Viral Video: ಡಾಂಬರು ರಸ್ತೆಗಾಗಿ ಬೇಡಿಕೆಯಿಟ್ಟ ಗರ್ಭಿಣಿಯರು; ಹೀಗೂ ನಡೆಯುತ್ತೆ ಪ್ರತಿಭಟನೆ!
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಖಡ್ಡಿ ಖುರ್ದ್ ಗ್ರಾಮದಲ್ಲಿ ಎಂಟು ಮಂದಿ ಗರ್ಭಿಣಿಯರು ಹೆರಿಗೆಯ ವೇಳೆ ಆಸ್ಪತ್ರೆಗಳಿಗೆ ತಲುಪಲು ಅನುಕೂಲವಾಗುವಂತೆ ಗ್ರಾಮಕ್ಕೆ ಡಾಂಬರು ಹಾಕಿದ ರಸ್ತೆಗಳನ್ನು ಒದಗಿಸಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭಟಿಸಿದ್ದಾರೆ. ಈ ವಿಶಿಷ್ಟ ರೀತಿಯ ಪ್ರತಿಭಟನೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಗಮನವನ್ನು ಮಾತ್ರವಲ್ಲದೆ ಅಧಿಕಾರಿಗಳ ಗಮನವನ್ನೂ ಸೆಳೆದಿದೆ.


ಭೋಪಾಲ್: ಇಂದಿಗೂ ನಮ್ಮಲ್ಲಿ ಕೆಲವೊಂದು ಗ್ರಾಮಗಳಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇದರಿಂದ ಗರ್ಭಿಣಿಯರು, ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಲು ಪರದಾಡುವಂತಾಗಿದೆ. ಹಾಗಾಗಿ ಇತ್ತೀಚೆಗೆ ಮಧ್ಯಪ್ರದೇಶದ ಎಂಟು ಗರ್ಭಿಣಿಯರು ಸೋಶಿಯಲ್ ಮೀಡಿಯಾಗಳ ಮೂಲಕ ಸಿಧಿ ಜಿಲ್ಲೆಯಲ್ಲಿ ತಮ್ಮ ಗ್ರಾಮವಾದ ಖಡ್ಡಿ ಖುರ್ದ್‌ನಿಂದ ಆಸ್ಪತ್ರೆಗಳಿಗೆ ಡಾಂಬರು ಹಾಕಿದ ರಸ್ತೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಇದರಿಂದ ಗರ್ಭಿಣಿಯರಿಗೆ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ ಎಂದು ಗರ್ಭಿಣಿಯರು ಅವಲತ್ತುಕೊಂಡಿದ್ದಾರೆ. ಈ ವಿಶಿಷ್ಟ ರೀತಿಯ ಪ್ರತಿಭಟನೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿ ಮಹಿಳೆಯರು ನಡೆಸಿದ ಪ್ರತಿಭಟನೆ ನೆಟ್ಟಿಗರ ಗಮನವನ್ನು ಮಾತ್ರವಲ್ಲದೆ ಅಧಿಕಾರಿಗಳ ಗಮನವನ್ನೂ ಸೆಳೆದಿದೆ. ಹಾಗಾಗಿ ಸಿಧಿ ಕಲೆಕ್ಟರ್ ಮತ್ತು ಸಂಸದರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸೋಶಿಯಲ್ ಮಿಡಿಯಾಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ಲೀಲು ಶಾ, 2023 ರಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದಳು. "ಮಧ್ಯಪ್ರದೇಶದಿಂದ ನಿಮ್ಮ ಎಲ್ಲಾ 29 ಸಂಸದರನ್ನು ಗೆಲ್ಲುವಂತೆ ಮಾಡಿದ್ದೀವಿ. ನಮಗೆ ಈಗ ರಸ್ತೆ ಸಿಗಬಹುದೇ?" ಎಂದು ಕೇಳಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
O sansad @DrRajesh4BJP ji सड़क बनवा देई न pic.twitter.com/6iOWNz7AmR
— Leela sahu (@Leelasahu_mp) July 3, 2025
ಈ ವೀಡಿಯೊ ಎಲ್ಲರ ಗಮನ ಸೆಳೆದಿದ್ದು, ಸಿಧಿ ಸಂಸದರು ಮತ್ತು ಜಿಲ್ಲಾಧಿಕಾರಿಗಳಿಂದ ಭರವಸೆಗಳು ಸಿಕ್ಕಿದ್ದರೂ, ಒಂದು ವರ್ಷ ಕಳೆದರೂ ಯಾವುದೇ ಪ್ರಗತಿಯಾಗಿಲ್ಲ.ಆಕೆಯ ಹೆರಿಗೆಗೆ ನಿಗದಿತ ದಿನಾಂಕ ಸಮೀಪಿಸುತ್ತಿದ್ದರೂ ಈ ಕಾರ್ಯ ಇನ್ನು ಪೂರ್ತಿಯಾಗಿಲ್ಲ ಎನ್ನಲಾಗಿದೆ.
ಆದರೆ ಬಿಜೆಪಿ ಸಂಸದ ರಾಜೇಶ್ ಮಿಶ್ರಾ ಅವರು ಈ ತುರ್ತುಸ್ಥಿತಿಯನ್ನು ನಿರ್ಲಕ್ಷಿಸಿ, "ಪ್ರತಿ ಹೆರಿಗೆಗೂ ಒಂದು ದಿನಾಂಕವಿರುತ್ತದೆ. ಅದಕ್ಕೂ ಒಂದು ವಾರ ಮೊದಲು ನಾವು ಅದನ್ನು ಪೂರ್ಣಗೊಳಿಸುತ್ತೇವೆ" ಎಂದು ಹೇಳಿದ್ದಾರೆ. "ಅವಳು ಬಯಸಿದರೆ, ಅವಳು ನಮ್ಮ ಬಳಿಗೆ ಬರಬಹುದು. ನಾವು ಆಹಾರ, ನೀರು ಮತ್ತು ಆರೈಕೆಯನ್ನು ಒದಗಿಸುತ್ತೇವೆ. ಈ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸೂಕ್ತವಲ್ಲ" ಎಂದು ಅವರು ಸೂಚಿಸಿದ್ದಾರೆ.
ಹಾಗೂ ರಸ್ತೆಯ ಸ್ಥಿತಿಯಿಂದಾಗಿ ಹೆರಿಗೆ ವಿಳಂಬವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಹೆಲಿಕಾಪ್ಟರ್‌ಗಳು, ವಿಮಾನಗಳು, ಆಂಬ್ಯುಲೆನ್ಸ್‌ಗಳು ಮತ್ತು ಆಶಾ ಕಾರ್ಯಕರ್ತರು ಲಭ್ಯವಿದೆ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯ ಅನುಮತಿಗಳು ಬಾಕಿ ಉಳಿದಿರುವುದು ವಿಳಂಬಕ್ಕೆ ಕಾರಣ ಎಂದು ದೂಷಿಸಿದ್ದಾರೆ. ಆದರೆ ರಸ್ತೆ ನಿರ್ಮಾಣಕ್ಕೆ ಯಾವುದೇ ಗಡುವನ್ನು ನೀಡಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ಪ್ರವಾಸಿ ತಾಣದಲ್ಲಿ ಸ್ಟಂಟ್ ಮಾಡಿದ ಯುವಕರು; 300 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು
ಹಾಗೇ ಲೋಕೋಪಯೋಗಿ ಇಲಾಖೆ ಸಚಿವ ರಾಕೇಶ್ ಸಿಂಗ್ ಕೂಡ ಪ್ರತಿಭಟನೆಯನ್ನು ತಳ್ಳಿಹಾಕಿದರು, "ಯಾರಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿದರೆ, ನಾವು ಡಂಪರ್ ಅಥವಾ ಸಿಮೆಂಟ್ ಕಾಂಕ್ರೀಟ್ ಪ್ಲಾಂಟ್ ಮೂಲಕ ತಲುಪುತ್ತೇವೆಯೇ? ಇದು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.ವೈರಲ್ ಆದ ಪ್ರತಿಭಟನೆಗಳು ಮತ್ತು ಪದೇ ಪದೇ ಮನವಿಗಳ ಹೊರತಾಗಿಯೂ, ಮೂಲಭೂತ ರಸ್ತೆಗಾಗಿ ಮಾಡಿದ ಪ್ರಯತ್ನಗಳು ಈಡೇರಿಲ್ಲ ಎನ್ನಲಾಗಿದೆ.