Viral Video: ಅಬ್ಬಾ... ಎದೆ ಝಲ್ಲೆನ್ನುತ್ತೆ ಈ ವಿಡಿಯೊ ನೋಡಿದ್ರೆ! ವೃದ್ಧನ ಮೇಲೆ ಕುಸಿದ ಗೋಡೆ
Wall Collapses Farmer Dies: ಪಾದಚಾರಿ ಗೋಡೆ ಕುಸಿದು 60 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾದ ದುರ್ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಸೈಕಲ್ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಗೋಡೆ ಕುಸಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಭಾರಿ ಮಳೆಯಿಂದ ಗೋಡೆ ಕುಸಿದಿರಬಹುದು ಎನ್ನಲಾಗಿದೆ.

-

ಮಾನ್ಸಾ: ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಪಾದಚಾರಿ ಗೋಡೆ ಕುಸಿದು (Wall Collapse) 60 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾದ ದುರ್ಘಟನೆ ಪಂಜಾಬ್‌ನ (Panjab) ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ನಡೆದಿದೆ. ಸೈಕಲ್ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಪಾದಚಾರಿ ಗೋಡೆ ಕುಸಿದಿದೆ. ಭಾರಿ ಮಳೆಯಿಂದ ಗೋಡೆ ಕುಸಿದಿರಬಹುದು ಎನ್ನಲಾಗಿದೆ.
ಈ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 60 ವರ್ಷದ ವ್ಯಕ್ತಿಯು ರೈತನಾಗಿದ್ದು, ಜಗಜೀವನ್ ಎಂದು ಗುರುತಿಸಲಾಗಿದೆ. ಅವರು ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದರು. ಸ್ಪೀಡ್ ಬ್ರೇಕರ್ ದಾಟುತ್ತಿದ್ದಾಗ, ರಸ್ತೆಯ ಪಕ್ಕದ ಗೋಡೆ ಇದ್ದಕ್ಕಿದ್ದಂತೆ ಅವರ ಮೇಲೆ ಕುಸಿದು ಬಿದ್ದು, ಅವರು ದುರಂತವಾಗಿ ಸಾವನ್ನಪ್ಪಿದರು. ಈ ಮನಕಲಕುವ ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಈ ವಿಡಿಯೊವನ್ನು @thind_akashdeep ಅವರು ಪೋಸ್ಟ್ ಮಾಡಿದ್ದಾರೆ. ನಿರಂತರ ಮಳೆಯಿಂದಾಗಿ ಮಾನ್ಸಾದ ಜಾವರ್ಕೆ ಗ್ರಾಮದಲ್ಲಿ ಗೋಡೆ ಕುಸಿದು 60 ವರ್ಷದ ರೈತ ಜಗಜೀವನ್ ಪ್ರಾಣ ಕಳೆದುಕೊಂಡರು. ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಶೀರ್ಷಿಕೆ ನೀಡಲಾಗಿದೆ. ಇದು ತುಂಬಾ ದುಃಖಕರ ವಿಷಯ. ಸರ್ಕಾರದಿಂದ ನಾಗರಿಕರು ಏನನ್ನು ನಿರೀಕ್ಷಿಸಬಹುದು? ಇದು ನಾಚಿಕೆಗೇಡಿನ ಸಂಗತಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
A 60-year-old farmer, Jagjeevan, lost his life in Jawarke village, Mansa, after a wall collapsed due to continuous rainfall. The victim was trapped under the debris and died on the spot.#PunjabFloods2025 pic.twitter.com/9ilMNvoCym
— Akashdeep Thind (@thind_akashdeep) August 31, 2025
ಜೀವನ ತುಂಬಾ ಅನಿರೀಕ್ಷಿತ. ನಾವು ಹೆಚ್ಚಿನ ಸಮಯ ಅದರ ಬಗ್ಗೆ ಆ ರೀತಿ ಯೋಚಿಸುವುದಿಲ್ಲ. ಹೀಗಾಗಿ ಎಲ್ಲರೊಂದಿಗೆ ಆತ್ಮೀಯವಾಗಿರಿ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಸರ್ಕಾರದ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ. ಭಾನುವಾರ ಮಧ್ಯಾಹ್ನ ಶಿವ ಸಿಟಿ ಕಾಲೋನಿ ಬಳಿಯ ಸ್ಮಾರ್ಟ್ ಸಿಟಿ 3 ಕಾಲೋನಿಯಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್‌ನ ಗೋಡೆ ಕುಸಿದು ಮೂವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿರಂತರ ಮಳೆಯಿಂದಾಗಿ ಕುಸಿದು, ಈ ದುರಂತ ಸಂಭವಿಸಿದೆ. ರಾಜೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: Viral Video: ಬ್ಯಾಂಕ್ ಮ್ಯಾನೇಜರ್ ಮೇಲೆ ಮುಸುಕುಧಾರಿಗಳಿಂದ ಹಲ್ಲೆ