ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾರ್‌ ಬಾನೆಟ್ ಮೇಲೆ ವ್ಯಕ್ತಿಯನ್ನು 2 ಕಿ.ಮೀ. ಎಳೆದೊಯ್ದ ಮಹಿಳೆ: ಭಯಾನಕ ವಿಡಿಯೊ ವೈರಲ್‌

Viral Video: ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಮಹಿಳೆಯೊಬ್ಬಳು ವ್ಯಕ್ತಿಯನ್ನು ತನ್ನ ಕಾರ್‌ನ ಬಾನೆಟ್ ಮೇಲೆ ಸುಮಾರು ಎರಡು ಕಿಲೋ ಮೀಟರ್ ದೂರ ಎಳೆದೊಯ್ದಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ಮಹಿಳೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಚಾಲಕನನ್ನು ಕಾರ್‌ ಬಾನೆಟ್ ಮೇಲೆ 2 ಕಿ.ಮೀ. ಎಳೆದೊಯ್ದ ಮಹಿಳೆ

ವ್ಯಕ್ತಿಯನ್ನು 2 ಕಿ.ಮೀ. ಎಳೆದೊಯ್ದ ಮಹಿಳೆ -

Profile
Pushpa Kumari Jan 21, 2026 7:22 PM

ಮುಂಬೈ, ಜ. 21: ಇತ್ತೀಚೆಗೆ ರಸ್ತೆ ಸುರಕ್ಷತೆ ನಿಯಮಗಳನ್ನು ಎಷ್ಟು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಅಪಘಾತ ನಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಉದಾಹರಣೆ ಎನ್ನುವಂತೆ ಮಹಾರಾಷ್ಟ್ರದ ಪುಣೆಯಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಮಹಿಳೆಯೊಬ್ಬಳು ವ್ಯಕ್ತಿಯನ್ನು ತನ್ನ ಕಾರ್‌ನ ಬಾನೆಟ್ ಮೇಲೆ ಸುಮಾರು ಎರಡು ಕಿಲೋಮೀಟರ್ ದೂರ ಎಳೆದೊಯ್ದಿದಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು, ಮಹಿಳೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಜನವರಿ 17ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅಪಘಾತ ನಡೆದ ವ್ಯಕ್ತಿಯನ್ನು ರಾಮ್ ರಾಥೋಡ್ ಎಂದು ಗುರುತಿಸಲಾಗಿದೆ. ಜನವರಿ 17ರಂದು ಮಹಿಳೆ ತನ್ನ ಕಾರ್‌ನಲ್ಲಿ ಯೆರವಡಾದಿಂದ ಶಿವಾಜಿನಗರಕ್ಕೆ ಪ್ರಯಾಣಿಸುತ್ತಿದ್ದಾಗ ಸಂಗಮವಾಡಿ ರಸ್ತೆಯಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿ ಹೊಡೆದ ನಂತರ ಬೈಕ್ ಸವಾರ ಮತ್ತು ಒಂದು ಮಗು ಸೇರಿದಂತೆ ಆತನ ಕುಟುಂಬ ಬೈಕ್‌ನಿಂದ ಕೆಳಗೆ ಬಿದ್ದಿದೆ.

ವಿಡಿಯೊ ನೋಡಿ:



ಘಟನೆ ವಿವರ

ಆಕೆ ತನ್ನ ಕಾರ್‌ ಅನ್ನು ರಿವರ್ಸ್ ಚಲಾಯಿಸಿ ರಾಥೋಡ್‌ನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾಳೆ. ಸ್ವಲ್ಪ ಸಮಯದ ನಂತರ ರಾಥೋಡ್ ಮಹಿಳೆಯ ಕಾರನ್ನು ಬೆನ್ನಟ್ಟಿ ಅದನ್ನು ಅಡ್ಡಗಟ್ಟಿ ತನ್ನ ವಾಹನವನ್ನು ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಬಳಿಕ ಕಾರ್ ಮುಂದೆ ನಿಂತಿದ್ದಾರೆ. ಆಗ ಮಹಿಳೆ ಕಾರನ್ನು ವೇಗವಾಗಿ ಚಲಾಯಿಸಿದ್ದಾಳೆ. ಈ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ರಾಥೋಡ್‌ ಕಾರ್‌ನ ಬಾನೆಟ್ ಮೇಲೆ ಜಿಗಿದು ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ಮಹಿಳೆ ಸುಮಾರು ಎರಡು ಕಿ.ಮೀ. ದೂರ ಕಾರನ್ನು ಗಂಟೆಗೆ ಸುಮಾರು 50-60 ಕಿ.ಮೀ. ವೇಗದಲ್ಲಿ ಓಡಿಸಿದ್ದಾಳೆ. ಈ ವೇಳೆ ರಾಥೋಡ್‌ ಬಾನೆಟ್‌ ಅನ್ನು ಹಿಡಿದಿಟ್ಟುಕೊಂಡಿದ್ದರು. ಇದನ್ನು ನೋಡಿದ ನಂತರ, ಇತರ ಹಲವಾರು ವಾಹನ ಚಾಲಕರು ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸಿದರು ಮತ್ತು ಘಟನೆಯ ದೃಶ್ಯದ ವಿಡಿಯೊ ಮಾಡಿದ್ದಾರೆ. ಅಂತಿಮವಾಗಿ ಮಹಿಳೆ ದಿಢೀರ್ ಬ್ರೇಕ್ ಹಾಕಿದಾಗ ರಾಥೋಡ್ ಕೆಳಗೆ ಬಿದ್ದಿದ್ದಾರೆ. ಅವರ ಕೈ ಮೂಳೆ ಮುರಿದಿದ್ದು ಶಿವಾಜಿನಗರದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ವಿಡಿಯೊ ವೈರಲ್ ಆದ ನಂತರ ಎಚ್ಚೆತ್ತ ಪೊಲೀಸರು, ಮಹಿಳೆಯನ್ನು ಬಂಧಿಸಿದ್ದಾರೆ.

ಈ ವಿಡಿಯೊ ನೋಡಿ ನೆಟ್ಟಿಗರು ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಇಂತಹ ಮಹಿಳೆಗೆ ಸರಿಯಾದ ಶಿಕ್ಷೆ ವಿಧಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಹಿಳೆಗೆ ಸೊಕ್ಕು ಜಾಸ್ತಿ. ಇನ್ನುಮುಂದೆ ವಾಹನ ಚಲಾಯಿಸುವ ಅವಕಾಶವೇ ನೀಡಬಾರದು ಎಂದಿದ್ದಾರೆ.