Viral Video: ಕೋಣೆಯಲ್ಲಿ ಪಟಾಕಿ ಸಿಡಿಸಿ ಫುಟ್ಬಾಲ್ ಆಡಿದ ಹುಡುಗರು; ಮುಂದೇನಾಯ್ತು ವಿಡಿಯೊ ನೋಡಿ
ಹುಡುಗರ ಗುಂಪೊಂದು ಕೋಣೆಯೊಳಗೆ ಪಟಾಕಿಗಳನ್ನು ಸಿಡಿಸಿ ನಂತರ ಸುಡುವ ಪಟಾಕಿಗಳ ನಡುವೆ ಫುಟ್ಬಾಲ್ ಆಡಿದ್ದಾರೆ. ಹುಡುಗರ ಈ ಅಪಾಯಕಾರಿ ಆಟವನ್ನು ಆಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಇದನ್ನು ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ.


ನವದೆಹಲಿ: ಇತ್ತೀಚೆಗೆ ಹುಡುಗರ ಗುಂಪೊಂದು ಅಪಾಯಕಾರಿ ಆಟವನ್ನು ಆಡಿದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral video) ಆಗಿದೆ. ಇದರಲ್ಲಿ ಹುಡುಗರು ಕೋಣೆಯೊಳಗೆ ಪಟಾಕಿಗಳನ್ನು ಸಿಡಿಸಿ ನಂತರ ಸುಡುವ ಪಟಾಕಿಗಳ ನಡುವೆ ಫುಟ್ಬಾಲ್ ಆಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಹುಡುಗರು ಒಟ್ಟಿಗೆ ಪಟಾಕಿಗಳನ್ನು ಸಿಡಿಸಿದ್ದಾರೆ. ಮತ್ತು ಅವರಲ್ಲಿ ಒಬ್ಬನು ಪಟಾಕಿಗಳ ಕಡೆಗೆ ಫುಟ್ಬಾಲ್ ಅನ್ನು ಒದ್ದಿದ್ದಾನಂತೆ. ಆ ವೇಳೆ ಚೆಂಡಿಗೆ ಬೆಂಕಿ ಹೊತ್ತಿಕೊಂಡಿದೆ. ಆದರೂ ಹುಡುಗರು ಅದನ್ನು ಲೆಕ್ಕಿಸದೆ ಆಟ ಮುಂದುವರಿಸಿದ್ದಾರಂತೆ.
ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಗಿನಿಂದ ಇದು ಎಲ್ಲರ ಗಮನಸೆಳೆದು ವೈರಲ್ ಆಗಿದೆ. ಇದು ಈಗಾಗಲೇ 3 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಹಲವರು ಕಾಮೆಂಟ್ ಮಾಡಿ ಹುಡುಗರ ಅಜಾಗರೂಕ ವರ್ತನೆಯನ್ನು ಖಂಡಿಸಿದ್ದಾರೆ. ಒಬ್ಬರು ಇದನ್ನು "ಸಾವಿನ ಆಟ" ಎಂದು ಉಲ್ಲೇಖಿಸಿದರೆ, ಇನ್ನೊಬ್ಬರು ಇದನ್ನು "ನಿಜವಾದ ದೀಪಾವಳಿ" ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬರು ಈ ದೃಶ್ಯವನ್ನು ನೋಡಿ "ರಿಯಲ್ ಸಿನೆಮಾ” ಎಂದು ಹೇಳಿದ್ದಾರೆ. ಮತ್ತು ಕೆಲವರು ಈ ವಿಡಿಯೊವನ್ನು ನೋಡುವುದು "ನರಕದ ಒಂದು ನೋಟ" ಎಂದು ಟೀಕಿಸಿದ್ದಾರೆ.
ವೈಲರಾಗುತ್ತಿರುವ ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿಯನ್ನೂ ಓದಿ:Viral Video: ಡಿಜೆ ಹಾಡನ್ನು ಕೇಳಿ ಮದುವೆ ರದ್ದು ಮಾಡಿದ ವರ; ಅಷ್ಟಕ್ಕೂ ಆ ಹಾಡು ಯಾವುದು?
ಹುಡುಗರು ಇಂತಹ ಅಪಾಯಕಾರಿ ಕೃತ್ಯದಲ್ಲಿ ತೊಡಗಿರುವುದು ಇದೇ ಮೊದಲಲ್ಲ. ಈ ಹಿಂದೆ ಬೆಂಗಳೂರಿನ ಇಬ್ಬರು ಯುವಕರು ಜನನಿಬಿಡ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮಡಿವಾಳ ಸಂಚಾರ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರು.ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಹ್ಯಾಂಡಲ್ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಇಬ್ಬರು ಯುವಕರು ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ ಮಾಡುವುದನ್ನು ಸೆರೆ ಹಿಡಿಯಲಾಗಿತ್ತು. ಇದನ್ನು ನೋಡಿದ ಅಧಿಕಾರಿಗಳು ಅಪರಾಧಿಗಳನ್ನು ಗುರುತಿಸಿ ಬಂಧಿಸಿದ್ದರು.
ವಿಡಿಯೊದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಲ್ಲಿ ಒಬ್ಬ ಮುಂಭಾಗದ ಚಕ್ರ ಎತ್ತಿ ವ್ಹೀಲಿಂಗ್ ಮಾಡಿದರೆ, ಹಿಂದೆ ಕುಳಿತವನು ಖುಷಿಯಿಂದ ಕುಣಿದಿದ್ದಾನೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸ್ಟಂಟ್‍ಗಳನ್ನು ಮಾಡುವುದು ಅಪಾಯಕಾರಿ ಮಾತ್ರವಲ್ಲ - ಅದು ಕಾನೂನುಬಾಹಿರವೂ ಹೌದು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ರಾಶ್ ಡ್ರೈವಿಂಗ್‌ಗೆ ಸಂಬಂಧಿಸಿದ್ದಾಗಿದೆ. ಈ ರೀತಿಯ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳಾಗಿವೆ. ಮೂಲಭೂತವಾಗಿ, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಅಜಾಗರೂಕ ಸ್ಟಂಟ್ ಈ ವರ್ಗಕ್ಕೆ ಸೇರುತ್ತದೆ ಎಂದು ಪೊಲೀಸರು ತಿಳಿಸಿದ್ದರು.