿಸಿಕೊಂಡ ಯುವಕ!](https://cdn-vishwavani-prod.hindverse.com/media/original_images/sadhu_viral_video.jpg)
sadhu viral video
![Profile](https://vishwavani.news/static/img/user.png)
ಲಖನೌ: ಮಹಾ ಕುಂಭಮೇಳದಲ್ಲಿ ಯೂಟ್ಯೂಬರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ಸಾಧುಗಳ ವಿಡಿಯೊವನ್ನು ಸೆರೆ ಹಿಡಿಯುತ್ತಾರೆ. ಇದರಿಂದ ಅನೇಕ ಸಾಧುಗಳು ಕೋಪಗೊಂಡು ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆಗಳು ನಡೆದಿವೆ. ಅದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅದೇ ರೀತಿ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇತ್ತೀಚಿಗೆ ತನ್ನ ಒಂದು ಕೈಯನ್ನು ಮೇಲೆತ್ತಿಕೊಂಡು ಹೋಗುತ್ತಿದ್ದ ಸಾಧುವನ್ನು ಪಕ್ಕದಲ್ಲಿದ್ದ ಯುವಕನೊಬ್ಬ ನಕಲು ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಾಧು ಆ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
"ಬ್ರೋ ಬಾಬಾನನ್ನು ನಕಲು ಮಾಡಲು ಪ್ರಯತ್ನಿಸಿದನು ಮತ್ತು ಅದಕ್ಕೆ ಸರಿಯಾದ ಶಿಕ್ಷೆಯನ್ನೂ ಪಡೆದನು" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೊದಲ್ಲಿ ಸಾಧುವೊಬ್ಬರು ಒಂದು ಕೈಯನ್ನು ಮೇಲೆತ್ತಿ ನಡೆದುಕೊಂಡು ಹೋಗುತ್ತಿರುವುದು ಕಂಎಉ ಬಂದಿದೆ. ಅವರ ಪಕ್ಕದಲ್ಲೇ ನಡೆಯುತ್ತಿದ್ದ ಯುವಕನೊಬ್ಬ ಸಾಧುವಿನ ಹಾಗೇ ಕೈ ಮೇಲೆತ್ತಿಕೊಂಡು ನಕಲು ಮಾಡಿದ್ದಾನೆ. ಇದನ್ನು ಕಂಡ ಸಾಧು ತಾಳ್ಮೆ ಕಳೆದುಕೊಂಡು ಆ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
FAFO (Bro tried to Copy baba and got a well deserved slap) pic.twitter.com/90o7tL79r2
— Ghar Ke Kalesh (@gharkekalesh) January 29, 2025
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರು ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಸಾಧುವಿನ ಕ್ರಮವನ್ನು ಕೆಲವರು ಬೆಂಬಲಿಸಿದರೆ, ಇತರರು ಘಟನೆಯನ್ನು ಪ್ರಶ್ನಿಸಿದ್ದಾರೆ.
ಒಬ್ಬ ನೆಟ್ಟಿಗರು ಪೋಸ್ಟ್ ಮಾಡಿ, "ಥಪ್ಪಡ್ ಕ್ಯೂ ಮಾರಾ?" ಎಂದು ಬರೆದಿದ್ದಾರೆ. ಇನ್ನೊಬ್ಬರು, "ಬಾಬಾ ಸರಿಯಾದ ಕೆಲಸ ಮಾಡಿದ್ದಾರೆ" ಎಂದು ಹೇಳಿದ್ದಾರೆ. ಮೂರನೆಯವರು "ಬ್ರೋ ಅವನು ಸರಿಯಾದುದ್ದನ್ನೇ ಪಡೆದಿದ್ದಾನೆ" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh Fire: ಮಹಾ ಕುಂಭಮೇಳದಲ್ಲಿ ಬೆಂಕಿ ಅವಘಡ; ಸಾಧುಗಳಿಗೆ ಸುಟ್ಟ ಗಾಯ
ಹಿಂದೂ ಧರ್ಮದ ಪ್ರಕಾರ, ಕುಂಭಮೇಳವನ್ನು 12 ವರ್ಷಗಳ ಅವಧಿಯಲ್ಲಿ 4 ಬಾರಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಭಾರತದ ನಾಲ್ಕು ಸ್ಥಳಗಳಾದ ಉಜ್ಜಯಿನಿ, ಹರಿದ್ವಾರ, ನಾಸಿಕ್ ಮತ್ತು ಪ್ರಯಾಗ್‍ರಾಜ್‍ನಲ್ಲಿ ಆಚರಿಸಲಾಗುತ್ತದೆ . ಈ ವರ್ಷ ಪ್ರಯಾಗ್‍ರಾಜ್‍ನಲ್ಲಿ ಮೇಳ ನಡೆಯುತ್ತಿದೆ. ಅಲ್ಲಿ ಜನರು ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿಯ ಸಂಗಮವಾದ ತ್ರಿವೇಣಿಸಂಗಮದಲ್ಲಿ ಸ್ನಾನ ಮಾಡಲು ಭೇಟಿ ನೀಡುತ್ತಿದ್ದಾರೆ.