ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ದೇವಾಲಯದ ಆವರಣದಲ್ಲಿ ಅನುಚಿತ ವರ್ತನೆ; ಒಪ್ಪಿಗೆ ಇಲ್ಲದೆ ಯುವತಿಯ ಫೋಟೊ ಕ್ಲಿಕ್ಕಿಸಿದ ಮಧ್ಯ ವಯಸ್ಕ

ದೇವಾಲಯದ ಪ್ರಾಂಗಣದಲ್ಲಿ ವ್ಯಕ್ತಿಯೊಬ್ಬ ಯುವತಿಯ ಕಾಲುಗಳ ಫೋಟೊವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನು ತಿಳಿದ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಆವರಣದಲ್ಲಿ ಯುವತಿಯ ಕಾಲಿನ ಫೋಟೊ ಕ್ಲಿಕ್ಕಿಸಿದ ʼಅಂಕಲ್‌ʼ

ಜೈಪುರ: ದೇವಾಲಯದ ಪ್ರಾಂಗಣದಲ್ಲಿ ವ್ಯಕ್ತಿಯೊಬ್ಬ ಯುವತಿಯ ಕಾಲುಗಳ ಚಿತ್ರವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಇದನ್ನು ತಿಳಿದು ತರಾಟೆಗೆ ತೆಗೆದುಕೊಂಡಿದ್ದಾಳೆ. ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ (Rajasthan) ಮೌಂಟ್ ಅಬುವಿನ (Mount Abu) ದಿಲ್ವಾರಾ ಜೈನ ದೇವಾಲಯದಲ್ಲಿ (Dilwara Jain Temple ) ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ತನ್ನ ಕಾಲುಗಳ ಚಿತ್ರವನ್ನು ಸೆರೆ ಹಿಡಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.

ರಾಜಸ್ಥಾನದ ಮೌಂಟ್ ಅಬುವಿನ ದಿಲ್ವಾರಾ ಜೈನ ದೇವಾಲಯದ ಪ್ರಾಂಗಣದಲ್ಲಿ ಯುವತಿಯೊಬ್ಬಳ ಕಾಲುಗಳ ಚಿತ್ರವನ್ನು ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಗೌಪ್ಯವಾಗಿ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನು ತಿಳಿದ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಘಟನೆಯನ್ನು ಯುವತಿಯ ಸ್ನೇಹಿತ ಅನುರಾಗ್ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅನುಮತಿಯಿಲ್ಲದೆ ತನ್ನ ಫೋಟೊಗಳನ್ನು ತೆಗೆದಿರುವುದು ಏಕೆ ಎಂದು ಯುವತಿ ಆತನನ್ನು ಪ್ರಶ್ನಿಸುತ್ತಿರುವುದು ಕಾಣಬಹುದು. ಮೊದಲು ಆತ ಆಕೆಯ ಆರೋಪವನ್ನು ನಿರಾಕರಿಸುತ್ತಾನೆ. ಆದರೆ ಯುವತಿಯ ಒತ್ತಾಯದ ಮೇರೆಗೆ ಆತ ತನ್ನ ಮೊಬೈಲ್ ನಲ್ಲಿ ಫೋನ್ ಗ್ಯಾಲರಿ ತೆರೆದಾಗ ಅದರಲ್ಲಿ ಯುವತಿಯ ಚಿತ್ರವಿರುವುದು ಕಂಡು ಬಂದಿದೆ. ಬಳಿಕ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ವಿಡಿಯೋದಲ್ಲಿ ಯುವತಿ ಅಂಕಲ್ ಇದೇನು? ನೀವು ಏನು ಮಾಡುತ್ತಿದ್ದೀರಿ? ನನ್ನ ಕಾಲಿನ ಫೋಟೋಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿರುವುದು ಕಾಣಬಹುದು.

ನನ್ನ ಸ್ನೇಹಿತೆ ರಾಜಸ್ಥಾನದ ಮೌಂಟ್ ಅಬುವಿನ ಡೆಲ್ವಾಡ ಜೈನ ದೇವಾಲಯದ ಮುಂದೆ ತನ್ನ ಹೆತ್ತವರಿಗಾಗಿ ಕಾಯುತ್ತಾ ಕುಳಿತಿದ್ದಾಗ ನಡೆದ ಘಟನೆ ಇದು. ಒಬ್ಬ ವಯಸ್ಸಾದ ವ್ಯಕ್ತಿ ಅವಳನ್ನೇ ನೋಡುತ್ತಿದ್ದು, ಅವಳ ಒಪ್ಪಿಗೆಯಿಲ್ಲದೆ ಅವಳ ಕಾಲಿನ ಫೋಟೊವನ್ನು ಸಹ ಕ್ಲಿಕ್ಕಿಸಿದನು. ಅವಳು ಅವನನ್ನು ತರಾಟೆಗೆ ತೆಗೆದುಕೊಂಡ ಮೇಲೆ ಆತ ಅದನ್ನು ಡಿಲೀಟ್‌ ಮಾಡಿದ್ದಾನೆ. ಅಲ್ಲಿ ಕುಳಿತಿದ್ದ ಬೇರೆ ಯಾರೂ ಅವಳಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಇದು ಸಾರ್ವಜನಿಕ ಮತ್ತು ಆಧ್ಯಾತ್ಮಿಕ ಸ್ಥಳದಲ್ಲಿ ನಡೆದ ಘಟನೆ ಎಂದು ಹೇಳಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಲಾಗಿದೆ.

ಈ ವಿಡಿಯೊ ನೋಡಿರುವ ಅನೇಕರು ಒಪ್ಪಿಗೆಯಿಲ್ಲದೆ ಫೋಟೊ ತೆಗೆದಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ರಾಜಸ್ಥಾನ ಪೊಲೀಸ್ ಮತ್ತು ಪ್ರವಾಸೋದ್ಯಮ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ತನಿಖೆ ನಡೆಸಿ ಆ ವ್ಯಕ್ತಿಯ ಕೃತ್ಯಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಒಬ್ಬರು ಕಾಮೆಂಟ್ ವಿಭಾಗದಲ್ಲಿ, ಇವನು ಯಾರೊಬ್ಬರ ಗಂಡ, ಯಾರೊಬ್ಬರ ಸಹೋದರ, ಬಹುಶಃ ಯಾರೊಬ್ಬರ ತಂದೆ. ಅವನು ತುಂಬಾ ವಯಸ್ಸಾದವನಾಗಿದ್ದು ಇನ್ನೂ ಮಹಿಳೆಯರನ್ನು ಹೀಗೆ ನೋಡುತ್ತಿರುವುದು ಅಸಹ್ಯಕರ ಎಂದು ಬರೆದಿದ್ದಾರೆ.

ಮತ್ತೊಬ್ಬರು ಇದನ್ನು ನೋಡುತ್ತಿರುವ ಯಾರಿಗಾದರೂ ಈ ವ್ಯಕ್ತಿ ತಿಳಿದಿದ್ದರೆ ದಯವಿಟ್ಟು ಈ ವಿಡಿಯೊವನ್ನು ಅವನ ಮಕ್ಕಳು, ಅವನ ಕುಟುಂಬ ಮತ್ತು ಅವನ ಸ್ನೇಹಿತರಿಗೆ ಕಳುಹಿಸಿ. ಜನರು ಕೆಟ್ಟದಾಗಿ ವರ್ತಿಸುವುದರ ಪರಿಣಾಮಗಳನ್ನು ಮರೆತಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯು ಅವನ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬರು ವಿನಂತಿ ಮಾಡಿದ್ದು, ಇನ್ನೊಬ್ಬರು ಇಂತಹ ವ್ಯಕ್ತಿಯನ್ನು ಈ ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳಿದ್ದಾರೆ.